ಚಾಮರಾಜನಗರ(Chamarajangar) : ಜಿಲ್ಲೆಯ ಗಡಿಭಾಗವಾದ ತಾಳವಾಡಿಯ ಗಾಜನೂರಿನಲ್ಲಿ ಬಾದಾಮಿ ಎಂದು ಮರಳೆಕಾಯಿ ಬೀಜ ತಿಂದು ಐವರು ಮಕ್ಕಳು ಅಸ್ವಸ್ಥರಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಸಂಜೆ ಮನೆ ಹತ್ತಿರ ಆಟ ಆಡುತ್ತಿದ್ದಾಗ ಆದರ್ಶ(11) ಎಂಬಾತ ಸೇರಿ ಮೂವರು ಬಾಲಕರು, ಇಬ್ಬರು ಬಾಲಕಿಯರು ಮರಳೆಕಾಯಿ ಜಜ್ಜಿ ಅದರ ಬೀಜಸೇವಿಸಿದ್ದಾರೆ. ತಿಂದ ಮಕ್ಕಳಿಗೆ ಗಂಟಲು ಬಿಗಿದಂತಾಗಿ ಅಸ್ವಸ್ಥರಾಗಿದ್ದು, ಕೂಡಲೇ ಪಾಲಕರು ತಮಿಳುನಾಡಿನ ಆ್ಯಂಬುಲೆನ್ಸ್ ಸಹಾಯದಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ನಲ್ಲಿ ದಾಖಲಿಸಿದ್ದಾರೆ.
ಸದ್ಯ ಐವರೂ ಚೇತರಿಸಿಕೊಳ್ಳುತ್ತಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.