ಮನೆ ರಾಜ್ಯ ಮಹಿಳೆಯರಿಗೆ  ಬಸ್ ಪ್ರಯಾಣ ಉಚಿತ: ಮೊದಲ ದಿನ ಪ್ರಯಾಣಿಸಿದವರೆಷ್ಟು ಮಂದಿ ಗೊತ್ತಾ ?

ಮಹಿಳೆಯರಿಗೆ  ಬಸ್ ಪ್ರಯಾಣ ಉಚಿತ: ಮೊದಲ ದಿನ ಪ್ರಯಾಣಿಸಿದವರೆಷ್ಟು ಮಂದಿ ಗೊತ್ತಾ ?

0

ಬೆಂಗಳೂರು:  ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಯಾಗಿದೆ. ನಿನ್ನೆ (ಜೂನ್ 11) ಅಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ  ಡಿಕೆ  ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶಕ್ತಿಯೋಜನೆ ಅಧಿಕೃತವಾಗಿ ಚಾಲನೆ ನೀಡಿದ್ದರು.

Join Our Whatsapp Group

ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ನಿನ್ನೆ(ಭಾನುವಾರ) ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ವರೆಗೆ ರಾಜ್ಯಾದ್ಯಂತ ಬರೋಬ್ಬರಿ 5.71 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

ಬಿ ಎಂ ಟಿಸಿ ಬಸ್ ನಲ್ಲಿ ಒಟ್ಟು 2,01,215 ಮಹಿಳೆಯರು ಪ್ರಯಾಣ ಮಾಡಿದ್ದರೆ(ಪ್ರಯಾಣಿಕರ ಒಟ್ಟು ಮೌಲ್ಯ 26,19604.00), ವಾಯವ್ಯ ಸಾರಿಗೆ ಬಸ್ ನಲ್ಲಿ 1,22,354 ಮಹಿಳೆಯರು ಹಿಕಟ್ಟಾಗಿ ಮಾಡಿದ್ದರೆ. (ಪ್ರಯಾಣದ ಒಟ್ಟು ಮೌಲ್ಯ ( 36,17,096.00). ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53,623 ಮಹಿಳೆಯರು ಪ್ರಯಾಣ ಮಾಡಿದ್ದಾರೆ(ಪ್ರಯಾಣದ ಒಟ್ಟು ಮೌಲ್ಯ-19.70.0000.00). ನಿನ್ನೆ ಸಾರಿಗೆ ಬಸ್ ಗಳಲ್ಲಿ ಒಟ್ಟು 5,71,023 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ದರದ ಟಿಕೆಟ್ ವೆಚ್ಚ 1,40,22,878 ರೂ. ಆಗಿದ್ದು, ಈ ಹಣವನ್ನು ಸರ್ಕಾರವೇ  ಸಾರಿಗೆ  ಸಂಸ್ಥೆಗಳಿಗೆ  ನೀಡಲಿದೆ.

ಮಹಿಳೆಯರು  ಮುಂದಿನ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್  ಪಡೆದುಕೊಳ್ಳಬೇಕು. ಅಲ್ಲಿಯವರೆಗೂ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಾರ್ಡ್ ತೋರಿಸಿ  ಉಚಿತ  ಟಿಕೆಟ್ ಪಡೆದುಕೊಂಡು ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.