ಮನೆ ಅಪರಾಧ ಕಾರುಗಳಿಗೆ ನಕಲಿ ನಂಬರ್ ಪ್ಲೇಟ್: ಮಾಲೀಕನ ಪತ್ತೆಗೆ ಮುಂದಾದ ಪೊಲೀಸರು

ಕಾರುಗಳಿಗೆ ನಕಲಿ ನಂಬರ್ ಪ್ಲೇಟ್: ಮಾಲೀಕನ ಪತ್ತೆಗೆ ಮುಂದಾದ ಪೊಲೀಸರು

0

ಬೆಂಗಳೂರು(Bengaluru): ಸೋಮವಾರ ಸಿಟಿ ರೌಂಡ್ಸ್‌ನಲ್ಲಿದ್ದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹುಂಡೈ ಕಾರ್ ನಂಬರ್ ಪ್ಲೇಟ್ ನೋಡಿ ಶಾಕ್ ಆಗಿರುವುದಲ್ಲದೇ ಮಾಲೀಕನ ಪತ್ತೆಗೆ ಮುಂದಾಗಿದ್ದಾರೆ.

ಆಯುಕ್ತರು ನಗರ ಪ್ರದಕ್ಷಿಣೆ ಸಮಯದಲ್ಲಿ ಹುಂಡೈ ಕಾರೊಂದು ಓವರ್ ಸ್ಪೀಡ್‌ನಲ್ಲಿ ಹೋಗಿದ್ದು, ಕೂಡಲೇ ಕಾರನ್ನು ಫಾಲೋ ಮಾಡಿ ನಂಬರ್ ಪ್ಲೇಟ್ ಪೋಟೋವನ್ನು ತೆಗೆದಿದ್ದಾರೆ.

ಕೆಎ 03 ಎಂಸಿ 7007 ನಂಬರ್‌ನಲ್ಲಿದ್ದ ಹೈ ಎಂಡ್ ಕಾರ್ ನಂಬರ್ ಪ್ಲೇಟ್ ಪೋಟೊವನ್ನು ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತರಿಗೆ ಪ್ರತಾಪ್ ರೆಡ್ಡಿ ಕಳುಹಿಸಿದ್ದು, ತನಿಖೆಗೆ ಆದೇಶಿಸಿದ್ದರು. ಈ ವೇಳೆ ಹುಂಡೈ ಕಾರ್‌ಗೆ ಲೋಕಲ್ ನಂಬರ್‌ನ್ನ ಅಳವಡಿಸಿಕೊಳ್ಳಲಾಗಿತ್ತು.

ಈ ವೇಳೆ ಕೆಎ 04 ಎಂಎಲ್ 1304 ನಂಬರ್ ನ ಬಿಎಂಡಬ್ಲ್ಯೂ ಕಾರ್‌ ಕಣ್ಣಿಗೆ ಬಿದ್ದಿದ್ದು, ಈ ಕಾರಿಗೆ ನಕಲಿ ನಂಬರ್ ಹಾಕಿರೋದು ಪತ್ತೆಯಾಗಿದೆ. ಸದ್ಯ ಬಿಎಂಡಬ್ಲ್ಯೂ ಕಾರು ಮಾಲೀಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಪೊಲೀಸರ ಸಭೆ: ನಗರ ಸಂಚಾರ ಸಮಸ್ಯೆಗೆ ಪ್ರಧಾನ ಮಂತ್ರಿಗಳು ಆರು ತಿಂಗಳು ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ ಸಂಚಾರ ವಿಭಾಗದ ಪೊಲೀಸರ ಜತೆ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಮಂಗಳವಾರ ಸಮಾಲೋಚಿಸಿದರು.

ಸಂಚಾರ ಸಮಸ್ಯೆ ಕುರಿತು ಇನ್ಸ್‌ಪೆಕ್ಟರ್‌ಗಳ ಜತೆ ವರ್ಚುಲ್‌ ಸಭೆ ನಡೆಸಿದ ಆಯುಕ್ತರು, ನಗರದ ಸಂಚಾರ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.