ಮನೆ ಯೋಗಾಸನ ಘೇರಂಡಾಸನ

ಘೇರಂಡಾಸನ

0

ಈ ಆಸನದಲ್ಲಿ ಒಂದು ಕಡೆಯ ತೋಳು ಮತ್ತು ಕಾಲು ‘ಬದ್ಧಪದ್ಮಾಸನ’ದ ಭಂಗಿಯಲ್ಲಿಯೂ, ಇನ್ನೊಂದು ಪಕ್ಕದ ತೋಳು ಮತ್ತು ಕಾಲು ‘ಪಾದಾಂಗುಷ್ಟ ಧನುರಾಸನ’ದ ಬಂಗಿಯಲ್ಲಿಯೂ ಇಡಬೇಕು.

Join Our Whatsapp Group

ಅಭ್ಯಾಸ ಕ್ರಮ :

  1. ಮೊದಲು ನೆಲದಮೇಲೆ ಕುಳಿತು ಕಾಲುಗಳನ್ನು ಮುಂಗಡೆಗೆ ಚಾಚಿಡಬೇಕು.ಬಳಿಕ ಬಲಪಾದವನ್ನು ಎಡತೊಡೆಯ ಮೂಲಕ್ಕೆ ಸೇರಿಸಿ, ಆಮೇಲೆ ನೆಲದ ಮೇಲೆ ಬೆನ್ನೊರಗಿಸಿ ಚಪಟ್ಟೆಯಾಗಿ ಮಲಗಬೇಕು.
  2. ಈಗ ಬಲಗಾಲಿನ ಸ್ಥಾನವನ್ನು ಕದಲಿಸದೆ ಹೊಟ್ಟೆಯ ಮೇಲೆ ಹೊರಳಾಡಬೇಕು. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ಬಲತೋಳನ್ನು ಭುಜದಿಂದ ಹಿಂದಕ್ಕೆ ಸರಿಸಿ, ಬಲಗೈಯಿಂದ ಬಲಗಾಲಿನ ಉಂಗುಟವನ್ನು ಹಿಡಿದುಕೊಳ್ಳಬೇಕು. ಈಗ ಬಲತೋಳು ಮತ್ತು ಬಲಗಾಲು ‘ಬದ್ಧ ಪದ್ಮಾಸನ’ದ ಭಂಗಿಯಲ್ಲಿರುತ್ತವೆ..ಆ ಬಳಿಕ ಕೆಲವು ಸಲ ಉಸಿರಾಟ ನಡೆಸಿ ತಲೆ,ಎದೆಗಳನ್ನು ನೆಲದಿಂದ ಮೇಲೆತ್ತಬೇಕು.
  3. ಮತ್ತೆ ಉಸಿರನ್ನು ಹೊರದೂಡಿ, ಎಡಮಂಡಿಯನ್ನು ಭಾಗಿಸಿ ಎಡಗೈಯಿಂದ ಎಡಗಾಲಿನ ಉಂಗುಟವನ್ನು ಹಿಡಿದು, ಈ ಹಿಡಿತವನ್ನು ಸಡಿಲಿಸದೆಯೇ ಎಡಭುಜ ಎಡತೋಳುಗಳನ್ನು ಗುಂಡಾಗಿ ಸುತ್ತಿಸಿ, ಅವೆರಡನ್ನೂ ಮೇಲೆತ್ತಿ ‘ಪಾದಂಗುಷ್ಠ ಧನುರಾಸನ’ದ ಭಂಗಿಗೆ ಬರಬೇಕು.
  4. ಈ ಭಂಗಿಯ ಸ್ಥಿತಿಯಲ್ಲಿ ಸುಮಾರು 15 ಸೆಕೆಂಡುಗಳ ಕಾಲ ನೆಲೆಸಬೇಕು. ಕಿಬ್ಬೊಟ್ಟೆಯ ಮೇಲೆ ನೆಲದ ಒತ್ತಡವಾಗುವುದರಿಂದ ಉಸಿರಾಟವು ವೇಗವಾಗಿಯೂ ಶ್ರಮದಿಂದ ಕೂಡಿದುದಾಗಿಯೂ ಇರುತ್ತದೆ.
  5. ಆ ಬಳಿಕ, ಮತ್ತೆ ಉಸಿರನ್ನು ಹೊರಬಿಟ್ಟು ಕತ್ತನ್ನು ಹಿಗ್ಗಿಸಿ, ತಲೆಯನ್ನು ಬೀಸಿ ಹಿಂದಕ್ಕಿಟ್ಟು ಎಡಮೊಣಕೈ ಮಂಡಿಗಳನ್ನು ಭಾಗಿಸಿ,ಎಡಗಾಲನ್ನು ಕೆಳಕ್ಕೆ ಸೆಳೆದು ಪಾದವು ಬಲಭುಜವನ್ನು ತಾಗುವಂತಿರಬೇಕು.
  6. ಈ ಭಂಗಿಯ ಸ್ಥಿತಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನೆಲೆಸಬೇಕು. ಕಿಬ್ಬೊಟ್ಟೆಯು ಕುಗ್ಗುವುದರಿಂದಲೂ ಅದು ಒತ್ತಡಕ್ಕೆ ಒಳಗಾಗುವುದರಿಂದಲೂ ಉಸಿರಾಟವು ಶ್ರಮದಿಂದ ಕೂಡಿರುತ್ತದೆ.
