ಮೈಸೂರು: ಮನೆ ಬಾಡಿಗೆ ಕೇಳಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವ ದುರದ್ದೇಶದಿಂದ ಕಬ್ಬಿಣದ ರಾಡ್, ದೊಣ್ಣೆ ಮತ್ತು ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ಪೊಲೀಸ್ ಅಧಿಕಾರಿಗಳು ಹಲ್ಲೆಗೊಳಗಾದ ಅಧಿಕಾರಿಯ ದೂರಿನಂತೆ ಕೊಲೆ ಯತ್ನದ ದೂರು ದಾಖಲಿಸದೇ ಜಗಳಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ ಎಂದು ಹಲ್ಲೆಗೊಳಗಾದ ಧನಂಜಯರ ಪತ್ನಿ ರಾಜೇಶ್ವರಿ ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಹೊಸೂರು ಗ್ರಾಮದ ಸೋಮಶೇಖರ್’ರವರು ತಾವು ಸುಸ್ತಿದಾರರಾಗಿದ ಬ್ಯಾಂಕ್ ಸಾಲವನ್ನು ತೀರಿಸಲು ಪರಿಚಯಸ್ಥರಾದ ಹಳೇಯೂರಿನ ಮಧುಚಂದ್ರ ಎಂಬುವವರಿಂದ ೨೫ ಲಕ್ಷ ಹಣ ಸಾಲ ಪಡೆದು ತಮ್ಮ ಸಾಲಕ್ಕೆ ಭದ್ರತೆಗಾಗಿ ತಮ್ಮ ವಾಣಿಜ್ಯ ಕಟ್ಟಡವನ್ನು ಹತ್ತು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಿರುತ್ತಾರೆ. ಒಪ್ಪಂದದ ಸಮಯದಲ್ಲಿ ಹಳೇಯೂರಿನ ಮಧುಚಂದ್ರ ತಮ್ಮ ವೈಯಕ್ತಿಕ ಕಾರಣಕ್ಕಾಗಿ ಹಣ ಹಿಂದಿರುಗಿಸಲು ಹೊಸೂರು ಗ್ರಾಮದ ಸೋಮಶೇಖರ್’ರವರನ್ನು ಒತ್ತಾಯಿಸಿದಾಗ, ತನ್ನ ಸಂಬಂಧಿಯಾದ ಧನಂಜಯರವರ ಪತ್ನಿ ರಾಜೇಶ್ವರಿಯವರ ಬಳಿ ಸೋಮಶೇಖರ್’ರವರು ಸಾಲ ಕೇಳುತ್ತಾರೆ. ಆದರೆ ಧನಂಜಯರವರ ಪತ್ನಿ ರಾಜೇಶ್ವರಿಯವರು ನಾನು ಸಾಲ ಮಾಡಿ ನಿಮಗೆ ಹಣ ನೀಡುತ್ತೇನೆ ಆದರೆ ನಿಮ್ಮ ವಾಣಿಜ್ಯ ಕಟ್ಟಡದ ಬಾಡಿಗೆಯನ್ನು ನಿಮಗಾಗಿ ನಾನು ಮಾಡುವ ಸಾಲಕ್ಕೆ ಪ್ರತಿಯಾಗಿ ಕಟ್ಟ ಬೇಕಾಗಿರುವ ಹಣಕ್ಕೆ ಬಾಡಿಗೆಯನ್ನು ಹೊಂದಿಸಿಕೊಳ್ಳುತ್ತೇನೆ ಎಂದು ಸದರಿ ವಾಣಿಜ್ಯ ಕಟ್ಟಡವನ್ನು ಭ್ಜೋಗ್ಯಕ್ಕೆ ಪಡೆಯುತ್ತಾರೆ.
ರಾಜೇಶ್ವರಿ ತನ್ನ ಚಿಕ್ಕಪ್ಪನಿಂದ ಬೋಗ್ಯಕ್ಕೆ ಪಡೆದು ಬೇರೆಯವರಿಗೆ ಬಾಡಿಗೆಗೆ ನೀಡಿದ್ದರು. ಈ ಹಿಂದೆ ಬಾಡಿಗೆ ಹಣವನ್ನು ಪಡೆಯಲು ಕಾಳಮ್ಮ ಕಾಂಪ್ಲೆಕ್ಸ್ ಗೆ ತೆರಳಿದಾಗ ಬಾಡಿಗೆದಾರರಿಂದ ಬಾಡಿಗೆ ಹಣವನ್ನು ತನ್ನ ಚಿಕ್ಕಪ್ಪನೇ ಪಡೆದುಕೊಂಡು, ಪಡೆದಿದ್ದ ರಾಜೇಶ್ವರಿ ಪಾಲಿನ ಬಾಡಿಗೆಯನ್ನು ಕೊಡುವುದಿಲ್ಲ. ಇದು ನನ್ನ ಮಳಿಗೆಗೆಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ದೂರು ದಾಖಲಾಗಿತ್ತು.
