೧) ಮೇಷ ರಾಶಿಯಲ್ಲಿ ಜನಿಸಿದ ಕನೈಯು ಗುರು ಹಿರಿಯರ ಸೇವೆಯಲ್ಲಿ ವಿಶೇಷ ಆಸಕ್ತಿಯುಳ್ಳವಳು, ಕೀರ್ತಿಯನ್ನು ತರುವ ಮಕ್ಕಳನ್ನು ಹಡೆದು ಬಂಧು ಬಳಗದವರಿಗೆಲ್ಲ ಸಂತೋಷವನ್ನು ತರುವಳು. ಸದಾ ನಯ ವಿನಯದಿಂದ ಇದ್ದು, ಪತಿ ಭಕ್ತಿ ಪಾರಾಯಣೆ ಯಾಗಿ ಜನಪ್ರೀಯ ಆದರ್ಶ ಮಹಿಳೆ ಎಂದೆನಿಸಿಕೊಳ್ಳುವಳು. ದಾನಧರ್ಮದಲ್ಲಿ ವೃತ ನೇಮಾದಿಗಳನ್ನು ಮಾಡುವಲ್ಲಿ ವಿಶೇಷ ಆಸಕ್ತಳು,
೨) ವೃಷಭ ರಾಶಿಯಲ್ಲಿ ಜನಿಸಿದ ಕನೈಯು ವಿಶೇಷ ವಿದ್ಯಾವಂತ ನೀತಿವಂತ ಆರೋಗ್ಯವಂತ ಮಕ್ಕಳನ್ನು ಹೆತ್ತು ಪತಿಗೆ ಯೋಗ್ಯ ಸತಿಯಾಗಿ ಆದರ್ಶ ಸೊಸೆಯಾಗಿ, ಅತ್ತೆಯೂ ಆಗಿ ಸ್ತ್ರೀರತ್ನಳೆಂದೆನಿಸಿಕೊಳ್ಳುವಳು. ಈಕೆ ಸ್ವತಃ ವೇದಾಂತ-ವಿಚಾರ, ಶಾಸ್ತ್ರ-ಸಿದ್ಧಾಂತ ಶಾಸ್ತ್ರಗಳಲ್ಲಿ ಬಲ್ಲಿದವಳಾಗಿದ್ದು ಉಪದೇಶ ಮಾಡುವವಳೂ ಆಗುತ್ತಾಳೆ. ಆಚಾರ-ವಿಚಾರ, ಶೀಲವತಿಯಾದ ಈಕೆ ಆದರ್ಶ ಮಹಿಳಾ ಮಣಿಯು.
೩) ಮಿಥುನ ರಾಶಿಯಲ್ಲಿ ಜನಿಸಿದ ಕನೈಯು ಒಳ್ಳೆ ಸುಂದರ ರೂಪವನ್ನು ಹೊಂದುವಳು. ದಾನ-ಧರ್ಮಗಳನ್ನು ಮಾಡುವಲ್ಲಿ ಗುರು ಹಿರಿಯರನ್ನು ಸೇವಿಸುವಲ್ಲಿ ಪತಿಭಕ್ತಿ ಪರಾಯಣದಲ್ಲಿ ಸದಾ ಸಿದ್ಧಳಾಗಿರುವಳು. ವಿಶಾಲ ಸುಂದರ ಕಣ್ಣುಗಳನ್ನು ಹೊಂದಿರುವ ಈಕೆ ಬಂಧು ಬಳಗದವರಿಗೆಲ್ಲ ಅಚ್ಚು ಮೆಚ್ಚಿನವಳಾಗಿರುತ್ತಾಳೆ. ಸದಾ ಹಸನ್ಮುಖಿಯು ಆಗಿರುತ್ತಾಳೆ.
