ಮನೆ ಅಪರಾಧ ಮಾಜಿ ನೌಕಾಧಿಕಾರಿಗಳಿಗೆ ಮೋಸ: ಮಹಿಳಾ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರ ಬಂಧನ

ಮಾಜಿ ನೌಕಾಧಿಕಾರಿಗಳಿಗೆ ಮೋಸ: ಮಹಿಳಾ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರ ಬಂಧನ

0

ಆಂಧ್ರ ಪ್ರದೇಶ: ನಿವೃತ್ತ ನೌಕಾಧಿಕಾರಿಗಳು ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುವ ಆರೋಪದ ಮೇಲೆ ಮಹಿಳಾ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಲಾಗಿದೆ ಎಂದು ವರದಿಯಾಗಿದೆ.                 

Join Our Whatsapp Group

ಬಂಧಿತರು ರಿಸರ್ವ್ ಇನ್ಸ್ಪೆಕ್ಟರ್ ಬಿ. ಸ್ವರ್ಣಲತಾ, ಪೊಲೀಸ್ ಕಾನ್ಸ್ ಸ್ಟೇಬಲ್ ಹೇಮಸುಂದರ್, ಹೋಮ್ ಗಾರ್ಡ್ ಬಿ. ಶ್ರೀನಿವಾಸ್ ಮತ್ತು ಮಧ್ಯವರ್ತಿ ವಿ. ಸುರಿಬಾಬು ಎಂಬ ಮಾಹಿತಿ ಇದೆ.

ಮಧ್ಯವರ್ತಿ ಸೂರಿ ಬಾಬು, 500 ರೂ.ನೋಟು ನೀಡಿದರೆ ಅದಕ್ಕೆ ಬದಲಾಗಿ 2,000 ನೋಟಿನ ಲಾಭವನ್ನು ಪಡೆಯಬಹುದು. ನಿಮ್ಮ ನಿವೃತ್ತಿ ಅವಧಿಯ ಸಂಪೂರ್ಣ ಹಣವನ್ನು 500 ರೂ.ನೋಟಿನ ರೂಪದಲ್ಲಿ ನೀಡಿ ಆಗ ನಿಮಗೆ 1 ಕೋಟಿ ರೂ. ಮೌಲ್ಯದ 2000ರೂ. ನೋಟುಗಳನ್ನು ನೀಡಲಾಗುವುದು. ಬರೋಬ್ಬರಿ 10 ಲಕ್ಷ ರೂ. ಲಾಭ ಸಿಗಲಿದೆ ಎಂದು ನಂಬಿಸಿದ್ದಾರೆ.  

ಆತನ ಮಾತನ್ನು ನಂಬಿದ ನೌಕಾಧಿಕಾರಿಗಳು ಹಣ ನೀಡಲು ಒಪ್ಪಿಕೊಂಡಿದ್ದಾರೆ. ಹಣವನ್ನು ಕೊಡುವ ದಿನ ಇನ್ಸ್ಪೆಕ್ಟರ್ ಸ್ವರ್ಣಲತಾಗೆ ಸೂರಿ ಬಾಬು ಈ ವಿಷಯ ತಿಳಿಸುತ್ತಾನೆ. ನೌಕಾಧಿಕಾರಿಗಳು ಇನ್ನೇನು ಹಣವನ್ನು ಸುರಿಬಾಬುಗೆ ನೀಡಬೇಕು ಎನ್ನುವಷ್ಟರಲ್ಲಿ ಸ್ವರ್ಣಲತಾ, ತಮ್ಮ ತಂಡದೊಂದಿಗೆ ಬಂದು ಹಣವನ್ನು ಸೀಸ್ ಮಾಡುತ್ತಾರೆ.       

ಹಣ ವಶಕ್ಕೆ ಪಡೆದ ಬಳಿಕ ಸ್ವರ್ಣಲತಾ ಅವರ ತಂಡ ಮಧ್ಯವರ್ತಿ ಸೂರಿ ಬಾಬುಗೆ ಥಳಿಸುತ್ತಾರೆ. ಈ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡುವುದಾಗಿ ಸ್ವರ್ಣ ಲತಾ ಬೆದರಿಕೆ ಹಾಕುತ್ತಾರೆ. ಇದರಿಂದ ಹೆದರಿದ ನಿವೃತ್ತ ನೌಕಾಧಿಕಾರಿಗಳು ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ಒಪ್ಪುತ್ತಾರೆ.            

ಮಾಜಿ ನೌಕಾಧಿಕಾರಿಗಳು ಸ್ಥಳದಿಂದ ಹೋಗುತ್ತಿದ್ದಂತೆ ಇನ್ಸ್ಪೆಕ್ಟರ್ ಸ್ವರ್ಣ ಲತಾ, ಪೊಲೀಸ್ ಕಾನ್ಸ್ ಟೇಬಲ್, ಹೋಂ ಗಾರ್ಡ್ಸ್ ಮತ್ತು ಮಧ್ಯವರ್ತಿಗಳು ಹಣವನ್ನು ಹಂಚಿಕೊಳ್ಳುತ್ತಾರೆ.              

 ಈ ಘಟನೆಯಲ್ಲಿ ಹಣ ಕಳೆದುಕೊಂಡ ಮಾಜಿ ನೌಕಾಧಿಕಾರಿಗಳು ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ನಾಲ್ವರು ಆರೋಪಿಗಳು ಬಂಧಿಸಲಾಗಿದೆ ಎಂದು ವರದಿಯಾಗಿದೆ.