ಮೈಸೂರು: ಪರಿಸರ ಸ್ನೇಹಿ ತಂಡ ಮತ್ತು ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಸೈಕಲ್ ಅಭಿಯಾನವನ್ನು ಮಾರ್ಚ್ 20 ರಂದು ಬೆಳಗ್ಗೆ 7ರಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕುಕ್ಕರಹಳ್ಳಿ ಕೆರೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಬೇಸಿಗೆಯಲ್ಲಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳನ್ನು ಬಿಸಿಲಿನ ತಾಪಮಾನದಿಂದ ಸಂರಕ್ಷಿಸಲು ಆಹಾರ ನೀರು ಒದಗಿಸುವಂತೆ ನಾಗರಿಕರಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಸರ ಸೈಕಲ್ ಜಾಗೃತಿ ಅಭಿಯಾನ ಮಾಹಿತಿಯ ಪ್ರಚಾರ ಸಾಮಗ್ರಿಗಳನ್ನು ವಿಶ್ವವಿದ್ಯಾಲಯ ಆವರಣದಲ್ಲಿ ವಿಶ್ವವಿದ್ಯಾಲಯ ಕುಲಪತಿ ಪ್ರೊ ಹೇಮಂತ್ ಕುಮಾರ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿ ತಾಪಮಾನ ಹೆಚ್ಚುವದರಿಂದ ನೀರಿನ ಆಹಾಕಾರ ಎಲ್ಲೆಡೆ ಕಂಡುಬರುತ್ತದೆ. ಮನುಷ್ಯರಿಗೆ ಮಾತ್ರವಲ್ಲದೇ ಮಾತುಬಾರದ ಮೂಕ ಪ್ರಾಣಿಗಳೂ ನೀರಿಗಾಗಿ ಪರಿತಪಿಸುತ್ತಿರುತ್ತವೆ. ಇಂದಿನ ಕಾಲದಲ್ಲಿ ರಾಜ ಮಹಾರಾಜರು ನೀರಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವುದರ ಜೊತೆಗೆ ರಸ್ತೆ ಬದಿಯಲ್ಲಿ ಗಿಡ ಮರಗಳನ್ನು ನೆಟ್ಟು ನೀರಿನ ಅರವಟ್ಟಿಗೆಗಳನ್ನು ಇಡುತ್ತಿದ್ದರು ಎಂಬುವುದನ್ನು ಇತಿಹಾಸದ ಶಾಸನಗಳಿಂದ ತಿಳಿಯುತ್ತದೆ. ಆದರೆ ಇಂದು ಕೆರೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗುತ್ತಿವೆ ಅದಕ್ಕೆ ಕಾರಣ ಮಾನವ ತನ್ನ ದುರಾಸೆಗಳಿಗಾಗಿ ಕಾಡು ಗಿಡ ಮರಗಳನ್ನು ಕಡಿಯುತ್ತಿರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಭೂಮಿಯಲ್ಲಿ ನೀರಿನ ಪ್ರಮಾಣವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಕಡೆ ಯುವಪೀಳಿಗೆ ಮುಂದಾಗಬೇಕು ನಮ್ಮೆಲ್ಲರ ಮನೆಯ ಛಾವಣೆಯಲ್ಲಿ ನೀರು ಆಹಾರ ಕೊಟ್ಟು ಸಣ್ಣಪುಟ್ಟ ಪ್ರಾಣಿಪಕ್ಷಿಗಳಿಗೆ ಆಸರೆಯಾಗೋಣ ಇವರ ಸೈಕಲ್ ಜಾಥಾ ಅಭಿಯಾನ ಯಶಸ್ವಿಯಾಗಲಿ ಎಂದರು.
ಸೈಕಲ್ ಜಾಥಾಗೆ ಭಾಗಿಯಾಗುವವರಿಗೆ ಉಚಿತವಾಗಿ ಟಿ ಶರ್ಟ್ ನೀಡಲಾಗುವುದು ಜಾಥಾಗೆ ಭಾಗವಹಿಸುವವರು 8105078070/9880752727
ಇದೇ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ,ಮುಖ್ಯ ಅಧಿಕಾರಿ ಚೇತನ್ , ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್ ,ಅಜಯ್ ಶಾಸ್ತ್ರಿ ,ರಾಕೇಶ್ ಕುಂಚಿಟಿಗ ,ದುರ್ಗಾಪ್ರಸಾದ್ , ಮಂಜುನಾಥ್ ಹಾಗೂ ಇನ್ನಿತರರು ಹಾಜರಿದ್ದರು.