ಮನೆ ಜ್ಯೋತಿಷ್ಯ ಆಧ್ಯಾತ್ಮಿಕ ವಿದೇಶ ಪ್ರವಾಸ ಕೈಗೊಂಡಿರುವ ಡಾ. ಭಾನುಪ್ರಕಾಶ್ ಶರ್ಮಗೆ ಸನ್ಮಾನ

ಆಧ್ಯಾತ್ಮಿಕ ವಿದೇಶ ಪ್ರವಾಸ ಕೈಗೊಂಡಿರುವ ಡಾ. ಭಾನುಪ್ರಕಾಶ್ ಶರ್ಮಗೆ ಸನ್ಮಾನ

0

ಶ್ರೀರಂಗಪಟ್ಟಣ: ಶಾಶ್ವತಿ‌ ಧಾರ್ಮಿಕ ಕ್ರಿಯಾ ಸಮಿತಿ ಸಂಸ್ಥಾಪಕರಾದ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ರವರು ಧಾರ್ಮಿಕ ಚಟುವಟಿಕೆ ನಿಮಿತ್ತ ಆಮೇರಿಕಾದ ಚಿಕಾಗೋ ಡೆಲಾಸ್ ಟ್ಯಾಂಪಗೆ  ಆಧ್ಯಾತ್ಮಿಕ ವಿದೇಶ ಪ್ರವಾಸ ಕೈಗೊಂಡಿದ್ದು ಮೈಸೂರು  ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಮೈಸೂರಿನ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

ಇದೇ ಸಂಧರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ,  ಅಮೇರಿಕಾದಲ್ಲಿ ಪಾಶ್ಚಿಮಾತ್ಯ‌ ಸಂಸ್ಕೃತಿ ಕ್ರೈಸ್ತ ಹಬ್ಬಗಳ ಆಚರಣೆಗಳು ಮಾತ್ರ ಸೀಮಿತ ಎಂದು ಕೆಲವರು ಭಾವಿಸಿದ್ದಾರೆ ಆದರೆ ಸನಾತನ ಆಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳು ಹಿಂದೂ ಧರ್ಮದ ಹಬ್ಬಗಳ ಆಚರಣೆ ಹೆಚ್ಚಾಗಿ ನಡೆಯುತ್ತಿದೆ ಎಂದರು.

ಅಮೇರಿಕಾದಲ್ಲಿ ನಮ್ಮ‌ ಭಾರತೀಯರು ಗೌರಿ ಗಣೇಶ ಹಬ್ಬದಿಂದ ಸಂಕ್ರಾಂತಿ ಯುಗಾದಿ ದೀಪಾವಳಿ ದಸರಾ  ಹಬ್ಬಗಳನ್ನು ಸಹ  ಆಚರಿಸುತ್ತಾ ಭಕ್ತಿಭಾಂದವ್ಯದ ಮೌಲ್ಯತೆ ಸಾರುತ್ತಾ ಬಂದಿದ್ದಾರೆ, ಆಮೇರಿಕದಲ್ಲಿ ಶಿಕ್ಷಣ ಪಡೆಯುವ ಸಣ್ಣಮಕ್ಕಳು ಕೂಡ ಸಂಸ್ಕೃತ ಕಲಿಕೆ ವೇದಭ್ಯಾಸ ಕಡೆ ವಿಶೇಷ ಗಮನನೀಡಿ ಕಲಿತುಕೊಳ್ಳುತ್ತಿದ್ದಾರೆ ಎಂದರೆ ನಮ್ಮ ಭಾರತದ ಹಿಂದೂ ಧರ್ಮ ವಿಶ್ವದೆಲ್ಲಡೆ ಬಲಿಷ್ಟವಾಗಿ ಪಸರಿಸುತ್ತಿದೆ, ವಿದೇಶಿಗರಿಗೆ ನಮ್ಮ ಭಾರತದ ಇತಿಹಾಸ ಮತ್ತು ಯೋಗಾಕಲಿಕೆ ಮೇಲೆ ಹೆಚ್ಚು ಆಸಕ್ತಿಯಿದೆ ಇದರಿಂದಾಗಿ ಪ್ರವಾಸೋದ್ಯಮ ಬೆಳೆಯುತ್ತಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವದೇಶಿ ಪಾರಂಪರಿಕ ಆಯುರ್ವೇದ ಉತ್ಪನ್ನಗಳಿಗೆ ಬೆಲೆ ಬಂದಿದೆ ಉದ್ಯೋಗ ಸೃಷ್ಟಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು‌.

ಮೈಸೂರು ಜಿಲ್ಲಾ ಬ್ರಾಹ್ಮಣ ಯುವೇದಿಕೆಯ ಗೌರವ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್ ,ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ ,ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ , ಅಪೂರ್ವ ಸುರೇಶ್ ,ವಿನಯ್ ಕಣಗಾಲ್ ,ರಾಕೇಶ್ ಭಟ್ ,ಕೆ ಎಂ ನಿಶಾಂತ್ ,ರಂಗನಾಥ್ ,ಟಿ ಎಸ್ ಅರುಣ್ ,ವಿಜಯ್ ಕುಮಾರ್ ,ಶ್ರೀನಿವಾಸ್ ಪ್ರಸಾದ್ ,ಪ್ರಶಾಂತ್, ಸುಚೇಂದ್ರ , ಚಕ್ರಪಾಣಿ,ವಿಕಾಶ್ ಶಾಸ್ತ್ರಿ ,ಜಯಸಿಂಹ , ಇದ್ದರು