ಮನೆ ರಾಷ್ಟ್ರೀಯ ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ: ಬಿಎಸ್ ಎಫ್ ಯೋಧ ಸೇರಿ ಐವರಿಗೆ ಗಾಯ

ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ: ಬಿಎಸ್ ಎಫ್ ಯೋಧ ಸೇರಿ ಐವರಿಗೆ ಗಾಯ

0

ಶ್ರೀನಗರ: ಜಮ್ಮು- ಕಾಶ್ಮೀರ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ​ ಸೇನೆಯಿಂದ ಫೈರಿಂಗ್ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಓರ್ವ ಬಿಎಸ್​ ಎಫ್ ಯೋಧ, ನಾಲ್ವರು ನಾಗರಿಕರಿಗೆ ಗಾಯವಾಗಿದೆ. ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ ನಡೆದಿದೆ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಗಡಿ ಭದ್ರತಾ ಪಡೆ (ಬಿಎಸ್‌ ಎಫ್) ಭಾರತೀಯ ಪೋಸ್ಟ್‌ ಗಳ ಮೇಲೆ ಪಾಕಿಸ್ತಾನಿ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಪಡೆಗಳು ಕೂಡ ಅದಕ್ಕೆ ಪ್ರತಿದಾಳಿ ನಡೆಸಿವೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಪ್ವಾರಾ ಜಿಲ್ಲೆಯ ಎಲ್‌ ಒಸಿಯಾದ್ಯಂತ ನುಸುಳಲು ಯತ್ನಿಸಿದ ಐವರು ಎಲ್‌ ಇಟಿ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಕುಪ್ವಾರದ ಮಚಿಲ್ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯ ಕೆಲವೇ ಗಂಟೆಗಳ ನಂತರ ಅರ್ನಿಯಾ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘನೆಯಾಗಿದೆ. ಅರ್ನಿಯಾ ಮತ್ತು ಆರ್‌ ಎಸ್‌ ಪುರ ಸೆಕ್ಟರ್‌ ಗಳಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭಾರತೀಯ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ರೇಂಜರ್‌ ಗಳು ರಾತ್ರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರಿಂದ ಗಡಿ ಭದ್ರತಾ ಪಡೆ (ಬಿಎಸ್‌ ಎಫ್) ಯೋಧರು ಮತ್ತು ಒಬ್ಬರು ನಾಗರಿಕ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ನಂತರ, ಆರ್‌ ಎಸ್ ಪುರದ ಅರ್ನಿಯಾದಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದೆ.

ಕದನ ವಿರಾಮ ಉಲ್ಲಂಘನೆ ಮತ್ತು ಅರ್ನಿಯಾ ಪ್ರದೇಶದಲ್ಲಿನ ಅವರ ಪೋಸ್ಟ್‌ ಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿಗೆ ಪಾಕಿಸ್ತಾನ ರೇಂಜರ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಜಮ್ಮುವಿನಲ್ಲಿರುವ ಬಿಎಸ್‌ಎ ಫ್ ಮಾಹಿತಿ ನೀಡಿದೆ.