ಮನೆ ರಾಜ್ಯ ಮಹಿಳೆಯರಿಗೆ ಉಚಿತ ಬಸ್ ಪಾಸ್: ಮನೆಯಿಂದ 50 ಕಿ.ಮೀವರೆಗೆ ಮಾತ್ರ ?

ಮಹಿಳೆಯರಿಗೆ ಉಚಿತ ಬಸ್ ಪಾಸ್: ಮನೆಯಿಂದ 50 ಕಿ.ಮೀವರೆಗೆ ಮಾತ್ರ ?

0

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ 5 ಗ್ಯಾರಂಟಿಗಳನ್ನು ಷರತ್ತುಗಳ ಜೊತೆ ಅನ್ವಯಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.

Join Our Whatsapp Group

ಯಾವ ಯೋಜನೆಗಳಿಗೆ ಎಷ್ಟು ಕಂಡೀಷನ್ ಹಾಕಬೇಕು, ಯೋಜನೆಗಳ ಮಾರ್ಗ ಎಂದು ಮಾರ್ಗಸೂಚಿ ಸಿದ್ದಪಡಿಸಿಕೊಂಡು ಬರುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಫ್ರೀ ಬಸ್ ಪಾಸ್ ಪಡೆಯಲು ಷರತ್ತುಗಳು

  • ಮಹಿಳೆಯರು ಕರ್ನಾಟಕದವರೇ ಆಗಿರಬೇಕು.
  • ಈ ಪಾಸ್ ನೀಡಲು ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಲು ಚಿಂತನೆ ನಡೆಸಿದೆ.
  • ಕೆಂಪು ಬಸ್ ಗಳಲ್ಲಿ ಮಾತ್ರ ಫ್ರೀ ಬಸ್ ಪಾಸ್ ಅನ್ವಯವಾಗಲಿದೆ.
  • ತಮ್ಮ ಊರಿನಿಂದ 50 ಕಿಮೀ.ವರೆಗೆ ಮಾತ್ರ ಪ್ರಯಾಣ ಮಾಡಬಹುದು.

ಈ ಎಲ್ಲಾ ಕಂಡೀಷನ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಮುಂದಿನ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ 5 ಇಲಾಖೆಗಳ ಜೊತೆಗೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಜೂನ್ 1 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ  ಯೋಜನೆ ಜಾರಿಗೆ ತರುವ ಸಂಬಂಧ ಅಧಿಕಾರಿಗಳಿಗೆ ಡೇಟಾ ಸಂಗ್ರಹಣೆ ಮಾಡುವಂತೆ ಹಾಗೂ ಗ್ಯಾರಂಟಿ ಯೋಜನೆಗಳ ಜಾರಿಗೆ ಎಷ್ಟು ಹಣ ಬೇಕು ? ಯಾವ ರೀತಿ ಯೋಜನೆಗಳನ್ನು ಜಾರಿಗೆ ತರಬೇಕು ? ಮಹಿಳೆಯರಿಗೆ 2000 ರೂ ನೀಡಲು ಅಂಕಿ-ಅಂಶಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆ ಹಿರಿಯ ಅಧಿಕಾರಿ ಐಎಸ್.ಎನ್. ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದು, 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಿದ್ದತೆ ನಡೆಸುವಂತೆ ಸೂಚನೆ ನೀಡಿದ್ದರು.

ಕಾಂಗ್ರೆಸ್ ನ 5 ಗ್ಯಾರಂಟಿ ಯೋಜನೆಗಳು

ಗೃಹಲಕ್ಷ್ಮಿ ಯೋಜನೆ- ಪ್ರತಿತಿಂಗಳು ಮಹಿಳೆಯರಿಗೆ 2 ಸಾವಿರ ರೂ.

ಗೃಹಜ್ಯೋತಿ-200 ಯುನಿಟ್ ಉಚಿತ ವಿದ್ಯುತ್

ಅನ್ನಭಾಗ್ಯ-10 ಕೆಜಿ ಅಕ್ಕಿ ಉಚಿತ

ಶಕ್ತಿ-ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ

ಯುವನಿಧಿ- ಪದವೀಧರರಿಗೆ 3000 ರೂ., ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1500 ರೂ