ಮನೆ ಸುದ್ದಿ ಜಾಲ ಬುದ್ಧ ಎಂಬುದರ ಅರ್ಥ ಅಂತರಂಗದ ಅರಿವು : ಬಿ.ಸಿ. ಶಿವಾನಂದ ಮೂರ್ತಿ

ಬುದ್ಧ ಎಂಬುದರ ಅರ್ಥ ಅಂತರಂಗದ ಅರಿವು : ಬಿ.ಸಿ. ಶಿವಾನಂದ ಮೂರ್ತಿ

0

ಮಂಡ್ಯ: ವಿದೇಶಗಳು ಭಾರತೀಯರನ್ನು ಬುದ್ಧ ಜನಿಸಿದ ನಾಡಿನಿಂದ ಬಂದವರು ಎಂದು ಗುರುತಿಸುತ್ತಾರೆ, ಬುದ್ಧ ಎಂಬುದರ ನಿಜವಾದ ಅರ್ಥ ಅಂತರಂಗದ ಅರಿವು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರು ಹೇಳಿದರು.

ಇಂದು (ಮೇ.12) ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2569 ನೇ ಭಗವಾನ್ ಬುದ್ಧ ಜಯಂತಿ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಕಲ ಸಂಪತ್ತು ರಾಜ ವೈಭೋಗವನ್ನು ಜ್ಞಾನ, ನೆಮ್ಮದಿ, ಶಾಂತಿಗಾಗಿ ತೋರೆದವರು ಭಗವಾನ್ ಬುದ್ಧ ಎಂದು ಹೇಳಿದರು.2569 ರ‍್ಷಗಳು ಕಳೆದರೂ ಗೌತಮ್ ಬುದ್ಧ ಅವರ ಸಾದನೆ, ಸಹನೆಯನ್ನು ಇನ್ನೂ ದೇಶ ವಿದೇಶದ ಜನರು ನೆನಪಿಟ್ಟಿಕೊಂಡಿದ್ದಾರೆ ಎಂದರೆ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರ. ಬುದ್ದ ಅವರು ತೋರಿದ ಜ್ಞಾನದ ಮರ‍್ಗದಲ್ಲಿಯೇ ಮುಂದೆ ಸಾಗೋಣ ಎಂದರು.

ಗೌತಮ ಬುದ್ಧರ ಮರ‍್ಗದಲ್ಲಿ ಸಾಗಿದರೆ ಬುದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಬಹುದು, ಬುದ್ಧ ಅವರು ಅತ್ಯಂತ ಸರಳವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳ ಕುರಿತು ತಿಳಿಸಿದ್ದಾರೆ, ಶಾಂತಿ ಮತ್ತು ನೆಮ್ಮದಿಯ ಮುಂದೆ ಯಾವುದು ದೊಡ್ಡದಲ್ಲ ಎಂದು ಅವರ ಪಂಚಶೀಲ ತತ್ವಗಳು ಹೇಳುತ್ತವೆ ಎಂದರು.

ಕೊಳ್ಳೇಗಾಲದ ಚನ್ನಲಿಂಗನಹಳ್ಳಿಯ ಜೇತವನ ಬುದ್ಧವಿಹಾರದ ಭಂತೆ ಮನೋರಖ್ಖಿತ ಬಿಕ್ಕು ಸ್ವಾಮಿಜಿಗಳು ಮಾತನಾಡಿ ಇದೇ ಮೊದಲ ಬಾರಿಗೆ ರಾಜ್ಯ ರ‍್ಕಾರದಿಂದ ಬುದ್ಧ ಜಯಂತಿಯನ್ನು ಆಚರಿಸಲು ಆದೇಶ ಹೊರಡಿಸಿರುವುದರಿಂದ ರಾಜ್ಯ ರ‍್ಕಾರಕ್ಕೆ ಧನ್ಯವಾದ ತಿಳಿಸಿದರು, ಸತ್ತ ನಂತರ ಪಡೆಯುವುದು ನಿಬ್ಬಣ ಅಲ್ಲ, ಲೋಭ ಮೋಹ ದ್ವೇಷವಿಲ್ಲದೆ ಬದುಕುವುದು ನಿಬ್ಬಣ ಎಂದರು.ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಬದ್ಧನ ತತ್ವ ಸಂದೇಶ ಮತ್ತು ಅವರ ವಿಚಾರಗಳ ಪ್ರಭಾವಕ್ಕೊಳಗಾಗಿ ಬದ್ಧ ಪಥವನ್ನು ಅನುಸರಿಸುತ್ತಿದ್ದಾರೆ, ಪ್ರಪಂಚದಲ್ಲಿ 300ಕ್ಕೂ ಹೆಚ್ಚು ರ‍್ಮಗಳಿವೆ, ರ‍್ಮವು ಮನುಷ್ಯ ಮತ್ತು ದೇವರ ನಡುವಿನ ಸಂಬಂಧದ ಕುರಿತು ಹೇಳುತ್ತದೆ, ಆದರೆ ದಮ್ಮ ಮನುಷ್ಯ ಮತ್ತು ಅವನ ಮನಸ್ಸಿನ ನುಡುವಿನ ಸಂಬಂಧ ತಿಳಿಸುತ್ತದೆ, ಬುದ್ಧಿಸಂ ರ‍್ಮವಲ್ಲ ಎಂದು ತಿಳಿಸಿದರು.

