ಮನೆ ರಾಜ್ಯ ಒತ್ತುವರಿ ತೆರವು: ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿರುವ ಸರ್ಕಾರ- ರಾಮಲಿಂಗಾರೆಡ್ಡಿ

ಒತ್ತುವರಿ ತೆರವು: ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿರುವ ಸರ್ಕಾರ- ರಾಮಲಿಂಗಾರೆಡ್ಡಿ

0

ಬೆಂಗಳೂರು(Bengaluru): ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡ್ತಿದ್ದಾರೆ  ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಒತ್ತುವರಿ ತೆರವು ಮಾಡಲಿ,ಮಾಡಿ ಅಂತನೇ ನಾವೂ ಹೇಳ್ತಿದ್ದೇವೆ. ಆದರೆ ನಿಷ್ಪಕ್ಷಪಾತವಾಗಿ ಒತ್ತುವರಿ ತೆರವು ಆಗಲಿ ಎಂದು ಒತ್ತಾಯಿಸಿದರು.
ಒತ್ತುವರಿ ತೆರವಿಗೆ ಯಾರು ಏನೂ ಅಡ್ಡಿ ಮಾಡ್ತಿಲ್ಲ. ನಮ್ಮ ಅವಧಿಯಲ್ಲಿ 1953 ಒತ್ತುವರಿ ಇತ್ತು. ಈ ಪೈಕಿ 1300 ಒತ್ತುವರಿಗಳನ್ನು ತೆರವುಗೊಳಿಸಿದ್ದೇವೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಸಾರಕ್ಕಿ ಭಾಗದಲ್ಲಿ ತೆರವು ಮಾಡುವಾಗ ಬಿಜೆಪಿ ವಿಧಾನ ಪರಿಷತ್ ಸದಸ್ಯರು, ವಿಧಾನ ಸಭಾ ಸದಸ್ಯರು ವಿರೋಧ ಮಾಡಿದ್ದರು. ಹಳೇ ಬೆಂಗಳೂರು ಭಾಗದಲ್ಲಿ ಪ್ರವಾಹ ಆಗ್ತಿಲ್ಲ, ಹೊಸ ಬೆಂಗಳೂರು ಭಾಗದಲ್ಲಿ ಪ್ರವಾಹ ಆಗ್ತಿದೆ. ಕಳೆದ 3ವರ್ಷದಿಂದ ಒಂದೂ ಒತ್ತುವರಿ ತೆರವು ಮಾಡ್ಲಿಲ್ಲ. ಯಾರು ಕಾಲದಲ್ಲಿ ಏನಾಗಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ ವಿಚಾರವಾಗಿ ಮಾತನಾಡಿ, ಮತಾಂತರ ನಿಷೇಧ ಕಾಯ್ದೆ ಬಗ್ಗೆ ನನಗೆ ಗೊತ್ತಿಲ್ಲ, ಪಕ್ಷದ ಸ್ಟ್ಯಾಂಡ್ ನ ಪರಿಷತ್ ನಲ್ಲಿ ತಗೋತಾರೆ ಎಂದರು.

ಹಿಂದಿನ ಲೇಖನಸಿಜೆಐ ಲಲಿತ್ ನೇತೃತ್ವದಲ್ಲಿ 13 ದಿನಗಳಲ್ಲಿ 5,000ಕ್ಕೂ ಹೆಚ್ಚು ಪ್ರಕರಣ ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್‌
ಮುಂದಿನ ಲೇಖನಗೋವಾ:  ಬಿಜೆಪಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ವಿಲೀನಕ್ಕೆ ಸ್ಪೀಕರ್ ಒಪ್ಪಿಗೆ