  7. ಈಗ ಉಸಿರನ್ನು ಹೊರಬಿಡುತ್ತ ಈ ಅಭ್ಯಾಸ ಕ್ರಮದ ಮೂರನೆಯ ಪರಿಚ್ಛೇದದಲ್ಲಿ ವಿವರಿಸಿರುವ ಸ್ಥಿತಿಗೆ ಹಿಂದುಳಿಸಬೇಕು.
  8. ಅನಂತರ, ಪದಗಳಮೇಲಣ ಬಿಗಿತವನ್ನು ಸಡಿಲಿಸಿ, ಕಾಲುಗಳನ್ನು ನೇರವಾಗಿ ಹಿಗ್ಗಿಸಿಟ್ಟು,ಅವನ್ನೂ ಮತ್ತು ಎದೆ, ತಲೆ ಇವನ್ನೂ ನೆಲಕ್ಕೆ ಇಳಿಸಿ, ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಬೇಕು.
  9. ಇನ್ನೊಂದು ಕಡೆಯೂ ಅದೇ ವಿಧವಾದ ಭಂಗಿಯನ್ನು ಮಾಡಿ, ಅದರಲ್ಲಿಯೂ ಅಷ್ಟೇ ಕಾಲ ನೆಲೆಸಬೇಕು. ಇದರಲ್ಲಿ ಎಡತೋಳು, ಎಡಗಾಲು ಇವು ‘ಬದ್ಧಪದ್ಮಾಸನ’ದಲ್ಲಿಯೂ ಬಲತೋಳು,ಬಲಗಾಲು ಯು ‘ಪಾದಾಂಗುಷ್ಠ ಧನುರಾಸನ’ದಲ್ಲಿಯೂ ಇರಬೇಕು. ಇದರ ಅಭ್ಯಾಸಲ್ಲಿ ‘ಬಲ’ ‘ಎಡ’ ಪದಗಳಿಗೆ ’ಎಡ’ ‘ಬಲ’ ಪದಗಳನ್ನು ಕ್ರಮವಾಗಿ ಅಳವಡಿಸಿ ವಿವರಣೆಯನ್ನು ಅನುಸರಿಸಬೇಕು ಪರಿಣಾಮಗಳು : ಈ ಭಂಗಿಯಲ್ಲುಂಟಾಗುವ ಹೆಚ್ಚಿನ ಹಿಗ್ಗುವಿಕೆಯಿಂದ ಬೆನ್ನುದಂಡಿಯ ಪ್ರತಿಯೊಂದು ಎಲುಬೂ ಪ್ರಯೋಜನವನ್ನು ಗಳಿಸುವುದಲ್ಲದೆ, ಶರೀರವೆಲ್ಲವೂ ಬೇಕಾದ ದಿಕ್ಕಿಗೆ ತಿರುಗಬಲ್ಲ ಸ್ಥಿತಿಯನ್ನು ಗಳಿಸುತ್ತದೆ.ಹೊಕ್ಕುಲಿನ ಬಳಿಯಿರುವ ಕಿಬ್ಬೊಟ್ಟೆಯ ಭಾಗವು ಇಡಿ ದೇಹದ ಭಾರವನ್ನು ವಹಿಸುವುದರಿಂದ ಕಿಬ್ಬಟ್ಟಿಯೊಳಗಿನ ಆಯೋರ್ಟಾ ಎಂಬ ಶುದ್ಧ ರಕ್ತನಾಳದ ಮೇಲೆ ಒತ್ತಡವುಂಟಾಗಿ, ಆ ಮೂಲಕ ಈ ಭಾಗದಲ್ಲೆಲ್ಲ ರಕ್ತ ಪರಿಚಲನೆಯು ಚೆನ್ನಾಗಿ ನಡೆದು, ಕಿಬ್ಬೊಟ್ಟೆಯೊಳಗಿನ ಅಂಗಗಳನ್ನು ಆರೋಗ್ಯಸ್ಥಿತಿಯಲ್ಲಿಡುವುದು. ಇದರಿಂದ ಜೀರ್ಣಶಕ್ತಿ ಹೆಚ್ಚುವುದು.ಇದರಲ್ಲಿ ಹೆಗಲೆ ಲುಬುಗಳು ಚೆನ್ನಾಗಿ ಹಿಗ್ಗುವುದರಿಂದ ಆ ಭಾಗಗಳಲ್ಲಿಯ ಕೀಲುಗಳ ಪೆಡುಸನ್ನು ಕಳೆಯುತ್ತದೆ. ಅಲ್ಲದೆ, ಈ ಭಂಗಿಯು ಮಂಡಿಗಳನ್ನು ಸುಭ್ರಗೊಳಿಸಿ, ಸಂಧಿವಾದಗಳಿಂದುಂಟಾಗುವ ಮಂಡಿಕೀಲುಗಳಲ್ಲಿಯ ನೋವನ್ನು ಹೋಗಲಾಡಿಸುತ್ತದೆ. ಪಾದಗಳ ಮೇಲಿನ ಕೈಗೊಳೊತ್ತಡವು ಪಾದಗಳ ಕಮಾನು ಸ್ಥಿತಿಯನ್ನು ಸರಿಪಡಿಸಿ, ಚಪ್ಪಟೆಪಾದವನ್ನು ಹೋಗಲಾಡಿಸುತ್ತದೆ.ಅಲ್ಲದೆ ಈ ಭಂಗಿಯು ಕಾಲಗಿಣ್ಣುಗಳ ಕೀಲುಗಳಲ್ಲಿ ಶಕ್ತಿ ಮೂಡಿಸುತ್ತದೆ.ಹಿಮ್ಮಡಿಗಳಲ್ಲಿಯ ನೋವನ್ನು ಕಳೆಯುತ್ತದೆ. ಮತ್ತು ಹಿಮ್ಮಡಿಯೆಲುಬಿನ ತಿವಿಮೊನೆಗಳಿಂದ ಪೀಡಿತರಾದವರ ನೋವನ್ನು ಹೋಗಲಾಡಿಸುತ್ತದೆ.