ಮನೆ ಆರೋಗ್ಯ ಮೈಸೂರಿನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ ?

ಮೈಸೂರಿನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ ?

0

ಮೈಸೂರು(Mysuru): ಮೈಸೂರಿನಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್​ ಪ್ರಕರಣ ಮಾದರಿ ವರದಿಯಾಗಿದೆ ಎಂದು ಹೇಳಲಾಗಿದೆ.

ಜಿಲ್ಲೆಯ ಕೆ ಆರ್ ​ನಗರದ ಗ್ರಾಮವೊಂದರ 12 ವರ್ಷದ ಬಾಲಕಿಯ ದೇಹದ ಮೇಲೆ ಬೊಬ್ಬೆಗಳು ಕಂಡಿವೆ. ಚಿಕಿತ್ಸೆ ಕೊಡಿಸಿದರೂ ಗುಣವಾಗದ ಹಿನ್ನೆಲೆ ಮೈಸೂರಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ, ಬಾಲಕಿಯ ದೇಹದಲ್ಲಿ ಬೊಬ್ಬೆಗಳು ಇರುವುದನ್ನು ಗಮನಿಸಿ ಮಂಕಿಪಾಕ್ಸ್​ ಗುಣಲಕ್ಷಣ ಕಂಡು ಬಂದಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಮನಕ್ಕೆ ತಂದಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಬಾಲಕಿಯ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷಾ ಮಾದರಿಗಳನ್ನು ರವಾನಿಸಲಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ವರದಿಯ ಬಗ್ಗೆ ಆತಂಕ ಪಡಬೇಕಿಲ್ಲ, ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆ ಕ್ಲಿನಿಕ್ ಹಾಗೂ ಮಕ್ಕಳ ಆಸ್ಪತ್ರೆಗಳಲ್ಲಿ ಮನಕಿಪಾಕ್ಸ್ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ತುರ್ತು ಮಾಹಿತಿ ಒದಗಿಸುವಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನಿಯಮಾನುಸಾರ ಶಂಕಿತ ಬಾಲಕಿಯ ಊರು, ಪೋಷಕರ ಮಾಹಿತಿ ಗೌಪ್ಯವಾಗಿಡಲಾಗಿದೆ. ಬಾಲಕಿಯ ಪ್ರಾಥಮಿಕ ಸಂಪರ್ಕಿತರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.

ಹಿಂದಿನ ಲೇಖನರಾಜಕಾಲುವೆ ಒತ್ತುವರಿ: 2,052 ಒತ್ತುವರಿ ತೆರವು ಮಾಡಿರುವ ಬಗ್ಗೆ ಹೈಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದ ಬಿಬಿಎಂಪಿ
ಮುಂದಿನ ಲೇಖನಪಕ್ಷದ ಮುಖಂಡರ ಕೆಲಸ ನೋಡಿ ಟಿಕೆಟ್: ಬಿ.ಎಸ್.ಯಡಿಯೂರಪ್ಪ