ಮನೆ ಸಾಹಿತ್ಯ ಶರೀರದ ಪ್ರಾಥಮಿಕ ಕ್ರಿಯೆಗಳ ಏರುಪೇರು

ಶರೀರದ ಪ್ರಾಥಮಿಕ ಕ್ರಿಯೆಗಳ ಏರುಪೇರು

0

1. ಹಸಿವು, ಆಹಾರ ಸೇವನೆ ಹಸಿವು: ಕಡಿಮೆಯಾಗುತ್ತದೆ. ಬಾಯಿ ರುಚಿ ತಗ್ಗುತ್ತದೆ. ಆಹಾರ ಸೇವನೆ ಮಾಡಲು ಇಷ್ಟವಾಗುವುದಿಲ್ಲ. ಕೆಲವು ಸಲ ಹಸಿವು ಹೆಚ್ಚಾಗುತ್ತದೆ. ಪದೇಪದೇ ಏನನ್ನಾದರೂ ತಿನ್ನ ಬೇಕೆನ್ನಿಸುತ್ತದೆ. ಕುರುಕು ತಿಂಡಿಗಳು ಇಷ್ಟವಾಗುತ್ತದೆ.

Join Our Whatsapp Group

2. ನಿದ್ರೆ : ಎಷ್ಟೋ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ನಿದ್ರೆ ಹೆಚ್ಚಾಗುತ್ತದೆ. ಓದಲು ಕುಳಿತರೆ ಪುಸ್ತಕ ತೆರೆದರೆ ನಿದ್ರೆ ಬರುತ್ತದೆ ಎಂದು ದೂರುತ್ತಾರೆ ಕೆಲವು ಸಲ ಆತಂಕ ಭಯದಿಂದ ನಿದ್ರೆ ಬರುವುದಿಲ್ಲ ನಿದ್ರೆ ಬಂದು ಮಧ್ಯೆ ಎಚ್ಚರವಾಗಿಬಿಡುತ್ತದೆ ರಾತ್ರಿ ನಿದ್ರೆ ಮಾಡಿದರೂ ಬೆಳಿಗ್ಗೆ ಲವಲವಿಕೆ ಇರುವುದಿಲ್ಲ. ಹೀಗಾಗಿ ಸಾಕಷ್ಟು ವಿದ್ಯಾರ್ಥಿಗಳು ನಿದ್ರೆಯನ್ನು ಕಡಿಮೆ ಮಾಡಲುಡೆಕ್ಸಿಡ್ರಿನ್ ನಂತಹ ಮಾತ್ರೆಗಳು, ಕಾಫಿ, ಟೀ ನಂತಹ ಪೇಯಗಳ ಮೊರೆ ಹೋಗುತ್ತಾರೆ. ನಿದ್ದೆ ಬರದಿದ್ದಾಗ, ನಿದ್ರಾಮಾತ್ರೆಗಳನ್ನು ಸೇವಿಸುತ್ತಾರೆ.

 ಪರೀಕ್ಷಾ ಸಮಯದಲ್ಲಿ ಕಂಡುಬರುವ ರೋಗ ಲಕ್ಷಣಗಳು :

ಪರೀಕ್ಷಾ ಭಯ, ಒತ್ತಡದ, ಕಾರಣದಿಂದ ಶರೀರದ ಒಳ ಅಂಗಾಂಗಗಳ ಕಾರ್ಯ ನಿರ್ವಹಣೆ ಅಸ್ತವ್ಯಸ್ತಗೊಳ್ಳುತ್ತದೆ. ಜೊತೆಗೆ ರೋಗ ನಿರೋಧ ಶಕ್ತಿ ಕುಗ್ಗುತ್ತದೆ. ಹೀಗಾಗಿ ಶರೀರದೊಳಕ್ಕೆ ಬರಲು ಯತ್ನಿಸುವ ರೋರ್ಗಾಬಗಳ ಕೈಮೇಲಾಗಿ ವ್ಯಕ್ತಿ ಅನೇಕ ಬಗೆಯ ಸೋಂಕು ರೋಗಗಳಿಗೆ ತುತ್ತಾಗಬಹುದು. ಪರೀಕ್ಷಾ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ರೋಗಪೀಡಿತರಾಗುತ್ತಾರೆ. ಪರೀಕ್ಷೆ ಇನ್ನು ಒಂದೆರಡು ದಿನಗಳಿವೆ ಎಂದಾಗ ಈ ರೀತಿಯ ಕಾಯಿಲೆ ಬಂದು ವಿದ್ಯಾರ್ಥಿಯ ಸ್ಥಿತಿ ಶೋಚನೀಯವಾಗುತ್ತದೆ. ಪರೀಕ್ಷೆಗೆ ಹೋಗಲಾರದೇ ಹೋದರೂ ಸರಿಯಾಗಿ ಬರೆಯಲಾಗದೇ ಅವರ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಪರೀಕ್ಷಾ ಸಮಯದಲ್ಲಿ ಕಂಡುಬರುವ ಸಾಮಾನ್ಯ ರೋಗಲಕ್ಷಣಗಳಿವು