ಸಿಎಆರ್ ಪೊಲೀಸ್ ಕಾನ್ಸ್ ಟೇಬಲ್ ಧನಂಜಯ್ ಮೈಸೂರಿನಲ್ಲಿ ವಾಸಿಸುತ್ತಿದ್ದು, ವೈಯಕ್ತಿಕ ಕಾರ್ಯ ನಿಮಿತ್ತ 6 ದಿನಗಳ ಸಾಂದರ್ಭಿಕ ರಜೆ ಪಡೆದು, ಸ್ವಂತ ಊರಾದ ಮಾಯಿಗೌಡನಹಳ್ಳಿ ಗ್ರಾಮಕ್ಕೆ ತೆರಳಿದ್ದರು. ನಂತರ ತಮ್ಮ ಪತ್ನಿಯಾದ ರಾಜೇಶ್ವರಿಯೊಡನೆ ಹೊಸೂರು ಗ್ರಾಮಕ್ಕೆ ತೆರಳಿ ತನ್ನ ಚಿಕ್ಕಪ್ಪನಿಂದ ನನ್ನ ಹೆಂಡತಿ ಭೋಗ್ಯಕ್ಕೆ ಪಡೆದಿದ್ದ ಕಾಳಮ್ಮ ಕಾಂಪ್ಲೆಕ್ಸ್ ಬಳಿ ತೆರಳಿದ್ದರು.
ಕಟ್ಟಡವನ್ನು ಬೇರೆ ಬಾಡಿಗೆದಾರರಿಗೆ ನೀಡಲು ರಾಜೇಶ್ವರಿ ಮತ್ತು ಹಲ್ಲೆಗೊಳಗಾದ ಧನಂಜಯರವರು ಕಟ್ಟಡದ ಬಳಿ ಹೋದ ಸಂದರ್ಭದಲ್ಲಿ, ಈಗಾಗಲೇ ದೂರು ನೀಡಿದ ವಿಷಯವನ್ನು ಮನಸ್ಸಲ್ಲಿಟ್ಟುಕೊಂಡು ಸೆಪ್ಟಂಬರ್ 20ರಂದು ರಾಜೇಶವರಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೇ ಮಾಡಲು ಚಿಕ್ಕಪ್ಪನ ಕುಟುಂಬದವರು ಯತ್ನಿಸಿದರು ಆಗ, ಸ್ಥಳದಲ್ಲೇ ಇದ್ದ ಧನಂಜಯರವರು ತನ್ನ ಪತ್ನಿಯ ಸಹಾಯಕ್ಕೆ ಹೋದ ಸಂದರ್ಭದಲ್ಲಿ ಸೋಮಶೇಖರ್ ಧನಂಜಯರವರ ಕತ್ತಿನ ಪಟ್ಟಿ ಹಿಡಿದು ಹೊರಗೆ ಎಳೆದು ತಂದರೆಂದು ರಾಜೇಶ್ವರಿಯವರು ದೂರಿದ್ದಾರೆ.
ಇದೇ ಸಂದರ್ಬಹ್ದಲ್ಲಿ ಸ್ಥಳದಲ್ಲೇ ಇದ್ದ ಸೋಮಶೇಖರ್’ರವರ ಮಗ ಲಯನ್ ರಾಜ್, ತನ್ನ ಸ್ನೇಹಿತನ ಜೊತೆ ಸೇರಿ ಕಬ್ಬಿಣದ ರಾಡ್ ನಿಂದ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಆಗ ಸೋಮಶೇಖರ್ ಕಲ್ಲಿನಂತಿದ್ದ ಕಾಂಕ್ರೀಂಟ್ ನಿಂದ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದಿದ್ದಾರೆ. ಧನಂಜಯರವರು ಕೆಳಗೆ ಬಿದ್ದಾಗ ಸೋಮಶೇಖರ್ ಪತ್ನಿ ಮಂಜುಳ ಸ್ಥಳಕ್ಕೆ ಬಂದು ತನ್ನನ್ನು ಹೊಡೆದು ಕೊಲ್ಲುವಂತೆ ಕೂಗಿದ್ದು, ಧನಂಜಯರವರುನ್ನು ಸಾಯಿಸುವ ಉದ್ದೇಶದಿಂದ ಮೂವರು ಕಲ್ಲು, ರಾಡ್, ದೊಣ್ಣೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತ ಸ್ರಾವದಿಂದ ಧನಂಜಯರವರು ಕುಸಿದು ಬಿದ್ದಿದ್ದಾರೆ.