೪) ಕರ್ಕ ರಾಶಿಯಲ್ಲಿ ಜನಿಸಿದಾಕೆಯು ತನ್ನ ಬಂಧು ಬಳಗದವರಲ್ಲಿ ಶ್ರೇಷ್ಠಳೆಂದು ಮನ್ನಣೆ ಪಡೆಯುವಳು. ಸಕಲ ಗುಣ ಸಂಪನ್ನರಾದ ವಿದ್ವಾಂಸರಾದ ಮಕ್ಕಳನ್ನು ಹೆತ್ತು, ಒಳ್ಳೇ ಸುಸ್ವಭಾವಿ ಪತಿಯಿಂದೊಡಗೂಡಿದ ಆದರ್ಶ ಕುಟುಂಬದ ಮಹಾತಾಯಿಯಾಗಿ ಈಕೆ ಶೋಭಿಸುವಳು, ದಾನ-ಧರ್ಮ ಮಾಡುವದರಲ್ಲಿ ಗುರುಲಿಂಗ ಜಂಗಮರನ್ನು ಅದರ ಭಾವದಿಂದ ಕಾಣುವಲ್ಲಿ ವಿಶೇಷ ನಿರತಳು.
೫) ಸಿಂಹ ರಾಶಿಯಲ್ಲಿ ಜನಿಸಿದವಳು ಸರ್ವ ರೀತಿಯಿಂದಲೂ ಸುಖಭೋಗಿ ಯಾಗಿರುವಳು. ಈಕೆ ವಿಶೇಷ ಅಮೌಲ್ಯವಾದ ಉಡುಗೆ-ತೊಡಿಗೆ-ಆಭರಣಾದಿಗಳನ್ನು ಧರಿಸುವಲ್ಲಿ ವಿಶೇಷ ಆಸಕ್ತಳು. ಶೀಲಗುಣವುಳ್ಳವಳೂ, ಕ್ಷಮಾಶೀಲಳೂ ಆದ ಈಕೆ, ಮನೋಧೈರ್ಯವುಳ್ಳಾಕೆಯೂ, ಸಾಹಸಿಯೂ, ಸುಖದುಃಖಗಳೆರಡನ್ನೂ ಸಮಾನಾಗಿ ಸಹಿಸಿಕೊಳ್ಳುವ ಗುಣವುಳ್ಳವಳೂ ಆಗಿರುವಳು. ದಾನ, ಧರ್ಮ, ಪರೋಪಕಾರ ಗುಣಗಳನ್ನೂ ಅಳವಡಿಸಿಕೊಂಡಿರುವಾಕೆಯು.
೬ ) ಕನ್ಯಾ ರಾಶಿಯಲ್ಲಿ ಜನಿಸಿದಾಕೆಯು ಬಹು ಜನಪ್ರಿಯಳಾದ ಗೃಹಿಣಿಯಾಗಿ ಪ್ರಸಿದ್ಧಳಾಗುವಳು. ಧನ ಧಾನ್ಯ-ಸಂಪತ್ತು-ಸಮೃದ್ಧಿಗಳನ್ನು ಹೊಂದಿದ ಈಕೆ ಒಳ್ಳೇ ಕುಶಲ- ಶ್ರೀಮಂತ ಹೃದಯದ ಪುರುಷನ ಕೈಹಿಡಿದು ದೊಡ್ಡ ಸಂಸಾರದ ರಥವನ್ನೇ ಮುನ್ನಡೆಸುವವಳು. ಈಕೆ ತನ್ನ ವಿರೋಧಿ ಆಪ್ತ ಬಂಧು ಬಳಗದವರ ಮನವನ್ನು ತನ್ನ ವಿನಯ ಗುಣಗಳಿಂದ ಗೆಲ್ಲುವಳು. ಒಳ್ಳೇ ಶಾಂತ ಕಾಂತಿ ಮುಖದ ತೇಜಸ್ಸನ್ನು ಹೊಂದಿದ ಈಕೆ ಧೈರ್ಯವಂತಳೂ ಆಗುವಳು. ಇಂಥ ಆದರ್ಶ ನಾರಿಯ ಕೈ ಹಿಡಿಯುವವನೂ ಭಾಗ್ಯವಂತನೇ.
