ಮನೆ ಸಾಹಿತ್ಯ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿ ರಚನೆ: ಪ್ರಶಸ್ತಿಗೆ ನಾಮ ನಿರ್ದೇಶನಗಳ ಆಹ್ವಾನ

ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿ ರಚನೆ: ಪ್ರಶಸ್ತಿಗೆ ನಾಮ ನಿರ್ದೇಶನಗಳ ಆಹ್ವಾನ

0

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2019ನೇ ಕ್ಯಾಲೆಂಡರ್ ವರ್ಷದಿಂದ 2023ನೇ ಕ್ಯಾಲೆಂಡರ್ ವರ್ಷಗಳಿಗೆ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿ ರಚಿಸಲಾಗಿದ್ದು,ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

Join Our Whatsapp Group

ಆಯ್ಕೆ ಸಮಿತಿ

ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ,ಶಾಂತಲಾ ಧರ್ಮರಾಜ್ ಹಾಗೂ ಎಂ.ಎಸ್.ಮಣಿ ಸದಸ್ಯರಾಗಿದ್ದಾರೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ-

 ಕನ್ನಡದ ಹಿರಿಯ ಪರ್ತಕರ್ತ ಟಿ.ಎಸ್. ರಾಮಚಂದ್ರರಾವ್ ಅವರ ನೆನಪಿನಲ್ಲಿ ಸರ್ಕಾರ ಟಿಯೆಸ್ಸಾರ್  ನಿಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತ 2 ಲಕ್ಷ ರೂ ಆಗಿದ್ದು, ಕನ್ನಡ ಪತ್ರಿಕೋದ್ಯಮ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಅಥವಾ ಎರಡರಲ್ಲೂ ಒಟ್ಟಿಗೆ ಕನಿಷ್ಠ 30 ವರ್ಷಗಳ ಸೇವೆ ಸಲ್ಲಿಸಿರಬೇಕು. ಜೊತೆಗೆ ಕನ್ನಡ ಕ್ಷೇತ್ರಕ್ಕೆ ಭಾಷೆಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುವವರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರತಿ ಕ್ಯಾಲೆಂಡರ್ ವರ್ಷಕ್ಕೆ ಒಬ್ಬರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುವುದು.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ-

 ಪತ್ರಿಕಾ ರಂಗದ ಭೀಷ್ಮರೆಂದೇ ಹೆಸರಾದ ಮೊಹರೆ ಹಣಮಂತರಾಯ ಅವರ ನೆನಪಿನಲ್ಲಿ ಸರ್ಕಾರವು  ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತವು 2 ಲಕ್ಷ ರೂ ಆಗಿದ್ದು,  ಕನ್ನಡದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಾವುದೇ ಪತ್ರಿಕೆಯನ್ನು ಅಥವಾ ಪತ್ರಿಕಾ ಸಮೂಹವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ ಹಾಗೂ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ, ವೃತ್ತಿಯಲ್ಲಿ ಪತ್ರಿಕಾಲಯದ ಮಾಲೀಕರು, ಆಡಳಿತಗಾರರಾಗಿ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿರಬೇಕು.

ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು, ಮಾಧ್ಯಮ ಸಂಸ್ಥೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪೂರ್ಣ ದಾಖಲೆಗಳೊಂದಿಗೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾಸೌಧ, ನಂ. 17, ಭಗವಾನ್ ಮಹಾವೀರರಸ್ತೆ, ಬೆಂಗಳೂರು – 560 001 ಇಲ್ಲಿಗೆ 2024ನೇ ಜುಲೈ 25ರ ಸಂಜೆ 5.30 ಗಂಟೆ ಒಳಗಾಗಿ ಕಳುಹಿಸಿಕೊಡಬಹುದಾಗಿದೆ. ಅಥವಾ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿ ಮೂಲಕ ಇಲ್ಲವೇ tsraward@gmail.com ಇಮೇಲ್ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸಿಕೊಡಬಹುದಾಗಿದೆ.

ಹಿಂದಿನ ಲೇಖನದಿನವೊಂದಕ್ಕೆ 1ಕೋಟಿ ಲೀ.ಹಾಲು ಉತ್ಪಾದನೆ: ಕೆಎಂಎಫ್ ಇತಿಹಾಸದಲ್ಲಿಯೇ  ಇದೊಂದು ಮೈಲಿಗಲ್ಲು:  ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನಎತ್ತಲೋ ಮಾಯವಾದ ಮುತ್ತಿನ