ಹೊಸದಿಲ್ಲಿ: ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿದೆ. ಈ ಪಟ್ಟಿಗೆ ಹೊಸತಾಗಿ 25 ಮಂದಿ ಶ್ರೀಮಂತ ಭಾರತೀಯರು ಸೇರ್ಪಡೆಯಾಗಿದ್ದಾರೆ.
ಈ ಪಟ್ಟಿಯಲ್ಲಿ 116 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಾಗತಿಕವಾಗಿ 9ನೇ ಸ್ಥಾನದಲ್ಲಿ, ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 84 ಬಿಲಿಯನ್ ಡಾಲರ್ ಆಸ್ತಿ ಯೊಂದಿಗೆ ಅದಾನಿ ಗ್ರೂಪ್‌ನ ಗೌತಮ್ ಅದಾನಿ ದೇಶದ ಎರಡನೇ, ವಿಶ್ವದ 17ನೇ ಸಿರಿವಂತ ವ್ಯಕ್ತಿಯಾಗಿದ್ದಾರೆ.
ಲ್ಯಾಂಡ್ ಮಾರ್ಕ್ ಗ್ರೂಪ್ ನ ರೇಣುಕಾ ಜಗ್ತಿಯಾನಿ ಕೂಡ ಹೊಸ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ದ್ದು, ಅತೀ ಹೆಚ್ಚು ಸಿರಿವಂತರಿರುವ 3ನೇ ದೇಶ ಭಾರತವಾಗಿದೆ.
– ಮುಕೇಶ್ ಅಂಬಾನಿ 166 ಬಿಲಿಯನ್ ಡಾಲರ್
– ಗೌತಮ್ ಅದಾನಿ 84 ಬಿಲಿಯನ್ ಡಾಲರ್
– ಶಿವ ನಾಡಾರ್ 36.9 ಬಿಲಿಯನ್ ಡಾಲರ್
– ಸಾವಿತ್ರಿ ಜಿಂದಾಲ್ 33.5 ಬಿಲಿಯನ್ ಡಾಲರ್