ಮನೆ ಕಾನೂನು ಹೆಸರು ಬದಲಾಯಿಸಿಕೊಳ್ಳುವುದು ವ್ಯಕ್ತಿಯ ಮೂಲಭೂತ ಹಕ್ಕು: ಹೈಕೋರ್ಟ್ ಮಹತ್ವದ ತೀರ್ಪು

ಹೆಸರು ಬದಲಾಯಿಸಿಕೊಳ್ಳುವುದು ವ್ಯಕ್ತಿಯ ಮೂಲಭೂತ ಹಕ್ಕು: ಹೈಕೋರ್ಟ್ ಮಹತ್ವದ ತೀರ್ಪು

0

ತನ್ನ ಹೆಸರನ್ನು ಬದಲಾಯಿಸುವ ಹಕ್ಕು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

Join Our Whatsapp Group

ತಮ್ಮ ಆಯ್ಕೆಯ ಹೆಸರನ್ನು ಇಟ್ಟುಕೊಳ್ಳಲು ಸಮೀರ್ ರಾವ್ ಎಂಬುವರು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ಭಾನೋಟ್ ಅವರು ಈ ತೀರ್ಪು ನೀಡಿದ್ದಾರೆ.

ಅರ್ಜಿದಾರರ ಹೆಸರನ್ನು ಶಹನವಾಜ್‌ ಎಂಬ ಹೆಸರಿನ ಬದಲು ಎಂಡಿ ಸಮೀರ್ ರಾವ್ ಎಂದು ಬದಲಾಯಿಸಲು ಮತ್ತು ಹೊಸದಾಗಿ 10 ನೇ ತರಗತಿ ಮತ್ತು 12 ನೇ ತರಗತಿ ಪ್ರಮಾಣಪತ್ರಗಳನ್ನು ಈ ಬದಲಾವಣೆಯ ಹೆಸರಿನೊಂದಿಗೆ ನೀಡಲು ಅರ್ಜಿದಾರರ ಅರ್ಜಿಯನ್ನು ಅನುಮತಿಸುವಂತೆ ಹೈಕೋರ್ಟ್ ಪ್ರತಿವಾದಿಗಳಿಗೆ ನಿರ್ದೇಶಿಸಿದೆ.

ಉತ್ತರಪ್ರದೇಶ ಪ್ರೌಢಶಾಲೆ ಮತ್ತು ಮಧ್ಯಂತರ ಶಿಕ್ಷಣ ಮಂಡಳಿಯು ಹೈಸ್ಕೂಲ್ ಮತ್ತು ಇಂಟರ್ಮೀಡಿಯೇಟ್ ಪರೀಕ್ಷೆಯ ಪ್ರಮಾಣಪತ್ರಗಳಲ್ಲಿ ಹೆಸರನ್ನು ಬದಲಾಯಿಸಲು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಅರ್ಜಿದಾರರು ಈ ಕ್ರಮವನ್ನ ಪ್ರಶ್ನಿಸಿದ್ದರು.

ಮೇ 25 ರಂದು ತನ್ನ ತೀರ್ಪಿನಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಆಯ್ಕೆಯ ಹೆಸರನ್ನು ಇಡುವ ಅಥವಾ ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ಹೆಸರನ್ನು ಬದಲಾಯಿಸುವ ಹಕ್ಕು ಭಾರತದ ಸಂವಿಧಾನದ ಆರ್ಟಿಕಲ್ 19(1)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಆರ್ಟಿಕಲ್ 21 (ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಮತ್ತು ಆರ್ಟಿಕಲ್ 14 (ಸಮಾನತೆಯ ಹಕ್ಕು) ವ್ಯಾಪ್ತಿಯಲ್ಲಿ ಬರುತ್ತದೆ ಎಂದು ತೀರ್ಪು ನೀಡಿದೆ. ಅರ್ಜಿದಾರರ ಮನವಿ ತಿರಸ್ಕಾರ ಮಾಡಿರುವುದು ಈ ಆರ್ಟಿಕಲ್ ನಡಿ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ ಎಂದು ನ್ಯಾಯಾಲಯ ಹೇಳಿದೆ.