ಕುಸ್ತಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಮೂಡಿಬಂದ ಸಿನಿಮಾಗಳ ಸಂಖ್ಯೆ ಕಡಿಮೆ. ಅವುಗಳ ಸಾಲಿನಲ್ಲಿ ‘ಗರಡಿ’ ಸಿನಿಮಾ ಕೂಡ ಸೇರಿಕೊಂಡಿದೆ. ಹೆಸರೇ ಹೇಳುವಂತೆ ಇದು ಪೈಲ್ವಾನರ ಕಥೆ. ಅದರಲ್ಲಿ ಪ್ರೇಮಕಥೆಯೂ ಇದೆ. ಮೋಜು ಮಸ್ತಿಗೂ ಜಾಗ ಸಿಕ್ಕಿದೆ.
ಯಶಸ್ ಸೂರ್ಯ, ಸುಜಯ್ ಬೇಲೂರು, ಸೋನಲ್ ಮಾಂತೆರೋ, ರವಿಶಂಕರ್ ಮುಂತಾದ ಕಲಾವಿದರು ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದಿದ್ದಾರೆ. ಹಾಡು, ಫೈಟ್, ಕಾಮಿಡಿ ಮುಂತಾದ ಮಸಾಲೆಗಳನ್ನು ಬೆರೆಸಿ ನಿರ್ದೇಶಕ ಯೋಗರಾಜ್ ಭಟ್ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ.
‘ಗರಡಿ’ ಒಂದು ಮಸಾಲಾ ಭರಿತ ಸಿನಿಮಾ. ಕಥೆಯ ಶುರುವಿನಲ್ಲಿಯೇ ಪೈಲ್ವಾನನ ಕೊಲೆ. ಅದರಿಂದ ಪ್ರೇಕ್ಷಕರ ಕೌತುಕ ಹೆಚ್ಚುತ್ತದೆ. ಕೊಲೆಯಾದ ಪೈಲ್ವಾನನ ಇಬ್ಬರು ಗಂಡು ಮಕ್ಕಳು ಗರಡಿಯಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ. ಆ ಮಕ್ಕಳ ಮೈಯಲ್ಲಿ ಪೈಲ್ವಾನನ ರಕ್ತ ಹರಿಯುತ್ತಿದ್ದರೂ ಕೂಡ ಅವರು ಕುಸ್ತಿಯ ಅಖಾಡಕ್ಕೆ ಇಳಿಯುವಂತಿಲ್ಲ. ಅಂಥ ಪರಿಸ್ಥಿತಿ ಬರಲು ಕಾರಣ ಏನು? ಆ ಮಕ್ಕಳು ದೊಡ್ಡವರಾದ ಬಳಿಕ ಪ್ರೀತಿಯಲ್ಲಿ ಬಿದ್ದರೆ ಏನಾಗುತ್ತದೆ? ಪ್ರೀತಿಯ ಸಲುವಾಗಿ ಕುಸ್ತಿ ಆಡಲೇಬೇಕಾದ ಅನಿವಾರ್ಯತೆ ಬಂದರೆ ಅದನ್ನು ಹೀರೋ ಹೇಗೆ ನಿಭಾಯಿಸುತ್ತಾನೆ ಎಂಬುದೇ ‘ಗರಡಿ’ ಸಿನಿಮಾದ ಕಥೆ.
ನಿರ್ದೇಶಕ ಯೋಗರಾಜ್ ಭಟ್ ಎಂದ ತಕ್ಷಣ ಒಂದು ಬಗೆಯ ಸಿನಿಮಾಗಳು ನೆನಪಿಗೆ ಬರುತ್ತವೆ. ವಟವಟ ಅಂತ ಮಾತಾಡುತ್ತಲೇ ಇರುವ ಹೀರೋ, ಊರೂರು ಸುತ್ತುವ ಪಾತ್ರಗಳು, ಕಣ್ಮನ ಸೆಳೆಯುವ ಲೊಕೇಷನ್ಗಳು, ಹೃದಯದಾಳಕ್ಕೆ ಇಳಿಯುವ ಹಾಡುಗಳು.. ಇವೆಲ್ಲ ಭಟ್ಟರ ಟ್ರೇಡ್ ಮಾರ್ಕ್. ಆದರೆ ಅವರು ಅದೊಂದೇ ಶೈಲಿಗೆ ಕಟ್ಟು ಬಿದ್ದಿಲ್ಲ. ಕ್ರೀಡೆಯನ್ನು ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಮಾಡುವಲ್ಲಿಯೂ ಅವರು ಆಸಕ್ತಿ ತೋರಿಸಿದ್ದುಂಟು. ಈ ಹಿಂದೆ ‘ಪಂಚತಂತ್ರ’ ಸಿನಿಮಾದಲ್ಲಿ ಕಾರ್ ರೇಸ್ ಹೈಲೈಟ್ ಆಗಿತ್ತು. ಅದೇ ರೀತಿ ಈಗ ‘ಗರಡಿ’ ಸಿನಿಮಾದಲ್ಲಿ ಕುಸ್ತಿಯೇ ಕೇಂದ್ರ ಸ್ಥಾನವನ್ನು ಅಲಂಕರಿಸಿದೆ.
