ಮನೆ ಸ್ಥಳೀಯ ಅಕ್ರಮದ ಚಟುವಟಿಕೆಗಳ ಕುರಿತಂತೆ ಸಾರ್ವಜನಿಕರಿಂದ ದೂರು ಸ್ವೀಕಾರಕ್ಕೆ ನಿಯಂತ್ರಣ ಕೊಠಡಿಗಳ ಸ್ಥಾಪನೆ

ಅಕ್ರಮದ ಚಟುವಟಿಕೆಗಳ ಕುರಿತಂತೆ ಸಾರ್ವಜನಿಕರಿಂದ ದೂರು ಸ್ವೀಕಾರಕ್ಕೆ ನಿಯಂತ್ರಣ ಕೊಠಡಿಗಳ ಸ್ಥಾಪನೆ

0

ಮೈಸೂರು:- ಲೋಕಸಭಾ ಚುನಾವಣೆ-2024 ರ ಸಾರ್ವತ್ರಿಕ ಚುನಾವಣೆಯ ಸಂಬoಧ ಅಕ್ರಮವಾಗಿ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ, ವಿತರಣೆ ಇನ್ನಿತರ ಅಬಕಾರಿ ಅಕ್ರಮದ ಚಟುವಟಿಕೆಗಳ ಕುರಿತಂತೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು ಅಥವಾ ಮಾಹಿತಿಗಳನ್ನು ಸ್ವೀಕರಿಸಲಾಗುತ್ತದೆ.

ಕೂಡಲೇ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೆಸ್, ಮೈಸೂರು ಗ್ರಾಮಾಂತರ ಜಿಲ್ಲೆಯನ್ನೊಳಗೊಂಡoತೆ ಪ್ರತಿ ತಾಲ್ಲೂಕಿನದ್ಯಾಂತ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಾಗಿದ್ದು, ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ದೂ.ಸಂ: 0821-2529084 ಮತ್ತು 1800-4259184, ನಂಜನಗೂಡು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ದೂ.ಸಂ: 08227-200102 ಮತ್ತು 90354-44444, ಹುಣಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ದೂ.ಸಂ: 08222-252434 ಮತ್ತು 96203-79070, ನಂಜನಗೂಡು ವ್ಯಾಪ್ತಿಯ ಅಬಕಾರಿ ನಿರೀಕ್ಷಕರ ದೂ.ಸಂ: 08221-200165 ಮತ್ತು 98804-04148, ತಿ.ನರಸೀಪುರ ವ್ಯಾಪ್ತಿಯ ಅಬಕಾರಿ ನಿರೀಕ್ಷಕರ ದೂ.ಸಂ: 08227-261674 ಮತ್ತು 90086-29997, ಹುಣಸೂರು ವ್ಯಾಪ್ತಿಯ ಅಬಕಾರಿ ನಿರೀಕ್ಷಕರ ದೂ.ಸಂ: 08222-251690 ಮತ್ತು 95915-87830, ಕೆ.ಆರ್. ನಗರ ವ್ಯಾಪ್ತಿಯ ಅಬಕಾರಿ ನಿರೀಕ್ಷಕರ ದೂ.ಸಂ: 08223-264801 ಮತ್ತು 99862-67795, ಪಿರಿಯಾಪಟ್ಟಣ್ಣ ವ್ಯಾಪ್ತಿಯ ಅಬಕಾರಿ ನಿರೀಕ್ಷಕರ ದೂ.ಸಂ: 08223-297373 ಮತ್ತು 98457-29018, ಹೆಚ್.ಡಿ ಕೋಟೆ ವ್ಯಾಪ್ತಿಯ ಅಬಕಾರಿ ಇನ್ಸ್ಪೆಕ್ಟರ್‌ರವರ ದೂ.ಸಂ: 08228-297195 ಮತ್ತು 78294-38528, ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‌ಪೋಸ್ಟ್ನ ದೂ.ಸಂ: 96866-59889 ಗಳನ್ನು ಸ್ಥಾಪಿಸಲಾಗಿದೆ.

ಚುನಾವಣೆ ಪ್ರಕ್ರಿಯೆ ಮುಗಿಯುವವರೆವಿಗೂ ತಾತ್ಕಾಲಿಕವಾಗಿ ‘ಅಬಕಾರಿ ಇಲಾಖೆಗೆ ಟೋಲ್ ಫ್ರೀ ಸಂಖ್ಯೆ: 18004259184’ ನ್ನು ಸಹ ಪಡೆಯಲಾಗಿದ್ದು, ಅಬಕಾರಿ ಇಲಾಖೆಗೆ ಸಂಬoಧಪಟ್ಟoತೆ ಯಾವುದೇ ದೂರು ಅಥವಾ ಮಾಹಿತಿಗಳಿದ್ದರೂ ಮೇಲ್ಕಂಡ ಟೋಲ್ ಫ್ರೀ ದೂರವಾಣಿ ಸಂಖ್ಯೆಗಳಿಗೆ ಅಥವಾ ಸಂಬoಧಪಟ್ಟ ವ್ಯಾಪ್ತಿಯ ನಿಯಂತ್ರಣ ಕೊಠಡಿಗಳಿಗೆ ಅಥವಾ ಅಧಿಕಾರಿಗಳಿಗೆ ಕರೆ ಮಾಡಬಹುದಾಗಿರುತ್ತದೆ ಎಂದು ಮೈಸೂರು ಗ್ರಾಮಾಂತ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಸ್  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಗ್ರಾಮಗಳ ನೀರಿನ ಪರಿಸ್ಥಿತಿ ಅವಲೋಕಿಸಲು ಎರಡು ಸೋಮವಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ: ಪ್ರಿಯಾಂಕ್‌ ಖರ್ಗೆ
ಮುಂದಿನ ಲೇಖನಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ವಾರಣಾಸಿಯಿಂದ ನರೇಂದ್ರ ಮೋದಿ ಸ್ಪರ್ಧೆ