ಮನೆ ಮನರಂಜನೆ ಫಾಹದ್‌ ಫಾಸಿಲ್‌ ಮುಖ್ಯ ಭೂಮಿಕೆ ಕಾಣಿಸಿಕೊಳ್ಳುತ್ತಿರುವ ‘ಆವೇಶಮ್’ ಸಿನಿಮಾದ ಟೀಸರ್‌ ರಿಲೀಸ್

ಫಾಹದ್‌ ಫಾಸಿಲ್‌ ಮುಖ್ಯ ಭೂಮಿಕೆ ಕಾಣಿಸಿಕೊಳ್ಳುತ್ತಿರುವ ‘ಆವೇಶಮ್’ ಸಿನಿಮಾದ ಟೀಸರ್‌ ರಿಲೀಸ್

0

ಕೊಚ್ಚಿ: ಮಾಲಿವುಡ್‌ ಸಿನಿರಂಗದ ಖ್ಯಾತ ನಟ ಫಾಹದ್‌ ಫಾಸಿಲ್‌ ಅವರ ಸಿನಿಮಾಕ್ಕೆ ಪ್ರತ್ಯೇಕ ಪ್ರೇಕ್ಷಕರ ವರ್ಗವೇ ಇದೆ. ಫಾಹದ್‌ ಫಾಸಿಲ್‌ ಮುಖ್ಯ ಭೂಮಿಕೆ ಕಾಣಿಸಿಕೊಳ್ಳುತ್ತಿರುವ ʼ ಆವೇಶಮ್ʼ ಸಿನಿಮಾದ ಅಧಿಕೃತ ಟೀಸರ್‌ ಬುಧವಾರ(ಜ.24 ರಂದು) ರಿಲೀಸ್‌ ಆಗಿದೆ.

ತನ್ನ ಅಭಿನಯದಿಂದಲೇ ಸಿನಿ ಪರದೆಯಲ್ಲಿ ಮಿಂಚುವ ಫಾಹದ್‌ ಫಾಸಿಲ್‌ ʼಆವೇಶಮ್ʼ ಸಿನಿಮಾದಲ್ಲಿ ಲೋಕಲ್‌ ಗೂಂಡಾನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಸಟ್ಟೇರಿದ ಸಂದರ್ಭದಲ್ಲಿ ಸದ್ದು ಮಾಡಿದ್ದ ʼಆವೇಶಮ್‌ʼ ಟೀಸರ್‌ ನಲ್ಲಿ ಫಾಫಾ ಅವರ ಪಾತ್ರದ ಝಲಕ್‌ ಸಖತ್‌ ಗಮನ ಸೆಳೆಯುತ್ತದೆ.

ಕೆಲ ಕಾಲೇಜು ಹುಡುಗರು ಲೋಕಲ್‌ ರೌಡಿ ʼರಂಗʼ(ಫಾಹದ್‌ ಫಾಸಿಲ್)‌  ಅವರ ಹಿನ್ನೆಲೆಯನ್ನು ಕೇಳುವುದರಿಂದ ಟೀಸರ್‌ ಆರಂಭಗೊಳ್ಳುತ್ತದೆ. ತಾನು ಹೇಗೆ ಗೂಂಡಾನಾದೆ, ತನ್ನ ಖದರ್‌ ಏನು ಎನ್ನುವುದನ್ನು ಟೀಸರ್‌ ನಲ್ಲಿ ರಂಗನ ಪಾತ್ರದ ಮೂಲಕ ತೋರಿಸಲಾಗಿದೆ. ಎಲ್ಲರೊಂದಿಗೆ ಬೆರೆತು, ತನ್ನದೇ ಸಾಮ್ರಾಜ್ಯದಲ್ಲಿ ಮೆರೆಯುವ ʼರಂಗʼನ ಪಾತ್ರದಲ್ಲಿ ಫಾಹದ್‌ ಫಾಸಿಲ್‌ ಮಿಂಚಿದ್ದಾರೆ.

ಈ ಸಿನಿಮಾವನ್ನು ʼ ರೋಮಾಂಚಂʼ ಖ್ಯಾತಿಯ ಜಿತು ಮಾಧವನ್ ಅವರು ನಿರ್ದೇಶನ ಮಾಡಿದ್ದಾರೆ. ಇದೊಂದು ಕಾಮಿಡಿ ಕಥಾಹಂದರದ ಸಿನಿಮಾ ಎನ್ನಲಾಗಿದೆ. ಈ ಚಿತ್ರದ ಕಥಾಹಂದರವು ನಿರ್ದೇಶಕ ಜಿತು ಮಾಧವನ್ ಅವರ ಸ್ವಂತ ಅನುಭವದಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ. ಜಿತು ಮಾಧವನ್‌ ಕಾಲೇಜು ದಿನದಲ್ಲಿ ಇದ್ದ ಸಂದರ್ಭದಲ್ಲಿ ನಡೆದ ಘಟನೆಯನ್ನೇ ಸಿನಿಮಾದಲ್ಲಿ ಹೇಳಲಾಗಿದೆ.

ಸಜಿನ್ ಗೋಪು, ಮನ್ಸೂರ್ ಅಲಿ ಖಾನ್, ಆಶಿಶ್ ವಿದ್ಯಾರ್ಥಿ, ಹಿಪ್ಜ್‌ಸ್ಟರ್, ಮಿಥುನ್ ಜೈ ಶಂಕರ್, ರೋಷನ್ ಶಾನವಾಸ್, ಮಿಧುಟ್ಟಿ ಮುಂತಾದವರು ಕಾಣಿಸಿಕೊಳ್ಳಲಿದ್ದು,ಚಿತ್ರದ ಸಂಗೀತವನ್ನು ಸುಶಿನ್ ಶ್ಯಾಮ್ ಸಂಯೋಜಿಸಿದ್ದು, ಸಮೀರ್ ತಾಹಿರ್ ಕ್ಯಾಮೆರಾವನ್ನು ನಿಭಾಯಿಸುತ್ತಿದ್ದಾರೆ ಮತ್ತು ಚಿತ್ರಕ್ಕೆ ವಿವೇಕ್ ಹರ್ಷನ್ ಸಂಕಲನ ಮಾಡಿದ್ದಾರೆ.

ಇದೇ ಏಪ್ರಿಲ್‌ 11 ರಂದು ಸಿನಿಮಾ ತೆರೆ ಕಾಣಲಿದೆ. ಅನ್ವರ್ ರಶೀದ್ ಅವರ ನಿರ್ಮಾಣ ಸಂಸ್ಥೆ ಅನ್ವರ್ ರಶೀದ್ ಎಂಟರ್‌ ಟೈನ್‌ ಮೆಂಟ್ಸ್ ಚಿತ್ರಕ್ಕೆ ಹಣ ಹೂಡುತ್ತಿದ್ದು, ನಜ್ರಿಯಾ ನಜೀಮ್ ಸಹ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.