1. ಜೀರ್ಣಾಂಗಗಳಿಗೆ ಸಂಬಂಧಿಸಿದ ಲಕ್ಷಣಗಳು : ವಾಕರಿಕೆ, ವಾಂತಿ, ಪದೇ ಪದೇ ಮಲವಿಸರ್ಜನೆಯ ಸೂಚನೆ. ಭೇದಿ, ಅಜೀರ್ಣ, ಹೊಟ್ಟೆ ಉರಿ, ಹೊಟ್ಟೆ ಉಬ್ಬರ, ಹೊಟ್ಟೆನೋವು ಇತ್ಯಾದಿ.

2 ಸೋಂಕು ರೋಗಗಳು : ಟಾನ್ಸಿಲೈಟಿಸ್, ಮುಖದ ಮೂಳೆಯ ಕುಳಿಗಳ ಉರಿತ (ಸೈನುಸೈಟಿಸ್) ಚರ್ಮದಲ್ಲಿ ಹುಣ್ಣು, ಕೀವು ಗಂಟು ಟೈಫಾಯಿಡ್, ನ್ಯುಮೋನಿಯಾ, ಅಪೆಂಡಿಸೈಟಿಸ್ ಆಮಶಂಕೆ ಭೇದಿ, ಮೂತ್ರದ ಸೋಂಕು. ಅಪೆಂಡಿಸೈಟಿಸ್,

3. ನೋವು : ಒತ್ತಡದ ತಲೆನೋವು, ಎದೆನೋವು, ಬೆನ್ನು ನೋವು.

4 ಆನುವಂಶಿಕವಾಗಿ ಬರಬಹುದಾದ ಸಿಹಿಮೂತ್ರರೋಗ, ಅಧಿಕ ರಕ್ತದ ಒತ್ತಡ ಈ ಸಮಯದಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಳ್ಳಬಹುದು.

ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆಯ ದಿನ, ಪರೀಕ್ಷಾ ಭಯ ವಿಪರೀತವಾದಾಗ ವಿದ್ಯಾರ್ಥಿ ಪರೀಕ್ಷಾ ಕೊಠಡಿಯೊಳಕ್ಕೆ ಹೋಗಲು ನಿರಾಕರಿಸಬಹುದು. ನನ್ನಿಂದಾಗುವುದಿಲ್ಲ ಎಂದು ಮನೆಗೆ ವಾಪಸ್ ಹೋಗಬಹುದು.

      ಪರೀಕ್ಷಾ ಕೊಠಡಿಯಲ್ಲಿ ಕುಳಿತ ವಿದ್ಯಾರ್ಥಿ ಗರಬಡಿದವನಂತೆ ಆಡಬಹುದು. ಬಿಳಿಚಿಕೊಂಡ ಮುಖ, ಬೆವರಿಳಿಯುವ ಶರೀರ, ನಡುಗುವ ಕೈಗಳು ಒಣಗಿ ಹೋದ

ಬಾಯಿ, ಮಾತು ಹೊರಡದಂತಹ ಸ್ಥಿತಿಯನ್ನು ಕಾಣಬಹುದು ಕೆಲವರು ಈ ಸ್ಥಿತಿಯಲ್ಲಿ ಮೈ ಮರೆತಕ್ಕೆ (Fainting) ಒಳಗಾಗುತ್ತಾರೆ.

ಕೆಲವರಿಗೆ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದಾಗ ಅದನ್ನು ಓದಲಾರರು ಓದಿದರೂ ಅರ್ಥ ಮಾಡಿಕೊಳ್ಳಲಾರರು. ಯಾವ ಪ್ರಶ್ನೆಗೆ ಏನು ಉತ್ತರ ಬರೆಯಬೇಕೆಂದು ತಿಳಿಯದೆ ಸ್ವಲ್ಪ ಹೊತ್ತು ಸುಮ್ಮನೆ ಕೂರಬಹುದು. ಏನೂ ಬರೆಯಲಾಗದೇ ಖಾಲಿ ಉತ್ತರ ಪತ್ರಿಕೆಯನ್ನು ಕೊಟ್ಟು ಹೊರಬರಬಹುದು.

