ಗದಗ: ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿ ರುಂಡ ಸಮೇತ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನಿನೊಂದರಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಮಾಳೆಕೊಪ್ಪ ಗ್ರಾಮದ ನಿವಾಸಿ ಬಾಲಪ್ಪ ಕೊಪ್ಪದ ಮೃತ ವ್ಯಕ್ತಿ.
ಮೆಣಸಿನಕಾಯಿ ತೋಟದ ಕಾವಲುಗಾರನಾಗಿದ್ದ ರೈತ ಕಾರ್ಮಿಕನನ್ನು ಹಂತಕರು ಕೊಲೆ ಮಾಡಿ ರುಂಡ ಕದ್ದೊಯ್ದಿದ್ದಾರೆ.
ಗ್ರಾಮದಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಹೆಚ್ಚಾದ ಹಿನ್ನಲೆ ಜಮೀನು ಕಾವಲು ಕಾಯಲು ಬಾಲಪ್ಪ ಅವರನ್ನು ನೇಮಿಸಲಾಗಿತ್ತು. ತೋಟದಲ್ಲಿದ್ದ ಮೆಣಸಿನಕಾಯಿ ನೋಡಿಕೊಳ್ಳಲು ಬಾಲಪ್ಪ ಅವರು ಅಲ್ಲೇ ಗುಡಿಸಲಲ್ಲಿ ಮಲಗುತ್ತಿದ್ದರು. ಹೀಗೆ ಮಲಗಿದ್ದ ವೇಳೆ ದಿಢೀರ್ ತೋಟಕ್ಕೆ ಲಗ್ಗೆ ಇಟ್ಟ ದುಷ್ಕರ್ಮಿಗಳು ರೈತ ಕಾರ್ಮಿಕ ಬಾಲಪ್ಪನ ಕೊಲೆ ಮಾಡಿ ರುಂಡ ಕತ್ತರಿಸಿ ಮೃತ ದೇಹ ಬಿಟ್ಟು ರುಂಡ ಸಮೇತ ಎಸ್ಕೇಪ್ ಆಗಿದ್ದಾರೆ. ರೈತ ಕಾರ್ಮಿಕನ ಭೀಕರ ಹತ್ಯೆಗೆ ಇಡೀ ಗದಗ ಜಿಲ್ಲೆ ರೈತರು ಬೆಚ್ಚಿಬಿದ್ದಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Saval TV on YouTube