೭ ) ತುಲಾ ರಾಶಿಯಲ್ಲಿ ಜನಿಸಿದ ಕನೈಯು ಪತಿವ್ರತೆಯಾಗಿದ್ದು, ತನ್ನ ಬಂಧು ಬಳಗದವರಿಗೆಲ್ಲ ಹಿತವನ್ನುಂಟು ಮಾಡುವ ನಾರೀಮಣಿಯಾಗುವಳು. ಒಳ್ಳೆ ಬುದ್ದಿವಂತರೂ, ಗುಣವಂತರೂ, ಆದ ಮಕ್ಕಳನ್ನು ಹೆತ್ತು ಸಂಸಾರವನ್ನು ನಡೆಸುವ ಈಕೆ ಪರರ ಮನೋ ಇಂಗಿತವನ್ನು ಅರಿತು ಅವರನ್ನು ಆದರಿಸುವಳು. ಡಂಭಾಚಾರವಿಲ್ಲದ ಈಕೆ ಯಾವ ದುರಾಶೆ, ನಿರಾಶೆಯಿಲ್ಲದ ಸ್ತ್ರೀರತ್ನಳೇ ಆಗಿರುತ್ತಾಳೆ.
೮) ವೃಶ್ಚಿಕ ರಾಶಿಯಲ್ಲಿ ಜನಿಸಿದ ಸ್ತ್ರೀಯಳು ಸ್ಥಿರಬುದ್ಧಿಯವಳು, ಚತುರತನದ ಶ್ರೇಷ್ಠ ಗುಣವುಳ್ಳವಳು, ಗುರುಹಿರಿಯರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವವಳು. ವ್ರತ ನೇಮಾದಿಗಳನ್ನು ಪದ್ಧತಿಯಂತೆ ಮಾಡತಕ್ಕವಳಾಗುತ್ತಾಳೆ. ದುರಾಭಿಮಾನ-ಸಿಟ್ಟು-ಕೋಪವಿಲ್ಲದ ತಾಳ್ಮೆ ಗುಣವುಳ್ಳವಳು. ವಿಶೇಷ ಧನ-ಧಾನ್ಯ-ವಸ್ತ್ರಾಭರಣಗಳನ್ನೂ ಹೊಂದಿರತಕ್ಕವಳು, ಪತಿಗೆ ಅನುಕೂಲ ಸತಿಯಾಗಿದ್ದು ಗ್ರಹಸ್ಥ ಜೀವನದಲ್ಲಿ ಸೌಖ್ಯ ಅನುಭವಿಸುವವಳು.
೯) ಧನಸ್ಸು ರಾಶಿಯಲ್ಲಿ ಜನಿಸಿದ ಕನೈಯು ದಾನ-ಧರ್ಮದಂತಹ ಸತ್ಕಾರಗಳಲ್ಲಿ ವಿಶೇಷ ಅಭಿರುಚಿಯುಳ್ಳವಳು. ಗುರುಹಿರಿಯರನ್ನು, ಅತ್ತೆ ಮಾವಂದಿರನ್ನು ಭಯ ಭಕ್ತಿಯಿಂದ ಕಾಣುವಾಕೆಯು. ವ್ರತ ನೇಮಗಳನ್ನು ಕಟ್ಟು ನಿಟ್ಟಿನಿಂದ ಕಾಲಕ್ಕನುಸರಿಸಿ, ಆಚರಿಸಿ ಆದರ್ಶ ನಾರೀಮಣಿಯ ಜೀವನ ಸಾಗಿಸುವಳು- ಧನ-ಧಾನ್ಯ-ಸಂಪತ್ತು-ಮಕ್ಕಳು ಮೊಮ್ಮಕ್ಕಳುಳ್ಳ ಈಕೆ ಪತಿಭಕ್ತಿ ಪಾರಾಯಣಳಾಗಿ ಸಂತೃಪ್ತ ಜೀವನ ಸಾಗಿಸುವಳೆಂಬುದರಲ್ಲಿ ಸಂಶಯವಿಲ್ಲವು. ಈಕೆ ಕೆಂಪು ತುಟಿಯವಳು, ಸಂಗೀತಾದಿ ಲಲಿತ ಕಲೆ ವಿದ್ಯೆಗಳಲ್ಲಿ ಆಸಕ್ತಳು. ಪ್ರಾಣಿ ದಯಾಪರಳಾಗಿದ್ದು ಪರೋಪಕಾರಿಯೂ ಶತೃನಾಶಕಳೂ ಆಗುತ್ತಾಳೆ.