ಒಂದು ಕಾಲದಲ್ಲಿ ಹಳೆಯ ಸೂತ್ರಗಳನ್ನೆಲ್ಲ ಬದಿಗೊತ್ತಿ, ತಮ್ಮದೇ ಶೈಲಿಯಲ್ಲಿ ‘ಮುಂಗಾರು ಮಳೆ’ ಸುರಿಸಿ, ‘ಗಾಳಿಪಟ’ ಹಾರಿಸಿ, ‘ಮನಸಾರೆ’ ಮನರಂಜನೆ ನೀಡಿ, ಒಂದಷ್ಟು ‘ಡ್ರಾಮಾ’ ಮಾಡಿದ ಕಾರಣದಿಂದಲೇ ಯೋಗರಾಜ್ ಭಟ್ ಅವರು ಡಿಫರೆಂಟ್ ಎನಿಸಿಕೊಂಡಿದ್ದರು. ಆದರೆ ‘ಗರಡಿ’ ಸಿನಿಮಾದಲ್ಲಿ ಅವರು ಯಾವುದೇ ಪ್ರಯೋಗ ಮಾಡಿಲ್ಲ. ತುಂಬ ಹಳೇ ಸಿನಿಮಾಗಳ ಸಿದ್ಧ ಸೂತ್ರವನ್ನೇ ಫಾಲೋ ಮಾಡಿದ್ದಾರೆ. ಆ ಕಾರಣದಿಂದ ಇದು ಹತ್ತರಲ್ಲಿ ಹನ್ನೊಂದನೆಯ ಸಿನಿಮಾ ಎನಿಸಿಕೊಳ್ಳುತ್ತದೆ. ಸುಲಭವಾಗಿ ಊಹಿಸಬಹುದಾದ ಕಥೆ ಇದರಲ್ಲಿದೆ. ಅದರ ನಡುವೆಯೂ ಈ ಸಿನಿಮಾದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಅಂಶ ಎಂದರೆ ಅದು ಕುಸ್ತಿ.
ನಟ ಯಶಸ್ ಸೂರ್ಯ ಅವರಿಗೆ ‘ಗರಡಿ’ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಅಗತ್ಯ ಇರುವಾಗ ಮಾತ್ರ ಅಬ್ಬರಿಸಿ, ಇನ್ನುಳಿದ ಸಮಯದಲ್ಲಿ ಸೈಲೆಂಟ್ ಆಗಿ ಇರುವಂತಹ ಈ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ನಟಿ ಸೋನಲ್ ಮಾಂತೆರೋ ಅವರು ಎಂದಿನಂತೆ ಸುಂದರವಾಗಿ ಕಾಣಿಸಿಕೊಂಡು, ಉತ್ತಮವಾಗಿ ನಟಿಸಿದ್ದಾರೆ. ಗರಡಿ ಮನೆಯ ಗುರುವಿನ ಪಾತ್ರದಲ್ಲಿ ಹಿರಿಯ ನಟ ಬಿ.ಸಿ. ಪಾಟೀಲ್ ಅವರದ್ದು ಖಡಕ್ ಅಭಿನಯ. ವಿಲನ್ ಪಾತ್ರದಲ್ಲಿ ಆರ್ಭಟಿಸಿದ್ದಾರೆ ಪಿ. ರವಿಶಂಕರ್. ಮೊದಲೇ ತಿಳಿದಿರುವಂತೆ ಈ ಸಿನಿಮಾದಲ್ಲಿ ದರ್ಶನ್ ಅವರದ್ದು ಅತಿಥಿ ಪಾತ್ರ. ಪ್ರೇಕ್ಷಕರ ಊಹೆಯಂತೆಯೇ ಅವರು ಕ್ಲೈಮ್ಯಾಕ್ಸ್ನಲ್ಲಿ ಬಂದು ಆ್ಯಕ್ಷನ್ ಪ್ರಿಯರಿಗೆ ಮನರಂಜನೆ ನೀಡುತ್ತಾರೆ. ನಟ ಧರ್ಮಣ್ಣ ಅವರು ನಗಿಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಟಿಸಿರುವ ಸುಜಯ್ ಬೇಲೂರು ಅವರು ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ.
ನಟಿ ನಿಶ್ವಿಕಾ ನಾಯ್ಡು ಅವರು ‘ಹೊಡಿರಲೆ ಹಲಗಿ..’ ಹಾಡಿನಲ್ಲಿ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನಿಂದ ಕಥೆಗೆ ಹೆಚ್ಚೇನೂ ಉಪಯೋಗ ಆಗಿಲ್ಲ. ಕಥೆಯಿಂದ ಹೊರಗಿಟ್ಟು ಪ್ರತ್ಯೇಕ ಗೀತೆಯಾಗಿ ನೋಡಿದರೆ ಪಡ್ಡೆಗಳಿಗೆ ಈ ಸಾಂಗ್ ಮಸ್ತ್ ಮನರಂಜನೆ ನೀಡುತ್ತದೆ. ‘ಅನಿಸಬಹುದು ನಿನಗೆ ಇದು ತುಂಬ ಸಣ್ಣ ವಿಷಯ..’ ಹಾಡು ಕಥಾನಾಯಕನ ಪರಿಸ್ಥಿತಿಯನ್ನು ತೆರೆದಿಡುತ್ತದೆ. ಆದರೆ ಆತನ ಪ್ರೀತಿಯ ತೀವ್ರತೆಯನ್ನು ಕಟ್ಟಿಕೊಡಲು ಇಷ್ಟು ಮಾತ್ರ ಸಾಲದು ಎನಿಸುತ್ತದೆ. ಹರಿಕೃಷ್ಣ ಅವರು ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಶ್ರಮ ಹಾಕಿ ‘ಗರಡಿ’ ಗಮ್ಮತ್ತು ಹೆಚ್ಚಿಸಬಹುದಿತ್ತು.
ವಿಜಯನಗರ ವಾರ್ಡ್ ನಂಬರ್ 20ರಲ್ಲಿ ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.