ಮನೆ ಮನೆ ಮದ್ದು ಗ್ಯಾಸ್ಟ್ರಿಕ್ (ಅನಿಲ ಶೇಖರಣೆ)

ಗ್ಯಾಸ್ಟ್ರಿಕ್ (ಅನಿಲ ಶೇಖರಣೆ)

0

1. ಕಾಯಿಪಲ್ಲೆಗಳನ್ನು ನಾವು ಬಳಸುವಾಗ ಹಸಿಶುಂಠಿಯನ್ನು ಅವುಗಳೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸುವುದರಿಂದ ಕರುಳಿನಲ್ಲಿ ಅನಿಲ ಶೇಖರಣೆ ಕಡಿಮೆ ಆಗುತ್ತದೆ.

Join Our Whatsapp Group

2. ಕಾಯಿಪಲ್ಲೆಗಳನ್ನು ನಾಲಿಗೆಯ ರುಚಿಗಾಗಿ ಹೆಚ್ಚಾಗಿ ಬಳಸಿದಾಗಲೂ ಗ್ರಾಸ್ಟ್ರಿಕ್ ತೊಂದರೆ ಆಗುವ ಸಂಭವ ಕಂಡುಬಂದರೆ ಹಸಿ ಶುಂಠಿಯನ್ನು ಅರೆದು, ಅದರ ರಸವನ್ನು ಜೇನುತುಪ್ಪದಲ್ಲಿ ಆಗಲೀ ಹಾಲಿನಲ್ಲಾಗಲಿ ಸೇವಿಸಿದರೆ ಗ್ಯಾಸ್ಟ್ರಿಕ್ ದೋಷ ನಿವಾರಣೆ ಆಗುವುದು.

3. ಪ್ರತಿನಿತ್ಯವೂ ಬೆಳ್ಳುಳ್ಳಿ ಉಪಯೋಗಿಸುತ್ತಿದ್ದರೆ ಗ್ಯಾಸ್ಟ್ರಿಕ್ ತೊಂದರೆಯಿಂದ ಪಾರಾಗಬಹುದು.

4. ಅಡಿಗೆ ಸೋಡ ಬೆರೆಸಿದ ನೀರಿನಲ್ಲಿ ಅವರೆಕಾಳನ್ನು ನೆನೆ ಹಾಕಿ, ಹಸಿಯಾಗಿಯೇ ತಿಂದರೆ ಗ್ಯಾಸ್ಟ್ರಿಕ್ ರೋಗದಿಂದ ದೂರ ಇರಬಹುದು.

5. ಹಿಂಗನ್ನು ಮಿತವಾಗಿ ಬಳಸುವುದರಿಂದಲೂ ಗ್ಯಾಸ್ಟ್ರಿಕ್ ರೋಗ ನಿವಾರಣೆ ಆಗುವುದು.

ಗಂಟಲು ನೋವು: 

1. ಬೇವಿನ ಸೊಪ್ಪಿನ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ, ಬಿಸಿ ಮಾಡಿ, ಗಂಟಲಿಗೆ ಹಾಕಿಕೊಂಡು, ಬಾಯಿ ಮುಕ್ಕಳಿಸುತ್ತಿದ್ದರೆ ಗಂಟಲು ನೋವು ಕಡಿಮೆ ಆಗುವುದು.

2. ಗಂಟಲು ಒಡೆದ ಮಾತನಾಡಲು ಕಷ್ಟ ಆದಾಗ ಸ್ವಲ್ಪ ಶುಂಠಿ, ಒಂದು ಲವಂಗ ಮತ್ತು ಮೂರು ನಾಲ್ಕು ಉಪ್ಪಿನ ಹರಳನ್ನು ಆಗಿದು ಚಪ್ಪರಿಸುತ್ತಿದರೆ ಗಂಟಲು ನೋವು ಕಡಿಮೆ ಆಗುವುದು.

3. ಇದೇ ರೀತಿ ಮಳೆಗಾಲದಲ್ಲಿ ನೆನೆದು ದೆಹಾಲಸ್ಯ ಆದಾಗಲೂ ಮಾಡಿದಾಗ ದೇಹಾಲಸ್ಯ ಕಡಿಮೆ ಆಗುವುದರ ಜೊತೆಗೆ ಹೊಸ ಹುರುಪು ಬರುವುದು.

4. ದಾಳಿಂಬೆ ಹಣ್ಣಿನ ದಿಂಡನ್ನು ಬೇಯಿಸಿ,ತಯಾರಿಸಿದಾಗ ಕಷಾಯಕ್ಕೆ ಉಪ್ಪು ಸೇರಿಸಿ, ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಬೇಗ ಗುಣ ಆಗುವುದು.

5. ಹಸಿ ಮೂಲಂಗಿಯ ಸೇವನೆಯಿಂದಲೂ ಗಂಟಲು ನೋವು ನಿವಾರಣೆ ಕೊಳ್ಳಬಹುದು.

6. ಪುದಿನ ಸೊಪ್ಪಿನ ಕಷಾಯ ಮಾಡಿ ಕುಡಿದರೆ, ಗಂಟಲು ನೋವಿಗೆ ತ್ವರಿತ ಪರಿಹಾರ ದೊರೆಯುವುದು.