ಮನೆ ಅಪರಾಧ ಪ್ರಕರಣ ಕೈಬಿಡಲು ಲಂಚ ಪಡೆಯುತ್ತಿದ್ದ ಕಾನ್ಸ್’ಟೇಬಲ್ ಲೋಕಾಯುಕ್ತ ಬಲೆಗೆ

ಪ್ರಕರಣ ಕೈಬಿಡಲು ಲಂಚ ಪಡೆಯುತ್ತಿದ್ದ ಕಾನ್ಸ್’ಟೇಬಲ್ ಲೋಕಾಯುಕ್ತ ಬಲೆಗೆ

0

ದೇವನಹಳ್ಳಿ: ಪ್ರಕರಣ​ ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ 30 ಸಾವಿರ ಲಂಚ ಪಡೆಯುವ ವೇಳೆ ಪೊಲೀಸ್ ಕಾನ್ಸ್​’ಟೇಬಲ್’ವೊಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಠಾಣೆಯಲ್ಲಿ ದಾಖಲಾಗಿದ್ದ ದೂರಿನ ವಿಚಾರಕ್ಕೆ ಸಂಬಂಧಿಸಿದಂತೆ ಮಂಡಿಬೆಲೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ಚಿಕ್ಕತತ್ತಮಂಗಲ ಗ್ರಾಮದ ಮಂಜುನಾಥ್ ಎಂಬುವರಿಂದ ನಿನ್ನೆ ಸಂಜೆ 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಚಂದ್ರಶೇಖರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಹಣದ ಸಮೇತ ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ ?

ಮಂಜುನಾಥ್ ಮತ್ತು ಅವರ ಸಹೋದರಿಯ ನಡುವೆ ಹಣಕಾಸಿನ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಜುನಾಥ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದು ಸೆಲ್​’ನಲ್ಲಿ ಇರಿಸಲಾಗಿದೆ. ಠಾಣೆಯಿಂದ ಬಿಡುಗಡೆ ಮಾಡಿ ಹೊರಕಳುಹಿಸಲು ಕಾನ್ಸ್​’ಟೇಬಲ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಪಟ್ಟಣದ ಶಿವಗಣೇಶ ಸರ್ಕಲ್​ನಲ್ಲಿರುವ ಹಾಪ್ ಕಾಮ್ಸ್ ಬಳಿ, ಮಂಜುನಾಥ್​ಅವರಿಂದ ಹಣ ಪಡೆದುಕೊಳ್ಳುವಾಗ ದಾಳಿ ನಡೆಸಲಾಗಿದೆ.

ಕಾನ್ಸ್​ಟೇಬಲ್ ಚಂದ್ರಶೇಖರ್ ಮಾತ್ರವಲ್ಲದೇ ಸಬ್ ಇನ್ಸ್​ಪೆಕ್ಟರ್ ಈರಮ್ಮ ಮೇಲೆ ಕೂಡ ದೂರು ದಾಖಲಾಗಿದೆ. ಆದ್ರೆ, ಈರಮ್ಮ ಅವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಲೇಖನಒಡಿಶಾದಲ್ಲಿ ಪಟಾಕಿ ಸ್ಫೋಟ: 40 ಮಂದಿಗೆ ಗಾಯ
ಮುಂದಿನ ಲೇಖನಬೆಳಗಾವಿ: ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