ಮನೆ ರಾಜಕೀಯ ಕೇಸರಿ ಶಾಲು, ಹಿಜಾಬ್ ವಿವಾದ: ಸಿಎಂಗೆ ತನ್ವೀರ್ ಸೇಠ್ ಪತ್ರ

ಕೇಸರಿ ಶಾಲು, ಹಿಜಾಬ್ ವಿವಾದ: ಸಿಎಂಗೆ ತನ್ವೀರ್ ಸೇಠ್ ಪತ್ರ

0

ಮೈಸೂರು: ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಕಾರಣಕ್ಕಾಗಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪ್ರತ್ಯೇಕ ಪತ್ರ ಬರೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇಸ್ಲಾಂ ನಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು ಪದ್ದತಿ, ಸಿಖ್ ನಲ್ಲಿ ಪೇಟ ಧರಿಸುವುದು ಪದ್ಧತಿ,‌ ಕ್ರೈಸ್ತರಲ್ಲಿ ಸ್ಕರ್ಟ್ ಧರಿಸುವುದು ಪದ್ಧತಿ ಮತ್ತು ಅನಾದಿ ಕಾಲದ ಸಂಪ್ರದಾಯ. ಇದಕ್ಕೆ ಇಲ್ಲಿಯವರೆಗೂ ಯಾವುದೇ ನಿಷೇಧ ತಡೆಯಾಗಲಿ ನೀಡಿಲ್ಲ. ನಾನು ಶಿಕ್ಷಣ ಸಚಿವನಾಗಿದ್ದಾಗ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಸ್ಕರ್ಟ್ ಮತ್ತು ಶರ್ಟ್ ಸಮವಸ್ತ್ರದ ಬದಲಿಗೆ ಚೂಡಿದಾರ್ ಸಮವಸ್ತ್ರವನ್ನು ಜಾರಿಗೊಳಿಸಿದ್ದೆ ಎಂದರು.

ಇದನ್ನೂ ಓದಿ…ಹಿಜಾಬ್ ಧರಿಸುವವರು ಧರಿಸಲಿ, ಧರಿಸದವರ ಮೇಲೆ ಒತ್ತಡ ಬೇಡ: ಸಿಎಂ ಇಬ್ರಾಹಿಂ

ಪ್ರತಿಯೊಂದು ಧರ್ಮದಲ್ಲೂ ವಯಸ್ಸಿಗನುಗುಣವಾಗಿ ವಸ್ತ್ರ ಧರಿಸುವುದು ಸಾಮಾನ್ಯ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ಸರ್ಕಾರದ ಕರ್ತವ್ಯ. ಉಡುಪಿ ಕಾಲೇಜಿನ ಪ್ರಾಂಶುಪಾಲರ ನಡೆ ಮಕ್ಕಳಲ್ಲಿ ಜಾತಿ ಭೇ಼ದ ಹುಟ್ಟು ಹಾಕುತ್ತಿದೆ. ಇದು ಸಮಾಜಕ್ಕೆ‌ ಮಾರಕ ಆತಂಕಕಾರಿ ಪರಿಸ್ಥಿತಿ ಕೈ ಮೀರುವ ಮುನ್ನ ಸರ್ಕಾರ ಸೂಕ್ತ ನಿರ್ದೇಶನ ನೀಡಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು  ತನ್ವೀರ್ ಸೇಠ್ ಒತ್ತಾಯಿಸಿದ್ದಾರೆ.

ಹಿಂದಿನ ಲೇಖನಮುಂಬೈ ಸರಣಿ ಬ್ಲಾಸ್ಟ್ ನ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬುಬಕರ್ ಬಂಧನ
ಮುಂದಿನ ಲೇಖನಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ನಿಧನ