ಮನೆ ಮನರಂಜನೆ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಫಿದಾ

‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಫಿದಾ

0

ಬೆಂಗಳೂರುಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಾಜ್ ಬಿ ಶೆಟ್ಟಿಗೆ ಮತ್ತು ರಿಷಬ್ ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೆಚ್ಚಿ ಟ್ವೀಟ್ ಮಾಡಿದ್ದಾರೆ.

ಇಡೀ ಸಿನಿಮಾಕ್ಕೆ ಫಿದಾ ಆಗಿರುವ ಆರ್ ಜಿವಿ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಶಹಬ್ಬಾಸ್ಗಿರಿ  ನೀಡಿದ್ದಾರೆ.

ಚಿತ್ರವನ್ನು, ರಾಜ್ ಬಿ ಶೆಟ್ಟಿ ಅಭಿನಯವನ್ನು ಒಂದಷ್ಟು ವಿಜ್ಞಾನ ಪದಗಳಲ್ಲಿ ಬಣ್ಣಿಸಿದ್ದಾರೆ. ಸಿನಿಮಾ ಮತ್ತೊಂದು ಲೆವೆಲ್ ನಲ್ಲಿದೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ ಹೊಂದಿದ್ದಾರೆ ಇಡೀ ಚಿತ್ರ ‘ಅಲ್ಟ್ರಾಸ್ಕೋಪಿಕ್’ ಎಂದು ರಾಮ್ ಗೋಪಾಲ್ ವರ್ಮಾ ಹೊಗಳಿದ್ದಾರೆ.