‘ಗಾನವ’ನೆಂಬುದು ಒಬ್ಬ ಮುನಿ. ವಿಶ್ವಾಮಿತ್ರನಶಿಷ್ಯರಲ್ಲೊಬ್ಬ ಈ ಆಸನವನ್ನು ಆ ಮುನಿಯ ಹೆಸರಿಗೆ ಮೀಸಲಾಗಿದೆ.
ಅಭ್ಯಾಸ ಕ್ರಮ:
1. ಮೊದಲು, ‘ಸಲಾಂಬಶೀರ್ಷಾಸನ’ವನ್ನು ಮಾಡಬೇಕು.
2. ಬಳಿಕ,ಬಲಪಾದವನ್ನು ಎಡ ತೊಡೆಯ ಮೂಲಕ್ಕೂ ಆಮೇಲೆ ಎಡಪದವನ್ನು ಬಲತೊಡೆಯ ಮೂಲಕ್ಕೂ ಸೇರಿಸಿ ‘ಪದ್ಮಾಸನ’ದ ಭಂಗಿಗೆ ಬರಬೇಕು.ಆಮೇಲೆ ಉಸಿರನ್ನು ಹೊರಕ್ಕೆಬಿಟ್ಟು ಮುಂಡವನ್ನು ಭಾಗಿಸಿ ತೊಡೆಗಳು ಎದೆ ಹೊಟ್ಟೆಯ ಭಾಗಗಳನ್ನು ಮುಟ್ಟುವಂತಿರಬೇಕು.
3. ಆಮೇಲೆ,ಕೆಲವು ಸಲ ಉಸಿರಾಟ ನಡೆಸಿ, ಮುಂಡವನ್ನು ಬಲಪಕ್ಕಕ್ಕೆ ತಿರುಗಿಸಿ ಬಳಿಕ ಉಸಿರನ್ನು ಹೊರದೂಡುತ್ತ ಮಡಿಸಿಟ್ಟ ಕಾಲೆರಡನ್ನೂ ಕೆಳಗಿಳಿಸಿ ಅವನ್ನು ಆದಷ್ಟು ಕಂಕುಳಿನ ಬಳಿ ಬಲಗೈಮೇಲ್ದೋಳಿನವ ಹಿಂಬದಿಯನ್ನು ಮುಟ್ಟುವಂತಿರಬೇಕು ಭಂಗಿಯನ್ನು ಸ್ಥಿರಗೊಳಿಸಿ ಕೆಲವು ಸಲ ಆಳವಾಗಿ ಉಸಿರಾಟ ನಡೆಸಿ ಸಮತೋಲನ ಸ್ಥಿತಿಗೆ ತರಬೇಕು.
4. ಮತ್ತೆ ಉಸಿರನ್ನು ಹೊರಕ್ಕೆ ಬಿಟ್ಟು ತಲೆಯನ್ನು ನೆಲದಿಂದ ಮೇಲೆತ್ತುವುದರ ಮೂಲಕ ದೇಹವನ್ನು ಮೇಲೆ ಸೆಳೆದಿಟ್ಟು ವಪೆಯೆಂಬ ಪೊರೆಯ ಬಳಿಯ ಮಾಂಸ ಖಂಡಗಳನ್ನು ಬಿಗಿಗೊಳಿಸಿ ಕೈಗಳನ್ನು ನೇರವಾಗಿ ಸಿ ಅವುಗಳ ಮೇಲೆ ಸಮತೋಲಿಸಿ ಈ ಸ್ಥಿತಿಯನ್ನು ಕೆಲವು ಲಕ್ಷಣಗಳ ಕಾಲ ನೆಲೆಸಬೇಕು ಈ ಭಂಗಿಯಲ್ಲಿ ಯಾವ ಆಸರೆಯೂ ಇಲ್ಲದೆ ಪ್ರತ್ಯೇಕವಾಗಿರುವಂತೆ ತೋರುವ ಎಡಭುಜ ಮತ್ತು ಎಡ ತೋಳುಗಳೇ ಹೆಚ್ಚು ಶ್ರಮವನ್ನ ಅನುಭವಿಸುತ್ತವೆ.
5. ಆಮೇಲೆ,ಮೊಣಕೈಗಳನ್ನು ಬಗಿಸಿ ತಲೆಯನ್ನು ನೆಲದ ಮೇಲೂರಗಿಸಿ ‘ಪದ್ಮಾಸನ’ದಲ್ಲಿಯ ಕಾಲುಗಳು ಹೆಣಿಗೆಯನ್ನು ಬಿಚ್ಚದಂತೆಯೇ ಮತ್ತೆ ಸಾಲಂಬಶಿರ್ಷಾಸನ ಎರಡಾದ ಕ್ಕೇರಿಸಬೇಕು ಇಕ್ಕೇರಿಸಬೇಕು.