ಕೆಲವರು ದೈನ್ಯತೆಯಿಂದ ಸಹಾಯಕ್ಕಾಗಿ ಮೇಲ್ವಿಚಾರಕರ ಮೊರೆ ಹೋಗ ಬಹುದು, ಉತ್ತರ ಹೇಳಿ ಎಂದೋ ಅಥವಾ ಪಕ್ಕದ ಅಭ್ಯರ್ಥಿಯ ನೆರವು ಕೊಡಿಸಿ ಎಂದು ಬೇಡಿಕೊಳ್ಳಬಹುದು.

 ಯಾರು ತೀವ್ರ ಪರೀಕ್ಷಾ ಭಯಕ್ಕೆ ಒಳಗಾಗುತ್ತಾರೆ ?

ಸಹಜವಾಗಿ ಎಲ್ಲರಲ್ಲಿ ಅಲ್ಪ ಪ್ರಮಾಣದಲ್ಲಿ ಕಂಡುಬರುವ ಪರೀಕ್ಷಾ ಭಯ ಯಾರಲ್ಲಿ ಮತ್ತು ಯಾವ ಕಾರಣಗಳಿಂದಾಗಿ ತೀವ್ರ ಭಯವಾಗಿ ಮಾರ್ಪಾಟು ಹೊಂದುತ್ತದೆ.

1 ಟೈಪ್ ‘ಎ’ ವ್ಯಕ್ತಿತ್ವದವರಲ್ಲಿ ತಮ್ಮ ಯೋಗ್ಯತೆಯನ್ನು ಮೀರಿದ ಮಹತ್ವಾಕಾಂಕ್ಷೆ ಎಲ್ಲರಿಗಿಂತ ತಾನು ಮುಂದಿರಬೇಕು ಹಿಂದೆ ಬಿದ್ದರೆ ತನ್ನ ವ್ಯಕ್ತಿತ್ವಕ್ಕೆ ಅವಮಾನ ಎಂದು ತಿಳಿಯುವುದು. ಗಡಿಬಿಡಿ ಎಲ್ಲವನ್ನೂ ಆಚ್ಚುಕಟ್ಟಾಗಿ ಪರಿಪೂರ್ಣವಾಗಿ (Perfection) ಮಾಡ ಬೇಕೆಂಬ ಹಂಬಲ, ಇತರರನ್ನು ನಂಬದಿರುವುದು, ಟೀಕಿಸುವ ಪ್ರವೃತ್ತಿ ಇವೆಲ್ಲ ಟೈಪ್ ‘ಎ’ ವ್ಯಕ್ತಿತ್ವದ ಲಕ್ಷಣಗಳು ಇವರಲ್ಲಿ ಪರೀಕ್ಷಾ ಭಯ ಹೆಚ್ಚು

2. ಆಯಾ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಕ್ರಮವಾಗಿ ಓದದೇ ಪರೀಕ್ಷೆಗೆ ಕಡೇ ಹಂತದಲ್ಲಿ ಓದಿನ ಸಿದ್ಧತೆಯನ್ನು ಮಾಡುವವರಲ್ಲಿ ಪರೀಕ್ಷಾ ಭಯ ಹೆಚ್ಚು

3 ತಾನು ಆಯ್ದುಕೊಂಡ ಕೋರ್ಸ್ ಅಥವಾ ವಿಷಯಗಳ ಬಗ್ಗೆ ಯಾವ ವಿದ್ಯಾರ್ಥಿಗೆ ಆಸಕ್ತಿ ಇಲ್ಲ ಅಥವಾ ಅದು ಕಷ್ಟಕರವಾಗಿ ತೋರುತ್ತದೆ. ಆತನಿಗೆ ಭಯ ಹೆಚ್ಚಿರುತ್ತದೆ.

