ಮನೆ ಪೌರಾಣಿಕ ಸೃಷ್ಟಿ ಸ್ವರೂಪದ ವಿವರಣೆ

ಸೃಷ್ಟಿ ಸ್ವರೂಪದ ವಿವರಣೆ

0

     ಆಗ ಪರಾಶರರು “ಮೈತ್ರೇಯಾ! ಶ್ರೀ ಹರಿಯು ಸೃಷ್ಟಿಸಿದ ಈ ಸಮಸ್ತ ಭೂಮಂಡಳದಲ್ಲಿ ಜಂಬೂದ್ವೀಪ, ಪ್ಲಕ್ಷದ್ವೀಪ, ಶಾಲ್ಮಲ ದ್ವೀಪ, ಕುಶ ದ್ವೀಪ, ಕ್ರೌಂಚದ್ವೀಪ, ಶಾಕದ್ವೀಪ, ಪುಷ್ಕರದ್ವೀಪ ಇತ್ಯಾದಿ ಸಪ್ತದ್ವೀಪಗಳಿವೆ. ಈ ದ್ವೀಪಗಳನ್ನು ಸುತ್ತುವರಿದು ಏಳು, ಮಹಾಸಮುದ್ರಗಳಿವೆ.

Join Our Whatsapp Group

ಅವು ಲವಣ ಸಮುದ್ರ, ಇಕ್ಷು ವಾರಧಿ, ಸುರಾವಾರಾಶಿ,  ಸರ್ಪಿಪಯೋದಿ ದಧೀಜಲದಿ, ದುಗ್ದಾರ್ಣವ, ಜಲನಿಧಿ ಇವೆಲ್ಲವೂ  ಒಂದಕ್ಕಿಂತಲು ಮತ್ತೊಂದು ಗಾತ್ರದಲ್ಲಿ ದ್ವಿಗುಣ ಪ್ರಮಾಣದಲ್ಲಿವೆ.ಸೃಷ್ಟಿಯಲ್ಲಿ  ನೆಲೆಸಿದ ಸಕಲ ದ್ವೀಪಗಳಿಗೂ ಮಧ್ಯಭಾಗದಲ್ಲಿ ಹಾರದಲ್ಲಿನ ಮಣಿಯಂತೆ ಜಂಬೂದ್ವೀಪವು ಪ್ರಕಟಿಸುತ್ತದೆ. ಇದನ್ನು ಪ್ರಿಯ ವ್ರತನ ಮೊದಲನೇ ಮಗನಾದ ಅಗ್ನಿದ್ರನು  ಆಳುತ್ತಿದ್ದನು ಜಂಬೂ ದ್ವೀಪದ ಮಧ್ಯದಲ್ಲಿ ಕನಕರತ್ನ ಮಾಯವಾದ ಮೇರು ಪರ್ವತವಿದೆ. ಇದರ ಎತ್ತರ 84,000 ಯೋಜನೆಗಳು  . ಮೇರು ಪರ್ವತವು ನಿಂತಿರುವ ಭೂಮಿಯ ಕೆಳಭಾಗದಲ್ಲಿ 14000 ಯೋಜನೆಗಳು ಮೇರು ಪರ್ವತವು ನಿಂತಿರುವ ಭೂಮಿಯ ಕೆಳಭಾಗದಲ್ಲಿ 16,000 ಯೋಜನೆಗಳ ವಿಸ್ತಾರವುಳ್ಳ ಆಧಾರಪೀಠವು ಗಂಭೀತವಾಗಿದೆ.ಮೇರು ಪರ್ವತದಲ್ಲಿ ಎಲ್ಲಕ್ಕಿಂತಲೂ ಸಮುನ್ನತವಾದ ಶೃಂಗಪರ್ತವು 32 ಸಾವಿರ ಯೋಜನೆಗಳ ವಿಸ್ತೀರ್ಣವನ್ನು ಬೆಟ್ಟದ ತುದಿಯು 16000 ಯೋಜನೆಗಳ ವೈಶಾಲ್ಯವನ್ನು ಹೊಂದಿದೆ . ನಾವು ವಾಸಿಸುತ್ತಿರುವ ಈ ಸಮಸ್ತ ಭೂಮಂಡಳವು ಒಂದು ಪದ್ಮ ಕಮಲವಾದರೆ, ಅದಕ್ಕೆ ಕರ್ಣಿಕದಂತೆ ಇರುವ ಮೇರು ಪರ್ವತವು ಯಕ್ಷ ಕಿನ್ನರ, ಗಂಧರ್ವ ಮುನಿಗಣ ದೇವತಾಗಣಗಳಿಗೆ ವಿಹಾರ ನಿಲಯವಾಗಿದೆ. ಮೇರು ಪರ್ವತದ ದಕ್ಷಿಣ ಭಾಗದಲ್ಲಿ ಹಿಮವತ್ಪರ್ವತ ಹೇಮಕೂಟ, ನಿಷದ ಪರ್ವತಗಳು ಇವೆ. ಮೇರು ಪರ್ವತದ ಉತ್ತರ ದಿಕ್ಕಿನಲ್ಲಿ ಅತಿ ವಿಶಾಲವಾದ ನೀಲಾಚಲ, ಶ್ವೇತ ಪರ್ವತ ಶೃಂಗಭೂಧರಗಳಿವೆ. ಪರಸ್ಪರ ಅಭಿಮುಖವಾಗಿ ನಿಂತಿರುವ ಈ ಪರ್ವತಗಳ ನಡುವೆ ಯಿರುವ ಪ್ರದೇಶವು ಅನೇಕ ಶತಸಹಸ್ರ ಯೋಜನೆಗಳಿಗೆ ವಿಸ್ತರಿಸಿದೆ. ಈ ಮೂರು ಪರ್ವತಗಳು ಒಂದೊಂದು ಎರಡು ಸಾವಿರ ಯೋಜನೆಗಳ ಎತ್ತರ ಹಾಗೂ ಅಗಲವನ್ನು ಹೊಂದಿವೆ.