ಮನುಷ್ಯ ಇಚ್ಚಾಶಕ್ತಿಗಿಂತ ಮಿಗಿಲಾದದ್ದು ಯಾವುದು ಇಲ್ಲ, ನಾವೆಲ್ಲರೂ ಗೌತಮ ಬುದ್ಧರ ಪಂಚಶೀಲ ತತ್ವಗಳನ್ನು ಪಾಲಿಸಿದರೆ ಆದರ ಅರಿವು, ಯಶಸ್ಸಿನ ಮರ‍್ಗಗಳನ್ನು ತಿಳಿಯಬಹುದು ಹಾಗಾಗಿ ಬುದ್ಧನ ತತ್ವಗಳನ್ನು ಪಾಲಿಸಿ ಎಂದು ಹೇಳಿದರು.ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಧ್ಯಾಪಕರು ಮತ್ತು ಸಂಶೋಧನಾ ಸಹಾಯಕರಾದ ಡಾ. ಕಲಾವತಿ ಹೆಚ್. ಎಸ್ ಅವರು ಮಾತನಾಡಿ ಬುದ್ಧನನ್ನು ಕೇವಲ ಸಮುದಾಯಗಳಿಗೆ ಸೀಮಿತ ಮಾಡಬೇಡಿ, ಬುದ್ಧನ ಪ್ರವಚನ ಕೇಳಲು ಬಡವರಿಂದ ಶ್ರೀಮಂತರವರೆಗೂ ಜನ ಸೇರುತ್ತಿದ್ದರು, ಅವರ ಧಮ್ಮಕ್ಕೆ ಅಷ್ಟು ಶಕ್ತಿ ಇತ್ತು, ಸಹಾಯ ಕರುಣೆ ಪ್ರೀತಿ ದಯೆ ಸಹನೆ ಮಾನವೀಯ ಮೌಲ್ಯಗಳನ್ನು ಗೌತಮ ಬುದ್ಧ ಹೊಂದಿದ್ದರು ಎಂದು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಸಹ ನನ್ನ ಮೊದಲ ಗುರು ಗೌತಮ ಬುದ್ಧ ಎಂದು ಹೇಳಿದರು, ಸಹಸ್ರಾರು ರ‍್ಷಗಳಿಂದ ಹಿಂದುಳಿದಿದ್ದ ಬುದ್ಧಿಸಂ ಅನ್ನು ಡಾ.ಬಿ. ಆರ್. ಅಂಬೇಡ್ಕರ್ ಅವರು ಭಾರತಾದ್ಯಂತ ಮತ್ತೆ ಪಸರಿಸುತ್ತರೆ, ಬುದ್ಧ ಇಲ್ಲದೆ ಅಂಬೇಡ್ಕರ್ ಇಲ್ಲ ಅಂಬೇಡ್ಕರ್ ಇಲ್ಲದೆ ಬುದ್ಧ ಇಲ್ಲ ಎಂದು ಹೇಳಿದರು.ಜನರು ಮೌಡ್ಯದ ಸುಳಿಯಲ್ಲಿ ಸಿಲುಕಿದಾಗ ಏಷ್ಯದ ಬೆಳಕಾದ ಗೌತಮ ಬುದ್ಧ ಯಾರು ಏನೇ ಹೇಳಿದರೂ ಸ್ವತಃ ನಾನೆ ಹೇಳಿದರು ಪ್ರಶ್ನಿಸದೇ ಯಾವುದನ್ನು ಒಪ್ಪಿಕೊಳ್ಳಬೇಡಿ, ಪ್ರಶ್ನಿಸುವುದನ್ನು ತಿಳಿಯಿರಿ ಎಂದವರು ಬುದ್ಧ, ಜ್ಞಾನ ಯಾರ ಮನೆಯ ಆಸ್ತಿಯಲ್ಲ ಅದನ್ನು ಅರಿತುಕೊಳ್ಳುವುದರ ಮೂಲಕ ನೀವು ಬುದ್ಧರಾಗಿ ಎಂದು ಹೇಳಿದರು.

ಕರ‍್ಯಕ್ರಮದಲ್ಲಿ ಮಂಡ್ಯ ಉಪ ವಿಭಾಗಾಧಿಕಾರಿ ಶಿವಮರ‍್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್, ಬೌದ್ಧ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಶಿವರಾಜ್, ಬೌದ್ಧ ಮಹಾಸಭೆಯ ಜಿಲ್ಲಾಧ್ಯಕ್ಷ ಪ್ರೋ.ಎಂ. ವೆಂಕಟೇಶ್, ದಲಿತಪರ ಸಂಘಟನೆಯ ಮುಖಂಡ ವೆಂಕಟಗಿರಿಯ್ಯ, ಮಾಜಿ ನಗರಸಭೆಯ ಅಧ್ಯಕ್ಷೆ ವಿಜಯಲಕ್ಷ್ಮೀ, ಹಾಗೂ ಮುಖಂಡರುಗಳಾದ ಕುಮಾರಿ, ಅಮ್ಜದ್ ಪಾಷಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.