ಮನೆ ಸುದ್ದಿ ಜಾಲ ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರ ಭಾಗಿ ಆರೋಪ: ಸಿಐಡಿಗೆ ವಕೀಲರಿಂದ ದೂರು

ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರ ಭಾಗಿ ಆರೋಪ: ಸಿಐಡಿಗೆ ವಕೀಲರಿಂದ ದೂರು

0

ಬೆಂಗಳೂರು(Bengaluru): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರ ಭಾಗಿಯಾಗಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಸಿಐಡಿ ಎಡಿಜಿಪಿಗೆ ವಕೀಲರ ನಿಯೋಗ ದೂರು ನೀಡಿದೆ.

ವಕೀಲ ಎಪಿ ರಂಗನಾಥ್ ನೇತೃತ್ವದಲ್ಲಿ ಸಿಐಡಿ ಕಚೇರಿಗೆ ತೆರಳಿದ ವಕೀಲರ ನಿಯೋಗವು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ. ಈಗಾಗಲೇ ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅಕ್ರಮದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂಬುದಾಗಿ ದೂರು ನೀಡಿದೆ.

ಅಲ್ಲದೆ ಪಿಎಸ್ ಐ ಅಕ್ರಮ ನೇಮಕಾತಿಯಲ್ಲಿ ಸಚಿವ ಅಶ್ವಥ್ ನಾರಾಯಣ್ ಹಾಗೂ ಮಾಜಿ ಸಿಎಂ ಮಗ ಭಾಗಿಯಾಗಿದ್ದಾರೆ. ಮಾಜಿ  ಸಿಎಂ ಪುತ್ರ ವಿರುದ್ಧ 63 ಅಭ್ಯರ್ಥಿಗಳಿಂದ ಹಣ ಪಡೆದು ಕೆಲಸ ಕೊಡಿಸದ ಆರೋಪ ಕೇಳಿ ಬಂದಿದೆ. ಒಬ್ಬೊಬ್ಬ ಅಭ್ಯರ್ಥಿಯಿಂದ  50ರಿಂದ 70 ಲಕ್ಷ ಹಣ ಪಡೆದಿದ್ದಾರೆಂದು ಆರೋಪಿಸಿ ದೂರು ನೀಡಲಾಗಿದೆ.