ಮನೆ ರಾಜ್ಯ ನಟ ಅರ್ಜುನ್‌ ಸರ್ಜಾರಿಗೆ ಮಾತೃ ವಿಯೋಗ

ನಟ ಅರ್ಜುನ್‌ ಸರ್ಜಾರಿಗೆ ಮಾತೃ ವಿಯೋಗ

0

ಬೆಂಗಳೂರು (Bengaluru): ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ (84) ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು ಇತ್ತೀಚೆಗೆ ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀದೇವಿ ಅವರು ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮೀದೇವಿ ಅವರ ಅಂತ್ಯಕ್ರಿಯೆಯನ್ನು ಮಧುಗಿರಿ ಬಳಿಯಿರುವ ತಮ್ಮ ಹಳ್ಳಿಯಲ್ಲಿ ನಡೆಸುವುದಾಗಿ ಅರ್ಜುನ್ ಸರ್ಜಾ ತಿಳಿಸಿದ್ದಾರೆ.

ಲಕ್ಷ್ಮೀದೇವಿ ಅವರು ಖ್ಯಾತ ನಟ ಶಕ್ತಿ ಪ್ರಸಾದ್ ಅವರ ಪತ್ನಿ. ಲಕ್ಷ್ಮಿದೇವಿ ಮತ್ತು ಶಕ್ತಿ ಪ್ರಸಾದ್ ದಂಪತಿಗೆ ಮೂವರು ಮಕ್ಕಳು. ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದರು. ಪುತ್ರರ ಪೈಕಿ ಕಿಶೋರ್ ಸರ್ಜಾ 2009ರಲ್ಲಿ ನಿಧನರಾಗಿದ್ದರು.

ಹಿಂದಿನ ಲೇಖನಜು. 25 ರಂದು ʻಲಕ್ಕಿ ಮ್ಯಾನ್‌ʼಚಿತ್ರದ ಟೀಸರ್ ರಿಲೀಸ್‌: ಪುನೀತ್‌ ರಾಜ್‌ ಕುಮಾರ್‌ ರ ದೇವರ ರೂಪ ಅನಾವರಣ
ಮುಂದಿನ ಲೇಖನದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯ: ಇಂಗ್ಲೆಂಡ್‌ ಗೆ 118 ರನ್‌ ಗಳ ಜಯ