೧೦) ಮಕರ ರಾಶಿಯಲ್ಲಿ ಜನಿಸಿದಾಕೆಯು ಶ್ರೇಷ್ಠ ಮನೋಧೈರ್ಯವನ್ನು ಹೊಂದಿದವಳಾಗಿರುತ್ತಾಳೆ. ಈಕೆ ರೂಪವತಿಯು, ಅಷ್ಟೇ ವಿದ್ಯಾವಂತಳಾಗಿದ್ದು ವಿನಯ ಗುಣ, ಪರೋಪಕಾರ ಗುಣಗಳನ್ನು ಹೊಂದಿರುವಳು. ನೀತಿ-ಶಾಸ್ತ್ರಗಳನ್ನು ಬಲ್ಲವಳು. ಸತ್ಯ ನಡೆ-ನುಡಿಯುಳ್ಳ ಈಕೆ ಗುರು ಹಿರಿಯರನ್ನು ಭಕ್ತಿ ಭಾವನೆಯಿಂದ ನೋಡಿಕೊಂಡು, ಅವರ ಉಪಚಾರ ಸೇವೆಗಳಲ್ಲಿ ತೊಡಗಿರುವಳು. ಆದರೂ ಈಕೆಯ ಹಲ್ಲಿನ ದವಡೆಗಳು ಆಗಾಗ್ಗೆ ನೋವಿನಿಂದ ತೊಂದರೆ ಕೊಡುವವು.
೧೧) ಕುಂಭ ರಾಶಿಯಲ್ಲಿ ಜನಿಸಿದಾಕೆಯು ಧನ-ಧಾನ್ಯ-ಸಂಪತ್ತುಗಳುಳ್ಳಾಕೆಯು. ಯಾವಾಗಲೂ ಶುಭಕಾರ್ಯ ಮಂಗಳ ಕಾರ್ಯಗಳನ್ನು ಮಾಡುತ್ತಿರುವಲ್ಲಿ ತೊಡಗಿಕೊಂಡಿರುವವಳು. ಅನ್ನದಾನ-ವಸ್ತ್ರದಾನ-ಪರೋಪಕಾರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವವಳು. ಸುಂದರಿಯಾದ ಈಕೆ ಮಕ್ಕಳು-ಮೊಮ್ಮಕ್ಕಳನ್ನು ಹೊಂದಿರುವಾಕೆಯು, ಒಳ್ಳೇ ತೇಜಸ್ಸು-ಆರೋಗ್ಯ ಹೊಂದಿದ ಈಕೆ ಅಭಿಮಾನಿ ಅಹಂಕಾರಿಯೂ ಆಗಿರುತ್ತಾಳೆ.
೧೨) ಮೀನ ರಾಶಿಯಲ್ಲಿ ಜನಿಸಿದ ಕನೈಯು ವಿಶೇಷವಾಗಿ ಧರ್ಮ ಕಾರ್ಯದಲ್ಲಿ ತತ್ಪರಳಾಗಿರುವಳು, ಸಕಲ ಒಳ್ಳೇ ಗುಣಗಳನ್ನು ಹೊಂದಿದ ಈಕೆ ಸುಶೀಲಳೂ ಅನೇಕ ಮಕ್ಕಳು, ಮೊಮ್ಮಕ್ಕಳನ್ನು ಹೊಂದಿರುವಾಕೆಯೂ, ಮನೋನಿಗ್ರಹ ಸ್ವಭಾವವುಳ್ಳವಳೂ, ಸಮಸ್ತ ಲಲಿತ ಕಲೆಗಳನ್ನು ಬಲ್ಲವಳೂ ಪ್ರೋತ್ಸಾಹಕಳೂ ಆಗುವಳು. ಸ್ತ್ರೀಸಹಜವಾಗುಳ್ಳ ಲಜ್ಞಾ ಸ್ವಭಾವದ ಈಕೆ ಪತಿಯ ಸಂತೃಪ್ತ ಗ್ರಹಸ್ಥ ಜೀವನಕ್ಕೆ ಈಕೆ ಕಾರಣಳೂ ಆಗಿರುವಳು.