      ಹಿಮವತ್ಪರ್ವತದ  ಶೃಂಗಭೂಧರಗಳ ನಡುವೆ ಮಹಾ ಪ್ರಾಣವನ್ನುಳ್ಳ ಕುಲಪರ್ವತಗಳಿವೆ. ಮೇರು ಪರ್ವತದ ಪೂರ್ವಕ್ಕೆ ದೇವ ಕೂಟ,ಪಶ್ಚಿಮಕ್ಕೆ ಜರಠ ಪರ್ವತಗಳು ನೆಲೆಸಿವೆ. ಮೇರು ಮಹಾಪರ್ವತವು ಕೇಂದ್ರವಾಗಿ ಅದರ ಸುತ್ತಲೂ ಇರುವ ಈ ಶಿಲೋಚ್ಚಯಗಳ ನಡುವೆ ಅನೇಕ ದೇಶಗಳಿವೆ.ಅವುಗಳಿಗೆ ಖಂಡಗಳೆಂದು ಕರೆಯುವರು.ಮೇರು ಪರ್ವತದ ದಕ್ಷಿಣಕ್ಕೆ ಭರತಖಂಡ, ಕಿಂಪುರುಷಖಂಡ, ಹರಿಖಂಡಗಳಿವೆ, ಉತ್ತರಕ್ಕೆ ರಮ್ಯಕ ಖಂಡ, ಹಿರಣ್ಯಯ ಖಂಡ, ಕುರುಖಂಡಗಳು ವಿಸ್ತರಿಸಿವೆ.ಪ್ರಾಗ್ದಿಶೆಯಲ್ಲಿ   ಭದ್ರಾಶ್ವಖಂಡ,ಪಶ್ಚಿಮಕ್ಕೆ ಕೇತು ಮೂಲಾಖಂಡ, ಪಶ್ಚಿಮೋತ್ತರ ದಿಕ್ಕಿನಲ್ಲಿ 9000 ಯೋಜನೆಗಳ ವಿಸ್ತಾರವುಳ್ಳ ಇಲ್ಲ ಇಲಾಮೃತ ಖಂಡವಿದೆ.ಈ ವಿಶಾಲವಾದ ಖಂಡದಲ್ಲಿ ಪೂರ್ವಕ್ಕೆ ಮಂದರಗಿರಿ ಪರ್ವತ, ಪಶ್ಚಿಮಕ್ಕೆ ವಿಪುಲ ಪರ್ವತ,ಉತ್ತರದಲ್ಲಿ ಸುಪಾರ್ಶ್ವವೆಂದು ಹೆಸರನ್ನು ಪಡೆದಿರುವ ಮೇರು ಮಂದರ ಪರ್ವತ ಹಾಗೂ ದಕ್ಷಿಣದಲ್ಲಿ ಗಂಧಮಾಧನ ಪರ್ವತಗಳಿವೆ. ಇವು ತಲಾ ಹತ್ತು ಸಾವಿರ  ಯೋಜನೆಗಳ ವಿಸ್ತರವನ್ನು ಹೊಂದಿರುವಂತಹವು.

