ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಕಾನ್ಸ್ಟೇಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪಿಎಸ್‌ಐ ಆಗಿ ಆಯ್ಕೆಯಾಗಿದ್ದ ಭಾರತೀ ನಗರದ ಕಾನ್ಸ್ಟೇಬಲ್ ಪೈಗಂಬರ್ ನದಾಫ್ ವಿರುದ್ಧ ನಕಲಿ ಅಂಕಪಟ್ಟಿ ಸಲ್ಲಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದ್ದು, ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಪೈಗಂಬರ್ ನದಾಫ್ ಅವರು ಬಿಎ ಅಂಕಪಟ್ಟಿ ಸಲ್ಲಿಸಿದ್ದರು.
ನೇಮಕಾತಿ ಅಧಿಕಾರಿಗಳು ಬಿಎ ಪದವಿ ಅಂಕಪಟ್ಟಿ ನೈಜತೆ ಪರಿಶೀಲನೆಗೆ ಮೈಸೂರು ವಿವಿಗೆ ಕಳುಹಿಸಿದ್ದರು. ಈ ವೇಳೆ ನಕಲಿ ಅಂಕಪಟ್ಟಿ ಎಂಬುದು ತಿಳಿದುಬಂದಿದೆ.
ನೇಮಕಾತಿ ವಿಭಾಗದ ಅಧಿಕಾರಿವಿಧಾನಸೌಧ ಠಾಣೆಯಲ್ಲಿ ಪೈಗಂಬರ್ ನದಾಫ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಕೆ ನಡೆಸುತ್ತಿದ್ದಾರೆ. ಬೆಂಗಳೂರಿನ ಭಾರತೀನಗರ ಠಾಣೆಯಲ್ಲಿ ಪಿಸಿ ಆಗಿರುವ ಪೈಗಂಬರ್ ಕ್ರೀಡಾ ಕೋಟಾದಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು.