ಮನೆ ಕ್ರೀಡೆ ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ ಜಸ್ಟಿನ್ ಗ್ಯಾಟ್ಲಿನ್

ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ ಜಸ್ಟಿನ್ ಗ್ಯಾಟ್ಲಿನ್

0

ವಾಷಿಂಗ್ಟನ್​: ಡೋಪಿಂಗ್ ವಿವಾದಗಳಿಂದ ಬೇಸತ್ತಿದ್ದ ಶರವೇಗದ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ತಮ್ಮ ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

2004ರ ಅಥೆನ್ಸ್ ಒಲಿಂಪಿಕ್ಸ್‌ ಕ್ರೀಡಾಕೂಟದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ 40 ವರ್ಷದ ಓಟಗಾರ ಇನ್ಸ್ಟಾಗ್ರಾಮ್​ನಲ್ಲಿ ‘ಡಿಯರ್ ಟ್ರ್ಯಾಕ್’ ಎಂದು ಪೋಸ್ಟ್​ ಮಾಡುವ ಮೂಲಕ ನಿವೃತ್ತಿ ವಿಚಾರ ತಿಳಿಸಿದ್ದಾರೆ.

ಡಿಯರ್‌ ಟ್ರ್ಯಾಕ್​ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನೀನು ನನಗೆ ದುಃಖ ಮತ್ತು ಸಂತೋಷದ ಕಣ್ಣೀರನ್ನು ನೀಡಿದ್ದಿಯಾ. ಇಲ್ಲಿ ಕಲಿತ ಪಾಠಗಳನ್ನು ಎಂದಿಗೂ ಮರೆಯಲಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಜಮೈಕಾದ ಕ್ರೀಡಾ ದಂತಕಥೆ ಉಸೈನ್ ಬೋಲ್ಟ್ ವಿರುದ್ಧ ದಾಖಲಿಸಿದ ಅಪರೂಪದ ಜಯ ಗ್ಯಾಟ್ಲಿನ್ ಅವರ ಬದುಕಿನ ಮೈಲುಗಲ್ಲಾಗಿತ್ತು. 2019ರಲ್ಲಿ ದೋಹಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕ ಪರವಾಗಿ ಕಣಕ್ಕಿಳಿದಿದ್ದ ಗ್ಯಾಟ್ಲಿನ್ 4×100ಮೀ ರಿಲೇಯಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಹಿಂದಿನ ಲೇಖನಕಂದಕಕ್ಕೆ ಉರುಳಿದ ಬಸ್: 20 ಮಂದಿ ಸಾವು, 33 ಜನರಿಗೆ ಗಾಯ
ಮುಂದಿನ ಲೇಖನಅಪ್ಪು ನಟನೆಯ ಜೇಮ್ಸ್ ಚಿತ್ರದ ಟೀಸರ್ ರಿಲೀಸ್