      ಈ ನಾಲ್ಕು ಪರ್ವತಗಳ ಮೇಲೆ ಸಾವಿರದ ನೂರು ಯೋಜನೆಗಳ ಪ್ರಮಾಣವುಳ್ಳ ಮಹಾವೃಕ್ಷಗಳು ಅನೇಕವು ಇವೆ. ಗಂಧಮಾಧನ ಪರ್ವತದ ಮೇಲೆ ಜಂಬೂ ವೃಕ್ಷ ಕದಂಬ, ಭೋದಿ ವೃಕ್ಷ, ನ್ಯಗ್ರೋದ ವೃಕ್ಷಗಳಿವೆ.ಅವುಗಳಲ್ಲಿ ಜಂಬೂ ವೃಕ್ಷಕ್ಕೆ ದೊಡ್ಡ ದೊಡ್ಡ ಆನೆ ಗಾತ್ರದ ಪರಿಮಾಣದಲ್ಲಿ ಮಹಾಫಲಗಳು ಬಿಡುತ್ತವೆ.ಈ ವೃಕ್ಷವೂ ಬೆಳೆಯುವ ಪ್ರದೇಶಕ್ಕೆ ಜಂಬೂದ್ವೀಪವೆಂಬ ಹೆಸರಿದೆ. ಜಂಬೂ ವೃಕ್ಷಕ್ಕೆ ಬಿಡುವ ಕಾಯಿಗಳು ಹಣ್ಣಾದ ಮೇಲೆ ನೆಲಕ್ಕೆ ಬಿದ್ದು ಆ ಫಲಗಳ ರಸವು ಪ್ರವಾಹವಾಗಿ ಹರಿದು ಜಂಬೂ ನದಿಯಾಗಿ ಏರ್ಪಟ್ಟಿದೆ. ಅಲ್ಲಿನ ನದಿ ತೀರದ ಭೂಮಿಗಳನ್ನು ತಮ್ಮ ವಾಸಸ್ಥಳಗಳನ್ನಾಗಿ ಮಾಡಿಕೊಂಡಿರುವ ಪ್ರಜೆಗಳು ಆ ನದಿ ಜಲವನ್ನು ಕುಡಿದು ಸಂಪೂರ್ಣ ಆರೋಗ್ಯವಂತರಾದರು. ಈ ಜಲಪಾತ ಮಹಿಮೆಯಿಂದ ಅವರನ್ನು ಹಸಿವು ಬಾಯಾರಿಕೆ, ಮರಣದ ಬಾಧೆಗಳು ಭಾದಿಸುವುದಿಲ್ಲ. ಜಂಬೂ ನದಿಯ ಜಲ ಪ್ರವಾಹವು ಉಭಯ ದಡಗಳನ್ನು ತಾಕಿಕೊಂಡು ಹರಿಯುತ್ತಿದ್ದಾಗ ತಂಣ್ಣನೆಯ ಗಾಳಿಗೆ ನದೀ ತೀರದ ಪ್ರದೇಶಗಳಲ್ಲಿಯೂ ಈ ಆರು ಹರಿದು ನೀಲಿ ಬಣ್ಣಕ್ಕೆ ತಿರುಗುತ್ತಿದ್ದರಿಂದ ಈ ಪ್ರದೇಶಕ್ಕೆ ಜಾಂಬೂನದವೆಂಬ ಹೆಸರು ಬಂದಿತು. ಮೇರು ಪರ್ವತದ ಫ್ಯಾಕ್ಟಶ್ಚಿಮಗಳಲ್ಲಿ ಭದ್ರಾಶ್ವ ಕೇತು ಮಾಲರು ರಾಜ್ಯಗಳನ್ನು ಸ್ಥಾಪಿಸಿದರು.ಇವುಗಳ ನಡುವೆ ಯಿರುವ ಈ ಭಾಗದಲ್ಲಿ ಮೇರು ಪರ್ವತದ ಬಳಿಯಲ್ಲಿರುವುದು ಇಲಾವೃತ್ತರ ದೇಶ. ಇದರ ಪೂರ್ವಕ್ಕೆ ಚೈತ್ರ ರಥವುವನವೂ ಉತ್ತರಭಿಮುಖವಾಗಿ ದೇವೇಂದ್ರನ ವಿಹಾರ ಸ್ಥಳವಾದ ನಂದನವನವೃ ಇದೆ. ದಕ್ಷಿಣದಲ್ಲಿ ಗಂಧಮಾಧನ ವನ,ಪಶ್ಚಿಮದಲ್ಲಿ ವೈಬ್ರಾಜಿತ ವನಗಳು ನೆಲೆಸಿವೆ. ವೈಬ್ರಾಜಿತವನದ ಸಮೀಪದಲ್ಲಿ ಅರುಣೋದ, ಮಹಾಭದ್ರ, ಸಿತೋದಗಳ  ನಂತರ ಮಾನಸ ಸರೋವರವಿದೆ.ಈ ನಾಲ್ಕು ಸರಸ್ಸುಗಳಲ್ಲಿ ದೇವತೆಗಳು ಜಲ ಕ್ರೀಡೆಯಾಡಲು ಬರುತ್ತಾರೆ. ಇವಲ್ಲದೇ  ಮೇರು ಕರ್ಣಿಕಕ್ಕೆ ಕೇಸರಿಗಳಂತೆ ಇನ್ನೂ ಅನೇಕ ಮಹಾದ್ರಿಗಳು ಭೂಮಿಯನ್ನು ಸೇರಿಸಿಕೊಂಡು ಹೊರಗೆ ಬಂದಿವೆ,ಪೂರ್ವದಲ್ಲಿ ಸೀತಾಂತ ಪರ್ವತ,ಮುಕುಂದಾಚಲ, ಕುರರೀ ಪರ್ವತ, ಮಾಲ್ಯವಂತಾಚಲಗಳಿವೆ. ಇವುಗಳಿಗೆ ದಕ್ಷಿಣ ದೇಶದಲ್ಲಿ ತ್ರಿಕೂಟ ಪರ್ವತ, ಶಿಶಿರ ಪರ್ವತ, ಪತಂಗ ಪರ್ವತ, ರುಚಿಕ ಪರ್ವತ,ನಿಷದ ಪರ್ವತಗಳು ನಿಲ್ಲಿಸಿವೆ. ಪಶ್ಚಿಮದಲ್ಲಿ ಶಶಿರ ಪರ್ವತ ಪತಂಗಪರ್ವತ, ರುಚಿಕ ಪರ್ವತ,ನಿಷದ ಪರ್ವತಗಳು ನೆಲೆಸಿವೆ, ಪಶ್ಚಿಮದಲ್ಲಿ ಶಶಿರಾ ಪರ್ವತ, ವೈದೂರ್ಯ ಪರ್ವತ,  ಕಪಿಲ ಪರ್ವತ,ಗಂಧಮಾದನ ಪರ್ವತ, ಜಾರುಧಿ  ಪರ್ವತಗಳಿವೆ. ಉತ್ತರಾಭಿಮುಖವಾಗಿ ಶಂಖಕೂಟ, ಋಷಪರ್ವತ,ನಾಗಚಲ,ಹಂಸ ಪರ್ವತ, ಕಾಲಂಜರ ಶೈಲಗಳಿವೆ.

