ವಿಜಯನಗರ: ವಿಜಯನಗರ ಎಸ್ಪಿ ಹರಿಬಾಬು ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ತೆರೆದು ಹಣಕ್ಕೆ ಬೇಡಿಕೆ ಇಡಲಾಗಿದೆ.
SP ವಿಜಯನಗರ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಎಸ್ಪಿ ಹರಿಬಾಬು ಅವರ ಫೋಟೋವನ್ನು ಡಿಪಿಗೆ ಬಳಸಿಕೊಳ್ಳಲಾಗಿದೆ. ಖಾತೆಯಿಂದ ಸಂದೇಶ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಸಂದೇಶ ಪಡೆದ ವ್ಯಕ್ತಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಇದರಿಂದ ಎಚ್ಚೆತ್ತ ಎಸ್ಪಿ ಹರಿಬಾಬು ಅವರು ಇದು ನಕಲಿ ಖಾತೆಯಾಗಿದ್ದು, ಯಾರೂ ಕೂಡ ಹಣ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ. ನಕಲಿ ಖಾತೆ ಸ್ಥಗಿತಗೊಳಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣ ಸಂಬಂಧ ಓರ್ವನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರ ಬರಬೇಕಿದೆ.
Saval TV on YouTube