ಮನೆ ಮನರಂಜನೆ ಡಿ.27ಕ್ಕೆ ‘ಗಜರಾಮ’ ಸಿನಿಮಾ ಬಿಡುಗಡೆ

ಡಿ.27ಕ್ಕೆ ‘ಗಜರಾಮ’ ಸಿನಿಮಾ ಬಿಡುಗಡೆ

0

ಸುನಿಲ್‌ ಕುಮಾರ್‌ ವಿ.ಎ. ನಿರ್ದೇಶನದ, ‘ಬಿಚ್ಚುಗತ್ತಿ’ ಸಿನಿಮಾ ಖ್ಯಾತಿಯ ರಾಜವರ್ಧನ್ ನಾಯಕರಾಗಿ ನಟಿಸಿರುವ ‘ಗಜರಾಮ’ ಸಿನಿಮಾ ಡಿ.27ಕ್ಕೆ ಬಿಡುಗಡೆಯಾಗಲಿದೆ.

Join Our Whatsapp Group

ಇತ್ತೀಚೆಗೆ ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಮಾಡುವ ಮುಖಾಂತರ ಚಿತ್ರತಂಡ ಬಿಡುಗಡೆ ದಿನಾಂಕ ಘೋಷಿಸಿದೆ. ಈ ಹಾಡಿಗೆ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ, ಮನೋಮೂರ್ತಿ ಸಂಗೀತ ನಿರ್ದೇಶನವಿದ್ದು, ಹೇಮಂತ್ ಧ್ವನಿಯಾಗಿದ್ದಾರೆ. ಇದು ಸುನೀಲ್ ಕುಮಾರ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾ. ಲವ್ ಸ್ಟೋರಿ ಹಾಗೂ ಮಾಸ್ ಆ್ಯಕ್ಷನ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ರಾಜವರ್ಧನ್‌ಗೆ ಜೋಡಿಯಾಗಿ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟಿಸಿದ್ದಾರೆ. ಶಿಷ್ಯ ದೀಪಕ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

ಖಳನಟನಾಗಿ ‘ಪೈಲ್ವಾನ್’ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ನಟಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸಂತು, ‘ಮಜಾ ಟಾಕೀಸ್’ ಪವನ್, ವಿಜಯ್ ಚೆಂಡೂರು ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ.

‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್‌ನಡಿ ನರಸಿಂಹಮೂರ್ತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಚಿತ್ರಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯವಿದೆ.