ಮೈಸೂರು: ದೇವಸ್ಥಾನದ ಹುಂಡಿ ಹಾಗೂ ಬೈಕ್ ಕಳವು ಮಾಡುತ್ತಿದ್ದ ಐವರು ಆರೋಪಿಗಳನ್ನ ಬಂಧಿಸಿರುವ ಜಯಲಕ್ಷ್ಮಿಪುರಂ ಠಾಣೆ ಪೋಲಿಸರು 18,950 ರೂ. ನಗದು, 3.2 ಲಕ್ಷ ರೂ. ಮೌಲ್ಯದ ಐದು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಹೊಳೆನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಹಾಗೂ ಜಯಲಕ್ಷ್ಮಿಪುರಂ, ಚನ್ನರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಬೈಕ್ ಕಳವು ಮಾಡಿದ್ದರು. ಜಯಲಕ್ಷ್ಮಿಪುರಂ, ನಜರಬಾದ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ದೇಗುಲಗಳ ಹುಂಡಿಗಳನ್ನು ದೋಚಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಇನ್ಸ್ಪೆಕ್ಟರ್ ಕುಮಾರ್, ಪಿಎಸ್ ಐ ಪ್ರಭುರಾಜ್, ಎಎಸ್ ಐ ಜಯರಾಮ್, ಸಿಬ್ಬಂದಿ ಅಭಿಷೇಕ್, ಬೆಂಜಮಿನ್, ಶ್ರೀನಿವಾಸ್, ಸುರೇಶ್, ದೇವರಾಜು, ಕಾಂತರಾಜು, ಭರತ್ ಕುಮಾರ್, ಸುಮಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮತ್ತೊಬ್ಬ ಆರೋಪಿ ಬಂಧನ : ಮತ್ತೊಬ್ಬ ಬೈಕ್ ಕಳ್ಳನನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು ನಗರ ಹಾಗೂ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಕಳವು ಪ್ರಕರಣಗಳನ್ನು ಭೇದಿಸಿ 2.10 ಲಕ್ಷ ರೂ. ಮೌಲ್ಯದ 5 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆತ ಮಂಡಿ, ವಿಜಯನಗರ, ವಿ.ವಿ.ಪುರಂ, ಕನಕಪುರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇನ್ಸ್ಪೆಕ್ಟರ್ ಎಸ್.ನಾಗೇಶ್, ಸಬ್ ಇನ್ಸ್ಪೆಕ್ಟರ್ ಪಿ. ಎಸ್. ರೇವಣ ಸಿದ್ದಪ್ಪ, ಎ.ಎಸ್.ಐ ಕೆ ಎಸ್ ಗುರುಸ್ವಾಮಿ, ಸಿಬ್ಬಂದಿ ರಾಜೇಂದ್ರ, ಜನಾರ್ಧನ್ ರಾವ್, ಮಹಮದ್ ಖಯೂಂ, ಕರಿಯಪ್ಪ, ಪ್ರಕಾಶ್ ರಾಥೋಡ್, ಮಂಜು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.