ಮನೆ ರಾಷ್ಟ್ರೀಯ ಬಾಲಕಿಯ ಹತ್ಯೆ ಪ್ರಕರಣ: ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಕ್ಷಮಾದಾನ ಅರ್ಜಿ ವಜಾ

ಬಾಲಕಿಯ ಹತ್ಯೆ ಪ್ರಕರಣ: ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಕ್ಷಮಾದಾನ ಅರ್ಜಿ ವಜಾ

0

ಹೊಸದಿಲ್ಲಿ: 2008ರಲ್ಲಿ ಮಹಾರಾಷ್ಟ್ರದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿ, ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ್ದಾರೆ.

Join Our Whatsapp Group

ಈ ಕುರಿತು ರಾಷ್ಟ್ರಪತಿ ಭವನ ಮಾಹಿತಿ ನೀಡಿದೆ.

ಅಪರಾಧಿ ವಸಂತ್ ಸಂಪತ್ ದುಪುರೆ (55) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು 2017ರ ಮೇ 3ರಂದು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಕೇಂದ್ರ ಗೃಹ ಸಚಿವಾಲಯದ ಮೂಲಕ ಕ್ಷಮಾದಾನ ಅರ್ಜಿಯು ಈ ವರ್ಷ ಮಾ.28ರಂದು ರಾಷ್ಟ್ರಪತಿ ಕಾರ್ಯಾಲಯವನ್ನು ತಲುಪಿತ್ತು.

ಹಿಂದಿನ ಲೇಖನಕೋಲಾರ: ಮತದಾರರಿಗೆ ಹಂಚಲು ಇಟ್ಟಿದ್ದ 4 ಕೋಟಿ ರೂ.ಜಪ್ತಿ
ಮುಂದಿನ ಲೇಖನWhatsApp ಬಳಕೆದಾರರಿಗೆ ‘ಲಾಕ್ ಚಾಟ್’ ಫೀಚರ್!..ಇನ್ನು ನಿರ್ದಿಷ್ಟ ಚಾಟ್ ಲಾಕ್ ಮಾಡಿ …!