ಮನೆ ಸುದ್ದಿ ಜಾಲ ನಟ ಪುನೀತ್ ರಾಜ್ ಕುಮಾರ್ ಕಟೌಟ್ ‍ಗೆ ಹೆಲಿಕಾಪ್ಟರ್ ಮೂಲಕ ಹೂಮಳೆ

ನಟ ಪುನೀತ್ ರಾಜ್ ಕುಮಾರ್ ಕಟೌಟ್ ‍ಗೆ ಹೆಲಿಕಾಪ್ಟರ್ ಮೂಲಕ ಹೂಮಳೆ

0

ಮೈಸೂರು: ನಟ ಪುನೀತ್‌ ರಾಜ್‌ಕುಮಾರ್ ಜನ್ಮದಿನವನ್ನು ಅವರ ಅಭಿಮಾನಿಗಳು ನಗರದಲ್ಲಿ ಗುರುವಾರ ವಿಜೃಂಭಣೆಯಿಂದ ಆಚರಿಸಿದ್ದು, ಬಿ.ಎಂ.ಹ್ಯಾಬಿಟೇಟ್ ಮಾಲ್‌ ಮುಂದೆ 70 ಅಡಿ ಎತ್ತರದ ಪುನೀತ್‌ ಅವರ ಕಟೌಟ್‌ ಹಾಕಿ ಹೆಲಿಕಾಪ್ಟರ್‌ ಮೂಲಕ ಹೂಮಳೆಗರೆಯಲಾಯಿತು.

ಎಸ್.ನಾಗೇಂದ್ರ, ಎಂ.ಕೆ.ವಿವೇಕ್, ಕೆ.ಹರ್ಷಿತ್, ಲಕ್ಷ್ಮೀಕಾಂತ್ ಹಾಗೂ ಎಂ.ಎನ್.ಈಶ್ವರ್ ಅವರು ಬೆಂಗಳೂರಿನಿಂದ ಕರೆಸಿದ ಹೆಲಿಕಾಪ್ಟರ್‌ನಿಂದ ಪುನೀತ್‌ ಅವರ ಕಟೌಟ್‌ಗೆ ಪುಷ್ಪನಮನ ಸಲ್ಲಿಸಲಾಯಿತು.

 ನಂತರ, ಪಟಾಕಿ ಹೊಡೆದ ನೂರಾರು ಅಭಿಮಾನಿಗಳು ರಸ್ತೆಯಲ್ಲಿ ನರ್ತಿಸಿದರು. ಇಲ್ಲಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಒಟ್ಟು 18 ಪ್ರದರ್ಶನಗಳಲ್ಲಿ ಜೇಮ್ಸ್‌ ಚಿತ್ರ ತೆರೆ ಕಂಡಿದೆ.

ಹಿಂದಿನ ಲೇಖನಜೇಮ್ಸ್ ಚಿತ್ರದ ತೆರಿಗೆ ವಿನಾಯಿತಿಗೆ ಸಿಎಂಗೆ ಪತ್ರ: ವಿಪಕ್ಷ ನಾಯಕಸಿದ್ಧರಾಮಯ್ಯ
ಮುಂದಿನ ಲೇಖನಸಾಮಾಜಿಕ ಕಾರ್ಯ‍ಕರ್ತರು ಅಶಕ್ತರ ನೆರವಿಗೆ ಮುಂದಾಗಿ: ಪ್ರೊ.ಜಿ.ಹೇಮಂತ್ ಕುಮಾರ್