ಮನೆ ಕಾನೂನು ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಗೆ ಬಿಗ್ ರಿಲೀಫ್: ಜೂ.20ರವರೆಗೆ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಗೆ ಬಿಗ್ ರಿಲೀಫ್: ಜೂ.20ರವರೆಗೆ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

0

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಅವರಿಗೆ ಒಸಿಐ ಮಾನ್ಯತೆ ರದ್ದಾಗುವ ವಿಚಾರವಾಗಿ ಹೈಕೋರ್ಟ್ ಮತ್ತೆ ಬಿಗ್ ರಿಲೀಫ್ ನೀಡಿದೆ. ಇಂದು ತಡೆಯಾಜ್ಞೆಯನ್ನು ಜೂನ್.20ರವರೆಗೆ ವಿಸ್ತರಿಸಿ ರಿಲೀಫ್ ನೀಡಿದೆ.

Join Our Whatsapp Group

ನಟ ಚೇತನ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರು ಉಲ್ಲೇಖಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ, ಕೇಂದ್ರ ಗೃಹ ಸಚಿವಾಲಯ ಭಾರತದ ಸಾಗರೋತ್ತರ ನಾಗರಿಕ ( OCI) ವೀಸಾವನ್ನು ರದ್ದುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಅವರಿಗೆ ಒಸಿಐ ವೀಸಾ ರದ್ದು ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಲಾಗಿತ್ತು.

ಇಂದಿನವರೆಗೆ ಅವರ ಒಸಿಐ ವೀಸಾ ರದ್ದತಿ ಮೇಲಿನ ತಡೆಯಾಜ್ಞೆ ನೀಡಲಾಗಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು, ಜೂನ್.20ರವರೆಗೆ ತಡೆಯಾಜ್ಞೆಯನ್ನು ವಿಸ್ತರಿಸಿದೆ. ಈ ಮೂಲಕ ನಟ ಚೇತನ್ ಗೆ ಮತ್ತೆ ರಿಲೀಫ್ ಸಿಕ್ಕಂತೆ ಆಗಿದೆ.

ಅಂದಹಾಗೇ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಆರೋಪ, ಭಾರತ ವಿರೋಧಿ ಚಟುವಟಿಕೆಗಳಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನೋಟಿಸ್ ನೀಡಿ ಉತ್ತರಗಳನ್ನು ನಟ ಚೇತನ್ ನಿಂದ ಪಡೆದಿತ್ತು.

ಆದ್ರೇ ನಟ ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲದ ಹಿನ್ನಲೆಯಲ್ಲಿ ಒಸಿಐ ಕಾರ್ಡ್ ರದ್ದುಪಡಿಸಿ ಆದೇಶಿಸಿತ್ತು. ಇದನ್ನು ಹೈಕೋರ್ಟ್ ನಲ್ಲಿ ನಟ ಚೇತನ್ ಪ್ರಶ್ನಿಸಿದ್ದ ಹಿನ್ನಲೆಯಲ್ಲಿ ಇಂದಿನವರೆಗೆ ರದ್ದಿನ ಮೇಲೆ ತಡೆಯಾಜ್ಞೆಯನ್ನು ವಿಧಿಸಲಾಗಿತ್ತು.

ಮತ್ತೆ ಗಡಿಪಾರು ಭೀತಿಯಲ್ಲಿದ್ದಂತ ಅವರು, ಹೈಕೋರ್ಟ್ ಗೆ ಒಸಿಐ ವೀಸಾ ರದ್ದು ಮೇಲಿನ ತಡೆಯಾಜ್ಞೆಯನ್ನು ವಿಸ್ತರಿಸುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ಇಂದು ಹೈಕೋರ್ಟ್ ಜೂನ್.20ರವರೆಗೆ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದೆ.

ಹಿಂದಿನ ಲೇಖನಹೆಸರು ಬದಲಾಯಿಸಿಕೊಳ್ಳುವುದು ವ್ಯಕ್ತಿಯ ಮೂಲಭೂತ ಹಕ್ಕು: ಹೈಕೋರ್ಟ್ ಮಹತ್ವದ ತೀರ್ಪು
ಮುಂದಿನ ಲೇಖನಯಾಕೆ ಕಾಕುಲಾತಿ ಪಡುವೆ