3 ‘ಯಾವ ವಿದ್ಯಾರ್ಥಿ ಎಲ್ಲ ಅಧ್ಯಾಯಗಳನ್ನು ಓದದೆ ಕೆಲವೇ ಅಧ್ಯಾಯಗಳನ್ನು ಓದಿ ಅಥವಾ ಒಂದಿಷ್ಟು ಪ್ರಶ್ನೆಗಳನ್ನು ಆಯ್ದು ಅದಕ್ಕೆ ಉತ್ತರಿಸಲು ಸಿದ್ಧತೆ ಮಾಡುತ್ತಾನೋ ಅವನಿಗೆ ಈ ಅಧ್ಯಾಯಗಳು ಅಥವಾ ಪ್ರಶ್ನೆಗಳನ್ನು ಬಿಟ್ಟು ಬೇರೆ ಪ್ರಶ್ನೆಗಳು

ಮನಸ್ಸಿಗೇಕೆ ಬಂದರೆ ಎಂಬ ಆಲೋಚನೆಯಿಂದ ಭಯ ಹೆಚ್ಚಿರುತ್ತದೆ. ನಾನು ಎಲ್ಲವನ್ನೂ ಓದಿಲ್ಲವಲ್ಲ ಎಂಬ ತಪ್ಪಿತಸ್ಥ ಭಾವನೆಯೂ ಭಯಕಾರಕ ವಾಗುತ್ತದೆ.

5. ಯಾವ ವಿದ್ಯಾರ್ಥಿ, ತನ್ನನ್ನು ಇತರ ಸಹಪಾಠಿಗಳೊಂದಿಗೆ ಹೋಲಿಸಿ ಕೊಂಡು ತಾನು ಅವರಷ್ಟು ಓದಿಲ್ಲ ಎಂದು ತೀರ್ಮಾನಕ್ಕೆ ಬರುತ್ತಾನೋ ಅವನಿಗೆ ಭಯ ಹೆಚ್ಚು.

6. ದೈಹಿಕ ಆರೋಗ್ಯ ಸರಿಯಿಲ್ಲದೆ ಆಗಿಂದಾಗ್ಗೆ ಕಾಯಿಲೆ ಬೀಳುವವರಲ್ಲಿ ಅಥವಾ ದೀರ್ಘ ಕಾಲದ ಅನಾರೋಗ್ಯವಿರುವ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ತೀವ್ರವಾಗಿರಬಹುದು.

7. ಈ ಹಿಂದೆ ಪರೀಕ್ಷೆಗಳಲ್ಲಿ ಫೇಲಾಗಿದ್ದರೆ ಅಥವಾ ಪ್ರಯತ್ನಪಟ್ಟರೂ ನಿರೀಕ್ಷಿತ ಮಟ್ಟವನ್ನು ಮುಟ್ಟಲಾಗಿಲ್ಲವಾದರೆ ಅಂಥವರಲ್ಲಿ ಭಯ ಹೆಚ್ಚು

8. ಆತಂಕ, ಖಿನ್ನತೆಯಂತಹ ಮಾನಸಿಕ ರೋಗಗಳಿದ್ದರೆ ಅವು ಪರೀಕ್ಷಾ ಭಯವನ್ನು ವೃದ್ಧಿಸುತ್ತವೆ.

9. ಜೀವನದ ತಿರುವಿನಲ್ಲಿರುವವರು ಉದಾ, ಪರೀಕ್ಷೆ ಮುಗಿದ ತಕ್ಷಣ ಅದರ ಫಲಿತಾಂಶದ ಆಧಾರದ ಮೇಲೆ ಮದುವೆಯಾಗಬೇಕೇ, ಓದನ್ನು ನಿಲ್ಲಿಸಿ ವೃತ್ತಿ ಹಿಡಿಯಬೇಕೇ, ತಂದೆ ತಾಯಿಗಳಿಂದ ದೂರ ವಿದ್ದು ಸ್ವಾವಲಂಬಿಯಾಗಬೇಕೇ ಎಂದು ನಿರ್ಧಾರಕ್ಕೆ ಬರಬೇಕಾದ ವರಿಗೆ ಆತಂಕ ಹೆಚ್ಚು ತಮಗಿರುವ ಸಮಯ, ಸವಲತ್ತುಗಳು, ಇತರೆ ಅನುಕೂಲಗಳನ್ನು ವಿಚಕ್ಷಣೆಯಿಂದ ಬಳಸಲು ಕಲಿಯದವರಲ್ಲಿ, ಶಿಸ್ತಿನ ಜೀವನವನ್ನು ನಡೆಸಲು ಆಗದವರಲ್ಲಿ ಕೀಳರಿಮೆಯಿಂದ ಬಳಲುವವರಲ್ಲಿ ಪರೀಕ್ಷಾ ಭಯ ಹೆಚ್ಚು.