6. ಇದಾದ ಬಳಿಕ, ಉಸಿರನ್ನು ಹೊರಕ್ಕೆಬಿಟ್ಟು ಮುಂಡವನ್ನು ಬಾಗಿಸಿ ಕಾಲುಗಳನ್ನು ಎಡಗೈ ಮೇಲ್ದೋಳಿನ ಹಿಂಬದಿಗೊರಗಿಸಿಟ್ಟು ಈ ಹಿಂದೆ ಬಲಗೈ ಮೇಲೆ ಮಾಡಿದಂತೆಯೇ ಎಡಗೈ ಮೇಲೆಯೂ ದೇಹವನ್ನು ಸಮತೋರಿಸಬೇಕು
7. ಆನಂತರ ಮೊಣಕೈಗಳನ್ನು ಬಾಗಿಸಿ ತಲೆಯನ್ನು ನೆಲದ ಮೇಲೆ ಒರಗಿಸಿಟ್ಟು,ಮತ್ತೆ ಸಲಾಂಬಶಿರ್ಷಾಸನ ಎರಡಾರದ ಭಂಗಿಗೇರಿಸಿ ಕಾಲುಗಳ ಬಂಧವನ್ನು ಬಿಚ್ಚಬೇಕು ಮತ್ತೆ ‘ಪದ್ಮಾಸನ’ದ ಭಂಗಿಯನ್ನನುಗೊಳಿಸಿ ಅಂದರೆ ಈಗ ಎಡಪದವನ್ನು ಬಲತೊಡೆಯ ಮೂಲಕ್ಕೂ ಬಳಿಕ ಬಲಪಾದವನ್ನು ಎಡತೊಡೆಯ ಮೂಲಕ್ಕೂ ಸೇರಿಸಿಟ್ಟು ಮೇಲೆ ವಿವರಿಸಿದ ಕ್ರಮವನ್ನೇ ಅನುಸರಿಸಿ ಭಂಗಿಯನ್ನು ಮತ್ತೆ ಮಾಡಿ ಮುಗಿಸಬೇಕು.
8. ಆಮೇಲೆ ತಲೆಯನ್ನು ನೆಲದ ಮೇಲೊರಗಿಸಿ, ಅನಂತರ ‘ಸಲಾಂಬ ಶ್ರಿರ್ಷಾಸನ ಎರಡಾ’ದ ಭಂಗಿಗೆ ಬರಬೇಕು. ಬಳಿಕ ಕಾಲುಗಳನ್ನು ನೆಲೆಕ್ಕಿಳಿಸಿ ವಿಶ್ರಮಿಸಿಕೊಳ್ಳಬೇಕು .ಇಲ್ಲವೆ ನಾನು ಇಲ್ಲವೆ ‘ಊರ್ಧ್ವ ಧನುರಾಸನ’ವನ್ನು ಅಭ್ಯಸಿಸಿ ’ತಾಂಡಾಸನದ’ ಭಂಗಿಗೆ ಬಂದು ನಿಲ್ಲಬೇಕು. ಅಭ್ಯಾಸಿಯು ’ವಿಪರೀತ ಚಕ್ರಾಸನ’ದಲ್ಲಿ ನೈಪುಣ್ಯವನ್ನು ಗಳಿಸಿದಾಗ, ’ಉರ್ಧ್ವ ಧನುರಾಸನ’ವನ್ನು ಅಭ್ಯಸಿಸಿದ ಬಳಿಕ ಈ ವ್ಯಾಯಾಮವು ಶಾಂತಿಯನ್ನು ಅನುಗೊಳಿಸುತ್ತದೆ.
ಪರಿಣಾಮಗಳು :
ಈ ಆಸನ ಭಂಗಿಯನ್ನು ಬಿಡದೆ ಅಭ್ಯಸಿಸುವುದರಿಂದ ಮಣಿಕಟ್ಟುಗಳೂ ಮತ್ತು ಕಿಬ್ಬೊಟ್ಟೆಯೊಳಗಿನ ಅಂಗಗಳೂ ಹೆಚ್ಚು ಬಲಗೊಳ್ಳುವುದಲ್ಲದೆ,ಕಿಬ್ಬಟ್ಟೆಯಲ್ಲಿಯ ಪಕ್ಕದ ಮಾಂಸಖಂಡಗಳು ಬಲಗೊಳ್ಳುತ್ತವೆ. ಈ ಭಂಗಿಯು ‘ಶೀರ್ಷಾಸನ’ ‘ಪದ್ಮಾಸನ’ ಮತ್ತು ಪಶ್ಚಿಮೋತ್ತಾಸನ ಇವುಗಳಿಂದ ದೊರಕುವ ಫಲಗಳನ್ನು ಕೊಡುತ್ತದೆ.