ಮನೆ ಸ್ಥಳೀಯ ಗಾಂಧಿ ಚಿತ್ರ ರಚನಾ ಸ್ಪರ್ಧೆ: ಮಹಾತ್ಮ ಗಾಂಧಿ ಎಂಬ ಹೆಸರೇ ಒಂದು ಆದರ್ಶ – ಅಶೋಕ್...

ಗಾಂಧಿ ಚಿತ್ರ ರಚನಾ ಸ್ಪರ್ಧೆ: ಮಹಾತ್ಮ ಗಾಂಧಿ ಎಂಬ ಹೆಸರೇ ಒಂದು ಆದರ್ಶ – ಅಶೋಕ್ ಕುಮಾರ್

0

ಮೈಸೂರು: ಗಾಂಧೀಜಿ ಎಂಬ ಹೆಸರೇ ಒಂದು ಆದರ್ಶ ಆ ಹೆಸರೇ ಒಂದು ಅಗಾಧ ಶಕ್ತಿ ಅವರೊಬ್ಬ ಆದರ್ಶ ವ್ಯಕ್ತಿ. ಅವರು ನಾಡಿಗೆ ನೀಡಿದ ಕೊಡುಗೆ ಅಪಾರವಾದದ್ದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಅಶೋಕ್ ಕುಮಾರ್ ಡಿ ಅವರು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಹೊಸಹುಂಡಿ ಇವರ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಚಿತ್ರ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗಾಂಧೀಜಿ ಅವರ ಜೀವನವು ಒಂದು ಶ್ರೇಷ್ಠ ಪುಸ್ತಕದಂತೆ, ಪ್ರತಿಯೊಬ್ಬರೂ ಗಾಂಧಿಯನ್ನು ಓದಿಕೊಳ್ಳಬೇಕು. ಗಾಂಧಿಯನ್ನು ಓದಿಕೊಂಡರೆ ಜೀವನ ಮಾರ್ಗವನ್ನು ಓಡಿಕೊಂಡoತೆ.ಸತ್ಯ ಅಹಿಂಸೆಯ ಪ್ರತಿಪಾದಕರಾಗಿದ್ದ ಅವರು ಸ್ವಾತಂತ್ರ‍್ಯ ಹೋರಾಟದ ನೇತಾರರು,ಭಲಿಷ್ಠ ಬ್ರಿಟಿಷ್ ಸೈನ್ಯವನ್ನ ಅಹಿಂಸೆಯಿಂದ ಮಣಿಸಿದವರು ಎಂದರು.

ಗಾಂಧೀಜಿ ಅವರ ಸರಳತೆ, ನೇರನುಡಿ ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ತತ್ವಗಳನ್ನು ನಮ್ಮ ಜೀವನದಲ್ಲೂ ನಾವು ಅಳವಡಿಸಿಕೊಂಡು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರತಿ ವರ್ಷವೂ ಕೂಡ ಗಾಂಧೀಜಿಯವರ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಗಾಂಧೀಜಿ ಅವರ ಚಿತ್ರ ರಚನೆ ಮತ್ತು ಅವರ ಜೀವನ ಸಾಧನೆ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು . ಪ್ರತಿ ಜಿಲ್ಲೆಯಲ್ಲಿಯೂ ಕೂಡ ಗಾಂಧೀಜಿ ಅವರ ನೆನಪಿನ ಗಾಂಧಿಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಮಹಮ್ಮದ್ ಶರೀಫ್ ರವರು ಮಾತನಾಡಿ ಗಾಂಧೀಜಿಯವರ ಜೀವನವು ಪ್ರತಿಯೊಬ್ಬರಿಗೂ ಆದರ್ಶವಿದ್ದಂತೆ. ಅವರ ಜೀವನದಲ್ಲಿನ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಾವು ಕೂಡ ಮಹಾತ್ಮ ರ ಅಂಶಗಳನ್ನು ಅಳವಡಿಸಿಕೊಳ್ಳುವ ಕಡೆ ಹೆಜ್ಜೆ ಇಡಬಹುದಾಗಿದೆ.

ಮಹಾತ್ಮ ಗಾಂಧೀಜಿಯವರು ಆಫ್ರಿಕಾ ಗೆ ಹೋಗಿದ್ದ ಸಂದರ್ಭದಲ್ಲಿ ಅವರ ಜೀವನ ಶೈಲಿಯೇ ವಿಭಿನ್ನವಾಗಿತ್ತು ಅವರು ಧರಿಸಿದ್ದ ಉಡುಪುಗಳು ಕೂಡ ಶಿಸ್ತುಬದ್ಧವಾಗಿದ್ದವು. ಅವರ ಜೀವನ ಶೈಲಿಯನ್ನು ಕೂಡ ಶಿಸ್ತುಬದ್ಧವಾಗಿ ನಡೆಸುತ್ತಿದ್ದರು. ಮಹಾತ್ಮ ಗಾಂಧಿ ಎಂಬುದು ದೇಶದ ಹೆಸರಲ್ಲ ಅದು ರಾಷ್ಟ್ರದ ಪ್ರತೀಕ ಎಂದರು.

ಶಾಲೆಯ ಸಹ ಶಿಕ್ಷಕರು ಮಾತನಾಡಿ ಮಹಾತ್ಮ ಗಾಂಧಿ ಅವರ ಜೀವನ ಪ್ರತಿಯೊಬ್ಬ ಮಕ್ಕಳಿಗೂ ತಿಳಿಸಿದೆ. ಪ್ರತಿವರ್ಷ ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸುವುದು ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ಜೀವನವನ್ನು ಅರಿಯಲು ಉಪಯುಕ್ತವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗಾಂಧಿ ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ.ಎಂ.ಸಿ ಅಧ್ಯಕ್ಷರಾದ ರವಿಕುಮಾರ್ ಮತ್ತು ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.