ರಾಜೇಶ್ವರಿಯವರು, ಸಾರ್ವಜನಿಕರ ಸಹಾಯ ಪಡೆದು ಧನಂಜಯರವರನ್ನು ಕರೆದುಕೊಂಡು ಸ್ಥಳದಿಂದ ತಪ್ಪಿಸಿಕೊಂಡು ಚುಂಚನಕಟ್ಟೆಗೆ ತೆರಳಿ ಅಲ್ಲಿಂದ ಕೆ.ಆರ್. ಆಸ್ಪತ್ರೆಗೆ ಬಂದು ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕ್ಲಿಯರ್ ಮೆಡಿ ರೆಡಿಯೆಂಟ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಪಡೆಯುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ಸಮಯದಲ್ಲಿ ಸಾಲಿಗ್ರಾಮ ಪೊಲೀಸರು ಹೇಳಿಕೆಯನ್ನು ಧನಂಜಯರವರಿಂದ ಪಡೆದಿದ್ದು ಕೊಲೆ ಮಾಡುವ ಉದ್ದೇಶದಿಂದ ತೀವ್ರ ಹಲ್ಲೆ ಮಾಡಿದ ಸೋಮಶೇಖರ, ಆತನ ಪತ್ನಿ ಮಂಜುಳಾ ಹಾಗೂ ಅವರ ಮಗ ಲಯನ್ ರಾಜ್, ಆತನ ಸ್ನೇಹಿತನ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದರೂ ಸಹ ಧನಂಜಯರವರ ಆರೋಪದಂತೆ ಸಾಲಿಗ್ರಾಮ ಪೊಲೀಸರು ಉಡಾಫೆಯಿಂದ ಸೋಮಶೇಖರ್ ಜೊತೆ ಶಾಮೀಲಾಗಿ ಕೊಲೆ ಯತ್ನದ ಪ್ರಥಮ ವರ್ಥಮಾನ ವರದಿಯನ್ನು ದಾಖಲಿಸದೇ ಕೇವಲ ಹೊಡೆದಾಟದ ದೂರನ್ನು ದಾಖಾಲಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮಾನವೀಯತೆ ಮರೆತ ಸಾಲಿಗ್ರಾಮ ಪೊಲೀಸರು, ಪ್ರಮುಖವಾಗಿ ಠಾಣೆಯ ದಫೇದಾರ್
ಹಲ್ಲೆಗೊಳಗಾಗಿ ಸ್ಥಳದಿಂದ ಪಾರಾಗಿ ಚುಂಚನಕಟ್ಟೆ ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ಠಾಣೆಯಲ್ಲಿ ದಫೇದಾರ್ ನನಗೆ ಸಹಾಯ ಮಾಡದೇ ಮಾನವೀಯತೆ ಮರೆತು ನಿರ್ಲಕ್ಷ್ಯದಿಂದ ವರ್ತಿಸಿದರು ಎಂದು ಧನಂಜಯ್ ಆರೋಪಿಸಿದ್ದಾರೆ.
ಆಸ್ಪತ್ರೆಗೆ ತೆರಳುವ ಮುನ್ನ ಸಮಯೋಚಿತವಾಗಿ ವಿಡಿಯೋ ಮಾಡಿರುವ ಧನಂಜಯರವರು ಪೊಲೀಸರಿಗೆ ಈ ವಿಚಾರ ತಿಳಿಸಿದ್ದು, ಠಾಣೆಗೆ ತೆರಳಿ ಆಸ್ಪತ್ರೆಗೆ ತೆರಳಲು ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಸಾಕಷ್ಟು ಮನವಿ ಮಾಡಿದರೂ ಕೂಡ ಯಾವುದೇ ಸಹಾಯ ಮಾಡಿಲ್ಲ. ತಲೆಯಿಂದ ರಕ್ತ ಸ್ರಾವವಾಗುತ್ತಿದ್ದರೂ ಪ್ರಾಣಾಪಾಯವಿದೆಯೆಂದು ಬೇಡಿಕೊಂಡರೂ ಕೂಡ ವಿನಾಕಾರಣ ಸಮಯ ವ್ಯರ್ಥ ಮಾಡಿ, ಹಲ್ಲೇಗೊಳಗಾದವರಿಗೆ ಸಹಾಯ ಮಾಡದಿದ್ದರೇ ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಸಂಬಂಧ ಧನಂಜಯ ರವರು ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ತಯಾರಾಗಿದ್ದಾರೆ. ವಿಪರ್ಯಾಸವೆಂದರೆ ಪೊಲೀಸರೇ ಪೊಲೀಸರಿಗೆ ಸ್ಪಂದಿಸದಿದ್ದರೆ ಸಾಮಾನ್ಯ ನಾಗರೀಕರ ಪಾಡೇನು?