ಮೇರು ಪರ್ವತದ ತುದಿಯ ಮೇಲೆ 14,000 ಯೋಜನೆಗಳ ಪ್ರದೇಶದಲ್ಲಿ ದೇವತೆಗಳ ರಾಜ್ಯಧಾನಿಯಾದ  ಅಮರಾವತಿಯು ಶೋಭಾಯಮನವಾಗಿ ನೆಲೆಸುತ್ತಿದೆ. ಶ್ರೀ ಮಹಾವಿಷ್ಣುವಿನ ಪಾದಕಮಲಗಳಿಂದ ಜನಿಸಿ ಶಶಾಂಕ ಮಂಡಲವನ್ನು ನೆನೆಸುತ್ತಾ ಮೇರು ಪರ್ವತದ ಮೇಲಕ್ಕೆ ಇಳಿದು ಬಂದ ಆಕಾಶಗಂಗೆಯು ಈ ಅಮರಾವತಿಯ ಬಳಿಯಲ್ಲಿ ನಾಲ್ಕು ಪ್ರವಾಹಗಳಿಗಾಗಿ ಸೀಳಿ ಸೀತ, ಅಲಕನಂದ, ಚೆಕ್ಷುವು  ಭದ್ರಾ ನದಿಗಳಾಗಿ ಪ್ರವೇಶಿಸುತ್ತಿದೆ.

