ಮನೆ ಅಪರಾಧ ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

0

ದಾವಣಗೆರೆ: ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ, ಐವರಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

Join Our Whatsapp Group

ಗುರುವಾರ ಬೆಳಗ್ಗೆ ಸೌಭಾಗ್ಯ (35) ಮೃತಪಟ್ಟರೆ, ಬುಧವಾರ ರಾತ್ರಿ ಪಾರ್ವತಮ್ಮ (45) ಎಂಬುವರು ಮೃತ ಪಟ್ಟಿದ್ದರು.

ಮಂಗಳವಾರ ರಾತ್ರಿ ಹೊರ ವಲಯದ ಎಸ್ ಒ ಜಿ ಕಾಲೋನಿಯ ಮಲ್ಲೇಶಪ್ಪ ಎಂಬುವರ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಪಾರ್ವತಮ್ಮ ಗಂಭೀರ ವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದರು. ಗುರುವಾರ ಬೆಳಗ್ಗೆ ಸೌಭಾಗ್ಯ ಸಾವನ್ನಪ್ಪಿದ್ದಾರೆ.

ಮಲ್ಲೇಶಪ್ಪ ಅವರ ಪಕ್ಕದ ಮನೆಯ ಪಾರ್ವತಮ್ಮ ಗ್ಯಾಸ್ ಲೀಕ್ ಆಗಿದೆ ಎಂಬುದನ್ನು ನೋಡಲಿಕ್ಕೆ ಬಂದ ಸಂದರ್ಭದಲ್ಲಿ ಸ್ಫೋಟವಾಗಿತ್ತು.

ಘಟನೆಯಲ್ಲಿ ಗಾಯಗೊಂಡ ಲಲತಮ್ಮ (50), ಮಲ್ಲೇಶಪ್ಪ (60), ಪ್ರವೀಣ್ (35) ಚಿಕಿತ್ಸೆ ಪಡೆಯುತ್ತಿದ್ದಾರೆ. ಲಲಿತಮ್ಮ ಸ್ಥಿತಿ ಚಿಂತಾಜನಕವಾಗಿದೆ.

ಸಿಲಿಂಡರ್ ಸ್ಟೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಹಾರಿ ಹೋಗಿತ್ತು. ಗ್ಯಾಸ್ ಲೀಕ್ ಆಗಿದೆ ಎಂಬುದು ಗೊತ್ತಿದ್ದರೂ ಸ್ವಿಚ್ ಆನ್ ಮಾಡಿದ್ದೇ ದುರಂತಕ್ಕೆ ಕಾರಣವಾಗಿತ್ತು.

ಹಿಂದಿನ ಲೇಖನರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಜು.18ವರವರೆಗೆ ನ್ಯಾಯಾಂಗ ಬಂಧನ
ಮುಂದಿನ ಲೇಖನಬಿಬಿಎಂಪಿ ಕಲ್ಯಾಣ ಇಲಾಖೆ ಹಗರಣ: ಪಶ್ಚಿಮ ವಲಯ ಜಂಟಿ ಅಯುಕ್ತರ ವರ್ಗಾವಣೆ