ವಿಶ್ವಕಪ್ ಸನಿಹವಾಗುತ್ತಿದ್ದಂತೆ ವಿಶ್ವ ಕ್ರಿಕೆಟ್ ನ ಮಾಜಿ ಆಟಗಾರರು ತಮ್ಮ ತಮ್ಮ ನೆಚ್ಚಿನ ತಂಡದಲ್ಲಿ ಯಾರೆಲ್ಲ ಇರಬೇಕು ಎಂಬುದನ್ನು ಊಹಿಸಲಾರಂಭಿಸಿದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಈ ಸಾಲಿಗೆ ಸೇರ್ಪಡೆಗೊಂಡಿದ್ದು, ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ಗೆ ದಾದಾ ಖ್ಯಾತಿಯ ಗಂಗೂಲಿ 15 ಸದಸ್ಯರ ಟೀಂ ಇಂಡಿಯಾವನ್ನು ಹೆಸರಿಸಿದ್ದಾರೆ.
ಈ ಬಾರಿಯ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರ ವಿಚಾರ. ಒಟ್ಟು 10 ತಂಡಗಳ ಈ ಮೆಗಾ ಈವೆಂಟ್ ಭಾರತದ 10 ಸ್ಥಳಗಳಲ್ಲಿ ನಡೆಯಲ್ಲಿದ್ದು, ಒಟ್ಟು 48 ಪಂದ್ಯಗಳು ಈ ಪಂದ್ಯಾವಳಿಯಲ್ಲಿ ನಡೆಯಲ್ಲಿವೆ.
ಈ ವಿಶ್ವಕಪ್ಗೆ ಟೀಂ ಇಂಡಿಯಾದ ತಯಾರಿ ಟೂರ್ನಿಯಿಂದೇ ಬಿಂಬಿತವಾಗಿರುವ ಏಷ್ಯಾಕಪ್ ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಟೂರ್ನಿಗೆ ಆಯ್ಕೆಯಾಗಿರುವ ಭಾಗಶಃ ಆಟಗಾರರೇ ವಿಶ್ಚಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
15 ಆಟಗಾರರಿಗೆ ಅವಕಾಶ
ಹೀಗಾಗಿ ಏಷ್ಯಾಕಪ್ ತಂಡಕ್ಕೆ ಆಯ್ಕೆಯಾಗಿರುವ 17 ಸದಸ್ಯರ ತಂಡದಲ್ಲೇ ತಮ್ಮ ವಿಶ್ವಕಪ್ ತಂಡಕ್ಕೆ ಗಂಗೂಲಿ, ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ತಮ್ಮ ತಂಡದಲ್ಲಿ 15 ಆಟಗಾರರಿಗೆ ಅವಕಾಶ ನೀಡಿರುವ ಗಂಗೂಲಿ, ಏಷ್ಯಾಕಪ್ ತಂಡದಲ್ಲಿ ಆಯ್ಕೆಯಾಗಿರುವ ಇಬ್ಬರು ಯುವ ಆಟಗಾರರಾದ ತಿಲಕ್ ವರ್ಮಾ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ತಮ್ಮ ತಂಡದಲ್ಲಿ ಅವಕಾಶ ನೀಡಿಲ್ಲ.
ಇಬ್ಬರು ಯುವ ಆಟಗಾರರಿಗೆ ಗೇಟ್ ಪಾಸ್
ಒಂದೇ ಒಂದು ಏಕದಿನ ಪಂದ್ಯವನ್ನಾಡದ ತಿಲಕ್ ವರ್ಮಾಗೆ ಏಷ್ಯಾಕಪ್ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ ಮಧ್ಯಮ ಕ್ರಮಾಂಕ್ಕೆ ಶ್ರೇಯಸ್ ಅಯ್ಯರ್ ಮರಳಿರುವುದರಿಂದ ತಿಲಕ್ ಗೆ ಏಷ್ಯಾಕಪ್ ಹಾಗೂ ವಿಶ್ವಕಪ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ಕಷ್ಟ. ಹೀಗಾಗಿ ಗಂಗೂಲಿ, ತಿಲಕ್ ರನ್ನು ತಮ್ಮ ತಂಡದಿಂದ ಹೊರಗಿಟ್ಟಿದ್ದಾರೆ. ಹಾಗೆಯೇ ಟೀಂ ಇಂಡಿಯಾಕ್ಕೆ ಬೌಲಿಂಗ್ ಆಲ್ರೌಂಡರ್ ಗಳ ಅವಶ್ಯಕತೆ ಇರುವುದರಿಂದ ಅನಾನುಭವಿ ಪ್ರಸಿದ್ಧ್ ಕೃಷ್ಣರನ್ನು ಕಡೆಗಣಿಸಿರುವ ದಾದಾ, ಅವರ ಬದಲಿಗೆ ಬೌಲಿಂಗ್ ಆಲ್ ರೌಂಡರ್ ಹಾಗೂ ಅನುಭವಿ ಶಾರ್ದೂಲ್ ಠಾಕೂರ್ ಗೆ ತಂಡದಲ್ಲಿ ಅವಕಾಶ ನೀಡಿದ್ದಾರೆ.
ಬ್ಯಾಟಿಂಗ್ ವಿಭಾಗ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್
ವಿಕೆಟ್ ಕೀಪರ್ಸ್: ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್
ಆಲ್ ರೌಂಡರ್ ಗಳು: ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮತ್ತು ಅಕ್ಷರ್ ಪಟೇಲ್
ಸ್ಪಿನ್ ವಿಭಾಗ: ಕುಲ್ದೀಪ್ ಯಾದವ್
ಬೌಲಿಂಗ್ ವಿಭಾಗ: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್.
ವಿಶ್ವಕಪ್ ಗೆ ಗಂಗೂಲಿ ಆಯ್ಕೆ ಮಾಡಿರುವ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), KL ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