ಮೈಸೂರು: ನಟ ಪುನೀತ್ ರಾಜ್ಕುಮಾರ್ ಜನ್ಮದಿನವನ್ನು ಅವರ ಅಭಿಮಾನಿಗಳು ನಗರದಲ್ಲಿ ಗುರುವಾರ ವಿಜೃಂಭಣೆಯಿಂದ ಆಚರಿಸಿದ್ದು, ಬಿ.ಎಂ.ಹ್ಯಾಬಿಟೇಟ್ ಮಾಲ್ ಮುಂದೆ 70 ಅಡಿ ಎತ್ತರದ ಪುನೀತ್ ಅವರ ಕಟೌಟ್ ಹಾಕಿ ಹೆಲಿಕಾಪ್ಟರ್ ಮೂಲಕ ಹೂಮಳೆಗರೆಯಲಾಯಿತು.
ಎಸ್.ನಾಗೇಂದ್ರ, ಎಂ.ಕೆ.ವಿವೇಕ್, ಕೆ.ಹರ್ಷಿತ್, ಲಕ್ಷ್ಮೀಕಾಂತ್ ಹಾಗೂ ಎಂ.ಎನ್.ಈಶ್ವರ್ ಅವರು ಬೆಂಗಳೂರಿನಿಂದ ಕರೆಸಿದ ಹೆಲಿಕಾಪ್ಟರ್ನಿಂದ ಪುನೀತ್ ಅವರ ಕಟೌಟ್ಗೆ ಪುಷ್ಪನಮನ ಸಲ್ಲಿಸಲಾಯಿತು.
ನಂತರ, ಪಟಾಕಿ ಹೊಡೆದ ನೂರಾರು ಅಭಿಮಾನಿಗಳು ರಸ್ತೆಯಲ್ಲಿ ನರ್ತಿಸಿದರು. ಇಲ್ಲಿನ ಡಿಆರ್ಸಿ ಚಿತ್ರಮಂದಿರದಲ್ಲಿ ಒಟ್ಟು 18 ಪ್ರದರ್ಶನಗಳಲ್ಲಿ ಜೇಮ್ಸ್ ಚಿತ್ರ ತೆರೆ ಕಂಡಿದೆ.