ಮನೆ ಕಾನೂನು ಸರ್ಕಾರಿ ಕಾಮಗಾರಿಗಳಿಗೆ ಎಂಪಿ, ಎಂಎಲ್’ಎ ಫ್ಲೆಕ್ಸ್, ಫೋಟೋ ಹಾಕಿದರೆ ಎಫ್’ಐಆರ್ ದಾಖಲಿಸಿ: ಪೊಲೀಸರಿಗೆ ಹೈಕೋರ್ಟ್ ...

ಸರ್ಕಾರಿ ಕಾಮಗಾರಿಗಳಿಗೆ ಎಂಪಿ, ಎಂಎಲ್’ಎ ಫ್ಲೆಕ್ಸ್, ಫೋಟೋ ಹಾಕಿದರೆ ಎಫ್’ಐಆರ್ ದಾಖಲಿಸಿ: ಪೊಲೀಸರಿಗೆ ಹೈಕೋರ್ಟ್ ಸೂಚನೆ

0

ಬೆಂಗಳೂರು(Bengaluru): ಸರ್ಕಾರಿ ವೆಚ್ಚದಲ್ಲಿ ಅಥವಾ ಸರ್ಕಾರದ ನೆರವಿನಿಂದ ಕೈಗೊಳ್ಳುವ ಯಾವುದೇ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದರೆ ತಪ್ಪಿತಸ್ಥರ ವಿರುದ್ಧ ಎಫ್’ಐಆರ್ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಒಂದು ವೇಳೆ, ಇಂತಹ ಫ್ಲೆಕ್ಸ್’ಗಳನ್ನು ಈಗಾಗಲೇ ಅಳವಡಿಸಿದ್ದರೆ ತಕ್ಷಣ ತೆರವುಗೊಳಿಸಿ ಎಂದು ಸೂಚಿಸಿರುವ ನ್ಯಾಯಪೀಠ, ಇಂತಹ ಫ್ಲೆಕ್ಸ್’ಗಳು, ಅಭಿನಂದನಾ ಫೋಟೋಗಳು ಕಂಡುಬಂದರೆ ಅಂಥವರ ವಿರುದ್ಧ ಎಫ್’ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.

ಸಾರ್ವಜನಿಕರು ನೀಡಿದ ತೆರಿಗೆ ಹಣದಿಂದ ಸರ್ಕಾರಿ ಕಾಮಗಾರಿಗಳು ನಡೆಯುತ್ತವೆ. ಅದನ್ನು ಈ ರಾಜಕಾರಣಿಗಳು ತಾವೇ ತಮ್ಮ ಕೈಯಿಂದ ಖರ್ಚು ಮಾಡಿದಂತೆ ಕಾಮಗಾರಿಯನ್ನು ನಾವೇ ನಡೆಸಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ  ಇಂತಹ ಫೋಟೋ, ಫ್ಲೆಕ್ಸ್’ಗಳ ಹಾವಳಿ ಹೆಚ್ಚಾಗುತ್ತಿದ್ದು, ಹೈಕೋರ್ಟ್ ಆದೇಶ ಇದಕ್ಕೆ ತಡೆ ನೀಡಿದಂತಾಗಿದೆ.

ಹಿಂದಿನ ಲೇಖನನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನ3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ: ಆರೋಪಿ ಬಂಧನ