ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರಕರಣವೊಂದರ ಸಂಬಂಧ ಎಐಎಡಿಎಂಕೆ ನಾಯಕ, ತಮಿಳುನಾಡು ಮಾಜಿ ಸಚಿವ ಸಿ. ವಿಜಯಭಾಸ್ಕರ್ ಹಾಗೂ ಚೆನ್ನೈ ಮೂಲದ ರಿಯಲ್ ಎಸ್ಟೇಸ್ ಕಂಪನಿಯೊಂದರ ಮೇಲೆ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸುಮಾರು 25 ಸ್ಥಳಗಳಲ್ಲಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಅವರ ವಿರುದ್ಧ 2022ರಲ್ಲಿ ರಾಜ್ಯ ಕಾವಲು ದಳ ನಡೆಸಿದ್ದ ತನಿಖೆಯ ಆಧಾರದಲ್ಲಿ ಈ ದಾಳಿ ನಡೆದಿದೆ ಎಂದು ಗೊತ್ತಾಗಿದೆ.
ಚೆನ್ನೈ ಹಾಗೂ ಸುತ್ತಮುತ್ತ ಇರುವ ಜಿಸ್ಕ್ವಾರ್ ರಿಯಲ್ ಎಸ್ಟೇಟ್ ಸಮೂಹ ಸಂಸ್ಥೆಗೆ ಸಂಬಂಧಿಸಿದ ಸ್ಥಳಗಳಲ್ಲಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಈ ದಾಳಿ ನಡೆದಿದೆ.
ಈ ಹಿಂದೆ ಗುಟ್ಕಾ ಹಗರಣದಲ್ಲಿ ವಿಜಯಭಾಸ್ಕರ್ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿತ್ತು.