ಫ್ರೆಂಚ್ ಓಪನ್ ಸಿಂಗಲ್ಸ್ ನಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿದ್ದಾರೆ.
ಇಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಕಾದಾಟ ನಡೆಸಲಿದ್ದಾರೆ. ಪ್ಯಾರಿಸ್ ನ ರೋಲ್ಯಾಂಡ್ ಗ್ಯಾರೋಸ್ನಲ್ಲಿ ನಡೆದ ಎರಡನೇ ಸೆಮಿಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ 2 ನೇ ಶ್ರೇಯಾಂಕದ ಜರ್ಮನ್ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-3, 6-4, 6-0 ಸೆಟ್ ಗಳಿಂದ ಸೋಲಿಸಿದರು.
ಇದಕ್ಕೂ ಮೊದಲು ಸೆಮಿಫೈನಲ್ ನಲ್ಲಿ ಮೂರನೇ ಶ್ರೇಯಾಂಕದ ಸರ್ಬಿಯಾದ ನೊವಾಕ್ ಜೊಕೊವಿಕ್ 6-3, 5-7, 6-1, 6-1 ಸೆಟ್ಗಳಿಂದ ಅಗ್ರ ಶ್ರೇಯಾಂಕದ ಸ್ಪೇನ್ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದರು. ಜೊಕೊವಿಕ್ ಅವರು ದಾಖಲೆಯ 23ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗೆ ಕೇವಲ ಒಂದು ಹೆಜ್ಜೆ ಹಿಂದೆಯಿದ್ದಾರಷ್ಟೆ.