ಮನೆ ರಾಜ್ಯ ಕಟ್ಟೆದೊಡ್ಡಿಯಲ್ಲಿ ಬೀಡುಬಿಟ್ಟಿರುವ ಗಜಪಡೆ

ಕಟ್ಟೆದೊಡ್ಡಿಯಲ್ಲಿ ಬೀಡುಬಿಟ್ಟಿರುವ ಗಜಪಡೆ

0

ಮಂಡ್ಯ:ಚಿಕ್ಕಮಂಡ್ಯ ಬಳಿಯಿದ್ದ 5 ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸೋಮವಾರ ರಾತ್ರಿಯಿಡೀ ನಡೆಯಿತಾದರೂ ಮುಂಜಾನೆ 3 ಗಂಟೆ ವೇಳೆಗೆ ಭೂತನಹೊಸೂರು ಗ್ರಾಮದ ಹೆಬ್ಬಾಳದವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.ಬಳಿಕ ಅಧಿಕಾರಿಗಳ ಕಣ್ತಪ್ಪಿಸಿ 10 ಕಿ.ಮೀ ದೂರದ ತಾಲ್ಲೂಕಿನ ಕಟ್ಟೆದೊಡ್ಡಿ ಗ್ರಾಮದವರೆಗೆ ತಲುಪಲಷ್ಟೇ ಸಾಧ್ಯವಾಗಿದೆ.


ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ಕಟ್ಟೆದೊಡ್ಡಿ ಗ್ರಾಮದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ನೋಡಲು ಜನರು ಮುಗಿ ಬಿದ್ದಿದ್ದಾರೆ.ಸೋಮವಾರ ರಾತ್ರಿ ಕಾರ್ಯಾಚರಣೆ ವೇಳೆ ಬೂದನೂರು ರೈಲ್ವೇ ಟ್ರ್ಯಾಕ್ ಬಳಿ ಆನೆಗಳು ಸಿಕ್ಕಿ ಹಾಕಿಕೊಂಡ ಹಿನ್ನೆಲೆಯಲ್ಲಿ ಕೆಲ ಕಾಲ ಕಾರ್ಯಾಚರಣೆ ತಡವಾಯಿತು. ಮರಿ ಆನೆಯೊಂದು ಇರುವ ಕಾರಣ ಕಾಡಿಗಟ್ಟುವ ಕಾರ್ಯಾಚರಣೆ ವಿಳಂಬವಾಗುತ್ತಿದೆ.
ಬೆಂಗಳೂರಿನಿಂದ ಆಗಮಿಸಿರುವ ಇಸ್ರೇಲ್ ತಂತ್ರಜ್ಞಾನ ಪರಿಣಿತ ಅಧಿಕಾರಿಗಳ ತಂಡ ಆನೆಗಳನ್ನು ಕಾಡಿಗಟ್ಟುವ ಕುರಿತು ತಂತ್ರಗಳನ್ನು ರೂಪಿಸುತ್ತಿದ್ದಾರೆ.ಶಾಸಕ ಪಿ.ರವಿಕುಮಾರ್ ಗಣಿಗ ಅವರು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯಾಚರಣೆ ವೇಳೆ ಉಸ್ತುವಾರಿ ನೋಡಿಕೊಂಡರು.ಬೆಳಿಗ್ಗೆ 9 ಗಂಟೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಚೈತ್ರಾ ಹಾಗೂ ಸಿಬ್ಬಂದಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

ಹಿಂದಿನ ಲೇಖನಕಾಡಿನಲ್ಲಿ ಸಿಗುವ ಹಣ್ಣಿನ ಶರಬತ್ತು ಮಾಡಿ ಕುಡಿದ  ಮಹಿಳೆ ಸಾವು
ಮುಂದಿನ ಲೇಖನಪ್ರಜ್ವಲ್‌ ದೇವರಾಜ್‌ ನಟನೆಯ ‘ಮಾಫಿಯಾ’ ಚಿತ್ರದ ಡಬ್ಬಿಂಗ್ ಮುಕ್ತಾಯ