      ಈ ಸ್ರವಂತಿಗಳಲ್ಲಿ.ಸೀತೆಯು ಮೇರು ಪರ್ವತ ಪ್ರಾಚೀ ದಿಶೆಯಲ್ಲಿನ ಪರ್ವತಾಗ್ರಹಗಳಿಂದ ಭದ್ರಾಶ್ವಖಂಡದೊಳಗೆ ಪ್ರವೇಶಿಸಿ ಅಲ್ಲಿ ಸಮುದ್ರೋನ್ಮಖವಾಗಿ ತಿರುಗುತ್ತದೆ.ಅಲಕನಂದ ದಕ್ಷಿಣದ ಕಡೆಗೆ ನಡೆದು ಭಾರತ ಖಂಡದಲ್ಲಿ ಸಪ್ತ ನದಿಗಳಿಗಾಗಿ ಸೀಳಿ  ಕಡಲಲ್ಲಿ ಸಂಗಮಿಸುತ್ತದೆ.ಚಕ್ಷುರ್ ನದಿಯು ಕೇತು  ಮಾಲಾಖಂಡದಿಂದ ಉತ್ತರ ಕುರುಭೂಮಿಗಳಿಂದ ಭದ್ರಾ ನದಿಯು ಹೊಳಗಳಿಗೆ ಸಸ್ಯಶ್ಯಾಮ ಲವನ್ನಾಗಿಸಿ  ಪಯೋಧಿಯಲ್ಲಿ ಬೆರೆಯುತ್ತವೆ. ಈ ರೀತಿಯಾಗಿ ಆಕಾಶಗಂಗೆ ಅಮರಾವತಿ ಸಮೀಪದಲ್ಲಿ ಸೀಳಿ ಹೋಗಿ ಪ್ರತ್ಯಂತ ಪರ್ವತಗಳ ನಡುವೆ ಪ್ರವೇಶಿಸುತ್ತಿದ್ದಾಗ ಸೀತಾದಿ ನದಿಗಳ ಸೌಂದರ್ಯವನ್ನು ನೋಡಿ ಸಂತೋಷ ಪಡಬೇಕು. ಈ ಸ್ಥಳದಲ್ಲಿಯೇ ಸಿದ್ಧಚಾರಣ ಬೃಂದಗಳು ಮುನಿಗಳು ಸಂಚರಿಸುವ ಅನೇಕ ರಮಣೀಯ ವಾಸಗಳಿವೆ. ಲಕ್ಷ್ಮಿದೇವಿ, ಶ್ರೀ ಮಹಾವಿಷ್ಣು, ಅಗ್ನಿ, ಸೂರ್ಯನು ನಿವಾಸಿಸುವ ಪವಿತ್ರ ನಿಲಯಗಳು ಇಲ್ಲಿ ದರ್ಶನವಾಗುತ್ತವೆ ಶ್ರೀ ಮಹಾ ವಿಷ್ಣುವನ್ನು ಭಕ್ತಿ ಶ್ರದ್ದೆಗಳಿಂದ ಆರಾಧಿಸಿದ ಸಚ್ಚರಿತ್ರೆಯುಳ್ಳವರಿಗೆ ಈ ಪುಣ್ಯ ಸ್ಥಳಗಳಲ್ಲಿ ಶಾಶ್ವತ ನಿವಾಸ ಭೋಗ ಭಾಗ್ಯವುಂಟಾಗುತ್ತದೆ. ಪಾಪ ಚಿಂತನೆಗಳೊಂದಿಗೆ ನಿಶ್ಚಿಂತೆಯಾಗಿ ಜೀವನವನ್ನು ಕಳೆದು ದೈವಾರಾಧನೆಯನ್ನು ಬಿಟ್ಟಂತಹ ವಿವೇಕ ಶೂನ್ಯರು 10 ಸಾವಿರ ಜನ್ಮಗಳನ್ನು ಹೆತ್ತರೂ ಈ ಪ್ರದೇಶಗಳ ಬಳಿಗೂ ಸಹ ಬರಲಾರರು .

