Saval TV on YouTube
ಭುವನೇಶ್ವರ: ಒಡಿಶಾದ ಕೇಂದ್ರಪಾಡ ಜಿಲ್ಲೆಯ ಬಲಿಯಾ ಬಜಾರ್’ನಲ್ಲಿ ಪಟಾಕಿ ಸ್ಫೋಟಗೊಂಡು ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ.
ಭುವನೇಶ್ವರದದಿಂದ 80 ಕಿ.ಮೀ ದೂರದ ಬಲಿಯಾ ಬಜಾರ್ನಲ್ಲಿ ಬುಧವಾರ ಕಾರ್ತಿಕೇಶ್ವರ ದೇವರ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಪಟಾಕಿ ಸ್ಫೋಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವರ ವಿಸರ್ಜನಾ ಸ್ಥಳದಲ್ಲಿ ವಿವಿಧ ಪೂಜಾ ಪೆಂಡಾಲ್’ನಲ್ಲಿ ಪಟಾಕಿ ಸಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.
ಪಟಾಕಿಯ ಕಿಡಿಯು ಶೇಖರಿಸಿಟ್ಟ ಪಟಾಕಿ ರಾಶಿಯ ಮೇಲೆ ಬಿದ್ದು ಸ್ಫೋಟಿಸಿ ಅವಘಡ ಸಂಭವಿಸಿದೆ. ಗಾಯಗೊಂಡ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರ ಗಾಯಗೊಂಡವರನ್ನು ಎಸ್’ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.














