ಮನೆ ಸುದ್ದಿ ಜಾಲ ಗಣೇಶ ಮೆರವಣಿಗೆಯಲ್ಲಿ ತಲೆಯ ಮೇಲೆ ಪಟಾಕಿ ಸಿಡಿಸಿ ಹುಚ್ಚಾಟ..!

ಗಣೇಶ ಮೆರವಣಿಗೆಯಲ್ಲಿ ತಲೆಯ ಮೇಲೆ ಪಟಾಕಿ ಸಿಡಿಸಿ ಹುಚ್ಚಾಟ..!

0

ಬಳ್ಳಾರಿ : ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಗಣೇಶ ಮೆರವಣಿಗೆ ವೇಳೆ ಯುವಕನೋರ್ವ ಹುಚ್ಚಾಟ ಮೆರೆದಿದ್ದಾನೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಬಾಕ್ಸ್ ತಲೆಯ ಮೇಲೆ ಹೊತ್ತು ಸಿಡಿಸಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಸರ್ಜನೆ ಮೆರವಣಿಗೆಯಲ್ಲಿ ಸಾವಿರಾರು ಜನ ಇದ್ದರೂ ಹುಂಬತನ ಮೆರೆದ ಯುವಕ ತಲೆಯ ಮೇಲೆ ಪಟಾಕಿ ಬಾಕ್ಸ್ ಹಿಡಿದು ಸಿಡಿಸಿದ್ದಾನೆ. ಜನ ಪಟಾಕಿ ಬಾಕ್ಸ್ ಕಸಿಯಲು ಮುಂದಾದರೂ ಯುವಕ ತನ್ನ ಹುಚ್ಚಾಟ ಮುಂದುವರೆಸಿದ್ದ. ಕೂಡಲೇ ಎಚ್ಚೆತ್ತ ಪೊಲೀಸರು ತಲೆಯ ಮೇಲೆ ಇದ್ದ, ಪಟಾಕಿ ಬಾಕ್ಸ್ ಕಸಿದು ಯುವಕನನ್ನ ಗದರಿಸಿ ಕಳಿಸಿದ್ದಾರೆ ಎನ್ನಲಾಗಿದೆ.