     ವಾಸುದೇವನು ಒಂದೊಂದು ದೇಶದಲ್ಲಿಯೂ ಒಂದೊಂದು ಕಾಲದಲ್ಲಿಯೂ ನಾಮರೂಪ ವೈಭವಗಳೊಂದಿಗೆ ಲೀಲಾ ಮಾತ್ರನಾಗಿ ಅವತರಿಸುತ್ತಿರುತ್ತಾನೆ.ಶ್ರೀಹರಿ ಭದ್ರಾಶ್ವಖಂಡದಲ್ಲಿ ಹಯಗ್ರೀವ ರೂಪನು.ಕೇತುಮಾಲ ಖಂಡದಲ್ಲಿ ಆತನು ವರಾಹ ರೂಪದಾರಿ. ಭರತ ಖಂಡದಲ್ಲಿ ಕರ್ಮಾವತಾರನು.ಕುರುಖಂಡದಲ್ಲಿ ಮತ್ಸ್ಯಾಕೃತಿಯನ್ನು ಧರಿಸಿದನು ಈ ಸಮಸ್ತ ವಿಶ್ವದಲ್ಲಿ ದೃಶ್ಯ ಗೋಚರವಾದ ಸರ್ವಸ್ವವೆಲ್ಲವೂ ಆ ಪರಂಧಾಮನ ಲೀಲಾ ವಿಲಾಸದ ಪ್ರತೀಕಗಳೇ ಆಗಿದ್ದು ಸಕಲವೂ ಆತನ ಕೃಪೆಯ ವಶವಾದವುಗಳೇ ಆಗಿವೆ.

     ನಾವು ವಾಸಿಸುತ್ತಿರುವ ಈ ಭರತ ಖಂಡದಲ್ಲಿ ಹೊರತುಪಡಿಸಿ, ಕಿಂಪುರುಷಾದಿ ಎಂಟು ಖಂಡಗಳಲ್ಲಿನ ಜೀವರಾಶಿಗೂ ಶ್ರಮೆ, ಆಯಾಸಗಳು ದುಃಖ, ಶ್ಲೋಕ,ಉದ್ವೇಗ, ಕ್ಷುತ್ಪಿಪಾಸಗಳನ್ನು ಅಧಿಗಮಿಸಿ ಅವರು 10-12,000 ವರ್ಷಗಳ ಪರಮ ಆಯುಷ್ಷುನೊಂದಿಗೆ ಜೀವಿಸುತ್ತಾರೆ.ಆ ದೇಶಗಳಲ್ಲಿ ಭೂಮಿಯಲ್ಲಿಯ ಚಿಲುಮೆಯ ನೀರೆ ಹೊರತು ಮಳೆ ಬೀಳುವ ಅವಕಾಶವೇ ಇಲ್ಲ. ಭೌಮೋದಕ ಪಾನವಿಲ್ಲದವರನ್ನು  ಜರಾವ್ಯಾಧಿಗಳು ಭಾದಿಸುವುದಿಲ್ಲ.