ಮನೆ ಜ್ಯೋತಿಷ್ಯ ಜೇಷ್ಠ ಮಾಸದ ಫಲಗಳು

ಜೇಷ್ಠ ಮಾಸದ ಫಲಗಳು

0

ಜೇಷ್ಠ  ಈ ದಿನ ದಿನ ಮಂಗಳವಾರ,ಬುಧವಾರ, ಅಥವಾ ರವಿವಾರವಾದರೆ ಈ ತಿಂಗಳಲ್ಲಿ ಜನರು ರೋಗಪೀಡೆಯುಂಟಾಗುವುದು. ಗುರು -ಶುಕ್ರ- ಸೋಮವಾರಗಳಾದರೆ ಈ ಮಾಸದಲ್ಲಿ ವಿಶೇಷ ಮಳೆಯಾಗುವುದು. ಈ ಮಾಸದ ಶುದ್ಧ 7 ರಂದು ಆಕಾಶವು ಮೋಡದಿಂದ ಮುಸುಕಿದ್ದರೆ, ಅಥವಾ ಮೋಡ ಗರ್ಜನೆ  ಮಾಡಿದರೆ ಇಲ್ಲವೇ ದಕ್ಷಿಣ ದಿಕ್ಕಿನಿಂದ ಗಾಳಿ ಬೀಸತೊಡಗಿದರೆ, ಈ ಲಕ್ಷಣಗಳಲ್ಲಿ ಯಾವುದೇ ಲಕ್ಷಣ ಕಂಡು ಬಂದರೂ ಈ ಮಾಸದಲ್ಲಿ ಎಳ್ಳನ್ನು ಖರೀದಿಸಿ, ಇಟ್ಟುಕೊಂಡು ಕಾರ್ತಿಕ ಮಾಸದಲ್ಲಿ ಮಾರಿದರೆ ತುಂಬಾ ಲಾಭವಾಗುವುದು.

Join Our Whatsapp Group

ಇದೆ ಜೇಷ್ಠ ಮಾಸ ಶು.15 ರಂದು ಗ್ರಹಣ ಮಳೆ ಚಂದ್ರ ಸೂರ್ಯರಿಗೆ ಕಣ ಕಟ್ಟೋಣ, ಆಕಾಶದಲ್ಲಿ ಮಿಂಚುಗಳುಂಟಾದರೆ ಈ ಮಾಸದದಲ್ಲಿ ಆಹಾರ ಧಾನ್ಯ ದಿಗಳನ್ನು ಸಂಗ್ರಹಿಸಿ, ಶ್ರಾವಣ- ಭಾದ್ರಪದ  ಮಾಸಗಳಲ್ಲಿ ಮಾರಿದರೆ ತುಂಬಾ ಲಾಭವಾಗುವುದು. ಜೇಷ್ಠ ಶು. 3 ಭಾನುವಾರ ಬಂದರೆ ಜೋಳ, ನವಣೆ, ರಾಗಿ, ಸಜ್ಜೆ, ಮೊದಲಾದವರನ್ನು ತೇಜಿಯಲ್ಲಿ ಮುಂದುವರೆಯುತ್ತವೆ.

ಬಟ್ಟೆ, ನೂಲು, ಹತ್ತಿ, ಹರಳೆ,  ಕಂಬಳಿ ಇವು ಹೆಚ್ಚಿನ ತೇಜಿಯಲ್ಲಿ ನಡೆಯುವವು ಈ ಮಾಸದಲ್ಲಿ ಶು.7, ಬ, 10 ಈ ದಿನ ಶನಿವಾರ ಬಂದರೆ ಎಳ್ಳು ಗುರೆಳ್ಳು, ಉದ್ದು, ಹೆಸರು, ಕೇಲ ಗಿರಾಣಿ ಸಾಮಾನುಗಳನ್ನು ಆ ದಿನ ತೇಜಿಯಾಗುತ್ತವೆ.