ಮನೆ ಸುದ್ದಿ ಜಾಲ ಆಹಾರ ತಯಾರಿಕ ಘಟಕ, ಅಂಗಡಿಗಳ ಪರಿಶೀಲನೆ ಬಗ್ಗೆ ಗಮನಹರಿಸಿ: ಜಿಲ್ಲಾಧಿಕಾರಿ

ಆಹಾರ ತಯಾರಿಕ ಘಟಕ, ಅಂಗಡಿಗಳ ಪರಿಶೀಲನೆ ಬಗ್ಗೆ ಗಮನಹರಿಸಿ: ಜಿಲ್ಲಾಧಿಕಾರಿ

0

ಮಂಡ್ಯ: ಆಹಾರ  ಸುರಕ್ಷತೆ ಮತ್ತು ಗುಣಮಟ್ಟತೆ  ಕಾಯ್ದೆಯಡಿಯಲ್ಲಿ ಆಹಾರ ತಯಾರಿಕಾ ಘಟಕಗಳು, ಅಂಗಡಿಗಳು, ಉಗ್ರಾಣಗಳನ್ನು ಪ್ರತಿಯೊಬ್ಬ ಆಹಾರ ಸುರಕ್ಷತಾ  ಅಧಿಕಾರಿಯು ವಾರಕ್ಕೆ ಕನಿಷ್ಠ ಎರಡು ಬಾರಿ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಂಭಾಗಣದಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಹಾರ ಪದಾರ್ಥಗಳ ತಯಾರಿಕೆ, ವಿತರಣೆ, ಶೇಖರಣೆ ಮಾಡುವ ಎಲ್ಲಾ ಆಹಾರ ವ್ಯಾಪಾರಸ್ಥರು  (Food Business Operator)  ಆಹಾರ ಸುರಕ್ಷತೆ ಮತ್ತು  ಗುಣಮಟ್ಟ  (FSS Act-2006  ಸೆಕ್ಷನ್-31) ಕಾಯ್ದೆಯಡಿಯಲ್ಲಿ ಕಡ್ಡಾಯವಾಗಿ ಪರವಾನಗಿ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು ಹೇಳಿದರು.
ನ್ಯಾಯಬೆಲೆ ಅಂಗಡಿಗಳು, ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುವ ಎಲ್ಲಾ ಶಾಲೆಗಳು, ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ಎಲ್ಲಾ ಸರ್ಕಾರಿ ಅಥವಾ ಖಾಸಗಿ ಉಗ್ರಾಣಗಳು, ಹಣ್ಣಿನ ವಿತರಕರು, ಮಾರಾಟಗಾರರು ಹಾಗೂ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳು, ಮಾಂಸ ಮಾರಾಟಗಾರರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ -2006 ಕಾಯ್ದೆಯಡಿ ಕಡ್ಡಾಯವಾಗಿ ಪರವಾನಗಿ ಪಡೆಯಬೇಕಾಗಿರುತ್ತದೆ ಎಂದು  ತಿಳಿಸಿದರು.
ಮಾದರಿ ಸಂಗ್ರಹಣೆ 2021 ಸಾಲಿನಲ್ಲಿ ಆಗಸ್ಟ್ 16 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ವಾರ 07 ಕಾನೂನಾತ್ಮಕ ಆಹಾರ ಮಾದರಿಗಳು ಹಾಗೂ 07 ಸರ್ವೇ ಸ್ಯಾಂಪಲ್ ಆಹಾರ ಮಾದರಿಗಳನ್ನು ತೆಗೆದು ಆಹಾರ ಪ್ರಯೋಗ ಶಾಲೆಗೆ ಕಳುಹಿಸಲಾಗಿತ್ತು ಎಂದರು.
ಧಾನ್ಯಗಳು, ಮಸಾಲ ಪದಾರ್ಥಗಳು, ಹಣ್ಣು  ಮತ್ತು  ತರಕಾರಿಗಳು, ಆಡುಗೆ ಎಣ್ಣೆ, ಕೊಬ್ಬಿನಾಂಶ ಪದಾರ್ಥಗಳು, ಉತ್ಪನ್ನಗಳು, ಮತ್ತು ಚಾಕೋಲೇಟ್ಸ್, ಮೊಟ್ಟೆ, ನ್ಯೂಟ್ರಾಸಿಟಿಕಲ್ ಉತ್ಪನ್ನಗಳು,  Ready to Eat     ಆಹಾರ ಪದಾರ್ಥಗಳು, ಬೆಲ್ಲ ನೀರಿನ ಉತ್ಪನ್ನಗಳು ಹಾಗೂ ಕಾಫಿ, ಟೀ ಆಹಾರ ಪದಾರ್ಥಗಳನ್ನು ವಿಶ್ಲೇಷಣೆಗೆ ಕಳುಹಿಸಲಾಯಿತು ಎಂದು ಸೂಚಿಸಿದರು.
ಅನಧಿಕೃತ ಪ್ಯಾಕೇಜ್ ಕುಡಿಯುವ ನೀರಿನ ತಯಾರಿಕೆ, ವಿತರಣೆ, ಮಾರಾಟವನ್ನು ರಾಜ್ಯ ಉಚ್ಚ ನ್ಯಾಯಾಲಯವು ನಿಷೇಧಿಸಿರುವ ಹಿನ್ನೆಲೆಯಲ್ಲಿ, ಪ್ಯಾಕೇಜ್ ಕುಡಿಯುವ ನೀರಿನ ತಯಾರಿಕೆ, ವಿತರಣೆ, ಮಾರಾಟ ಮಾಡುವವರು ಕಡ್ಡಾಯವಾಗಿ BIS  ಸಂಸ್ಥೆಯಿAದ  ISI  ಪ್ರಮಾಣ ಪತ್ರವನ್ನು ಹಾಗೂ FSSAI    ನಿಂದ ಪರವಾನಗಿ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು.